ಕೇಂದ್ರ ಸರ್ಕಾರವು ಅಗತ್ಯ ಔಷಧಗಳ ಬೆಲೆ ಪರಿಷ್ಕರಣೆ ಪ್ರಕಟಿಸಿ ಈ ವರ್ಷ ಶೇಕಡ 0.6ರಷ್ಟು ದರ ಹೆಚ್ಚಳಕ್ಕೆ ಅವಕಾಶ ನೀಡಿದೆ. ಅಗತ್ಯ ಔಷಧಗಳ ಪಟ್ಟಿಯಲ್ಲಿರುವ 1000ಕ್ಕೂ ಹೆಚ್ಚು ಔಷಧಗಳಿಗೆ ಪರಿಷ್ಕೃತ ದರ ಅನ್ವಯವಾಗಲಿದೆ.
ನೋವು ನಿವಾರಕಗಳು, ಆಂಟಿಬಯಾಟಿಕ್ಸ್, ಸೋಂಕು ನಿವಾರಕಗಳು, ಮಧುಮೇಹ ನಿರೋಧಕ ಔಷಧಗಳು ಮತ್ತು ಕ್ಯಾನ್ಸರ್ ಔಷಧಗಳ ಬೆಲೆ ಶೇಕಡ 0.6 ರಷ್ಟು ಹೆಚ್ಚಾಗಲಿದೆ. ಹೊಸ ದರಗಳು ಏಪ್ರಿಲ್ 1, 2026ರಿಂದ ಜಾರಿಗೆ ಬರಲಿವೆ. ಅಗತ್ಯ ಔಷಧಗಳ ಪಟ್ಟಿಯಲ್ಲಿ ಸೇರಿರುವ ಪ್ರಮುಖ ಔಷಧಗಳ ಬೆಲೆ ಏರಿಕೆಯಾಗಲಿದೆ.
ಸಾಮಾನ್ಯವಾಗಿ ಹೆಚ್ಚಿನವರು ಬಳಸುವ ಪ್ಯಾರಾಸೆಟಮಲ್ , ಅಜಿಥೋಮೈಸಿನ್ ನಂತಹ ಆಂಟಿಬಯಾಟಿಕ್ಸ್, ರಕ್ತಹೀನತೆ ