Menu

ರಾಜಕೀಯ ಮೀಸಲು: ಮಹಿಳಾ ಸಬಲೀಕರಣವೋ, ಬಿಜೆಪಿ ಶಕ್ತಿವರ್ಧನೆಯೋ?

ರಾಜಕೀಯವಾಗಿ ಮಹಿಳೆಯರಿಗೆ ಶೇ. ೫೦ ಮೀಸಲು ಕಲ್ಪಿಸಬೇಕಾದರೆ. ಲೋಕಸಭೆ ಮತ್ತು ದೇಶದ ಎಲ್ಲ ವಿಧಾನಸಭೆಗಳ ಈಗಿನ ಸೀಟುಗಳ ಪ್ರಮಾಣ ಹೆಚ್ಚಳವಾಗಲೇಬೇಕು. ಆದರೆ ಇದಕ್ಕೆ ಸಂಬಂಧಿಸಿದ ನೀಲನಕ್ಷೆ ಏನು, ಇದರ ಸ್ವರೂಪವೇನು . ಇದರ ಜಾರಿ ಮತ್ತು ಅನುಷ್ಠಾನ ಹೇಗೆ  ಎಂಬಿತ್ಯಾದಿ ವಿವರಗಳು ದೇಶದ ವಿಪಕ್ಷಗಳಿಗೆ ಲಭ್ಯವಿಲ್ಲ. ಎನ್‌ಡಿಎ ಮಿತ್ರಕೂಟದ ಪ್ರಮುಖ ಸಹಭಾಗಿಗಳಾದ ತೆಲುಗುದೇಶಂ ಮತ್ತು ಜೆಡಿಯು ನಾಯಕರಿಗೇ ಈ ಪ್ರಮುಖ ತಿದ್ದುಪಡಿ ಬಗ್ಗೆ ಸೂಕ್ತ ಮಾಹಿತಿ ಇಲ್ಲ

ಪಂಚರಾಜ್ಯಗಳ ಚುನಾವಣೆ ಪ್ರಕ್ರಿಯೆ ಇನ್ನೂ ಮುಗಿದಿಲ್ಲ. ಆದರೂ ಲೋಕಸಭೆಯಲ್ಲಿ ಮಹಿಳಾ ಮೀಸಲು ತಿದ್ದುಪಡಿ ವಿಧೇಯಕ ಮಂಡನೆಗೆ ಮೋದಿ ಸರ್ಕಾರ ಹಾತೊರೆಯುತ್ತಿದೆ ! ಇಡೀ ದೇಶದ ಮಹಿಳೆಯರಿಗೆ ಅನ್ವಯವಾಗುವ ಈ ತಿದ್ದುಪಡಿ ಸಂಬಂಧ ಎಲ್ಲ ರಾಜ್ಯಗಳೂ ಈ ಕುರಿತು ಲೋಕಸಭೆಯಲ್ಲಿ ಚರ್ಚಿಸಬೇಕಲ್ಲವೇ ? ಪ. ಬಂಗಾಳ, ತಮಿಳುನಾಡು, ಅಸ್ಸಾಂ, ಕೇರಳ ಹಾಗೂ ಪುದುಚೇರಿ ರಾಜ್ಯಗಳನ್ನು ಈ ಸಮಯದಲ್ಲಿ ದೂರವಿಟ್ಟು ಲೋಕಸಭೆಯಲ್ಲಿ ಶಾಸನವನ್ನು ಮಾಡುವುದು ಪ್ರಜಾತಂತ್ರ ಮೂಲಬೇರುಗಳನ್ನೇ ಕತ್ತರಿಸುವಂತಹದು.

ಮೊದಲಿಂದಲೂ ಮೋದಿ ಸರ್ಕಾರವು ಈ ಬಗೆಯ ತರಾತುರಿ ನಿರ್ಧಾರಗಳಿಗೆ ಕೈ ಹಾಕುತ್ತಿದೆ . ಇದು ದುರದೃಷ್ಟಕರ. ಶಾಸನಗಳ ತಿದ್ದುಪಡಿ ವಿಚಾರದಲ್ಲಿ ಇದೇನೂ ಮೊದಲಲ್ಲ. ಕಳೆದ ಹದಿನೈದು ವರ್ಷಗಳಲ್ಲಿ ಇಂತಹ ವಿದ್ಯಮಾನಗಳು ಬಹಳಷ್ಟು ಸಂಭವಿಸಿವೆ. ಯಾವುದೇ ಕಾಯಿದೆಯ ತಿದ್ದುಪಡಿಗೂ ಮುನ್ನ ದೇಶದ ಸಂಸತ್ತಿನಲ್ಲಿ ಈ ಕುರಿತು ಚರ್ಚೆ ನಡೆಸುವ ಅವಶ್ಯಕತೆ ಇದೆ. ಅಲ್ಲದೆ ವಿಧೇಯಕವನ್ನು ಆಡಳಿತಾರೂಢ ಪಕ್ಷವು ಸದನದಲ್ಲಿ ಮಂಡಿಸುವ ಮುನ್ನ ಮಾಧ್ಯಮಗಳ ಮೂಲಕ ಇದರ ಆಶಯ ಮತ್ತು ಉದ್ದೇಶಗಳನ್ನು ಜನತೆಗೆ ಮತ್ತು ವಿಪಕ್ಷಗಳಿಗೆ ತಿಳಿಸುವುದೂ ಪ್ರಜಾತಾಂತ್ರಿಕ ಧರ್ಮ. ದೇಶದ ಮಹಿಳೆಯರಿಗ ರಾಜಕೀಯವಾಗಿ ಶೇ. ೫೦ ಮೀಸಲು ನೀಡುವ ಸರ್ಕಾರದ ಆಶಯವನ್ನು ಕಾಂಗ್ರೆಸ್ ಸೇರಿದಂತೆ ಇತರೆ ಎಲ್ಲ ರಾಜಕೀಯ ಪಕ್ಷಗಳೂ ಸ್ವಾಗತಿಸುವುದರಲ್ಲಿ ಸಂದೇಹವಿಲ್ಲ. ಆದರೆ ಮಹಿಳಾ ಮೀಸಲು ಹೆಚ್ಚಳದ ನೆಪದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಕ್ಷೇತ್ರಗಳ ಮರುವಿಂಗಡಣೆ ಮಾಡುವ ಕೆಲಸಕ್ಕೂ ಕೇಂದ್ರ ಸರ್ಕಾರವೀಗ ತೀವ್ರ ಆಸಕ್ತಿ ವಹಿಸಿರುವುದು ಸ್ಪಷ್ಟ . ಒಟ್ಟಿನಲ್ಲಿ ಕೇಂದ್ರಕ್ಕೆ ಈಗ ಬೇಕಿರುವುದು ಮಹಿಳಾ ಮೀಸಲು ವಿಧೇಯಕದಿಂದ ಸ್ತ್ರೀ ಸಬಲೀಕರಣವೋ, ಈ ಮೂಲಕ ನಡೆಯುವ ಕ್ಷೇತ್ರ ಮರುವಿಂಗಡಣೆಯಿಂದ ಲೋಕಸಭೆಯಲ್ಲಿ ಬಿಜೆಪಿಗೆ ಸೀಟುಗಳನ್ನು ಹೆಚ್ಚಿಸುವ ಹಿಡನ್ ಅಜೆಂಡಾ ಸಾಧನೆಯೋ ?

ರಾಜಕೀಯವಾಗಿ ಮಹಿಳೆಯರಿಗೆ ಶೇ. ೫೦ ಮೀಸಲು ಕಲ್ಪಿಸಬೇಕಾದರೆ. ಲೋಕಸಭೆ ಮತ್ತು ದೇಶದ ಎಲ್ಲ ವಿಧಾನಸಭೆಗಳ ಈಗಿನ ಸೀಟುಗಳ ಪ್ರಮಾಣ ಹೆಚ್ಚಳವಾಗಲೇಬೇಕು. ಆದರೆ ಇದಕ್ಕೆ ಸಂಬಂಧಿಸಿದ ನೀಲನಕ್ಷೆ ಏನು, ಇದರ ಸ್ವರೂಪವೇನು, ಇದರ ಜಾರಿ ಮತ್ತು ಅನುಷ್ಠಾನ ಹೇಗೆ ಎಂಬಿತ್ಯಾದಿ ವಿವರಗಳು ದೇಶದ ವಿಪಕ್ಷಗಳಿಗೆ ಲಭ್ಯವಿಲ್ಲ. ಎನ್‌ಡಿಎ ಮಿತ್ರಕೂಟದ ಪ್ರಮುಖ ಸಹಭಾಗಿಗಳಾದ ತೆಲುಗುದೇಶಂ ಮತ್ತು ಜೆಡಿಯು ನಾಯಕರಿಗೇ ಈ ಪ್ರಮುಖ ತಿದ್ದುಪಡಿ ಮತ್ತು ನೂತನ ಶಾಸನದ ಬಗ್ಗೆ ಸೂಕ್ತ ಮಾಹಿತಿ ಇಲ್ಲ .

ಮಹಿಳಾಮೀಸಲು ಹೆಚ್ಚಳಕ್ಕೂ, ಕ್ಷೇತ್ರ ಮರುವಿಂಗಡಣೆಗೂ ನೇರ ಸಂಬಂಧವಿದ್ದು ಇದರ ಬಗ್ಗೆ ಮೋದಿ ಮತ್ತವರ ಸಂಪುಟದ ಪರಮಾಪ್ತರು ಎಲ್ಲವನ್ನೂ ವ್ಯೂಹಾತ್ಮಕವಾಗಿ ಕೈಗೆತಿಕೊಂಡಿರುವುದು ಸಂದೇಹಗಳಿಗೆ ಎಡೆಮಾಡಿಕೊಟ್ಟಿದೆ. ಕ್ಷೇತ್ರ ಮರುವಿಂಗಡಣೆ ಕೇವಲ ರಾಜಕೀಯ ಹಿತಾಸಕ್ತಿಗಳ ಕೇಂದ್ರೀಕೃತಕ್ಕೆ ಕಾರಣವಾಗಬಾರದು. ಕರ್ನಾಟಕದಲ್ಲಿ ನಿಗದಿತ ಪ್ರಮಾಣಕ್ಕಿಂತಲೂ ಅಧಿಕ ಲೋಕಸಭೆ ಸೀಟುಗಳನ್ನು ಹೆಚ್ಚಿಸುವ ಮೋದಿ ಸರ್ಕಾರದ ಉದ್ದೇಶವೇನು ಎಂಬುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೀಗ ಪ್ರಶ್ನಿಸಿರುವುದು ಸಮಂಜಸವಾಗಿದೆ. ತನಗೆ ಬಹುಮತ ಇದೆಯೆಂದು ಕೇಂದ್ರ ಸರ್ಕಾರ ದೇಶದ ಸಂಸತ್ ಅನ್ನು ತನಗಿಷ್ಟ ಬಂದ ರೀತಿಯಲ್ಲಿ ಬಳಕೆ ಮಾಡುವಂತಿಲ್ಲ. ಈ ದೇಶದ ಸಂವಿಧಾನದ ಮೂಲಸ್ವರೂಪವನ್ನು ನೆಲಸಮಗೊಳಿಸುವಂತಹ ಶಾಸನಗಳು ಒಂದು ವೇಳೆ ರಚನೆಯಾದರೂ ಅದು ನ್ಯಾಯಾಲಯದ ದೃಷ್ಟಿಯಲ್ಲಿ ಇದು ಊರ್ಜಿತವಾಗುವುದು ಅತಿಕಷ್ಟ.

Related Posts

Leave a Reply

Your email address will not be published. Required fields are marked *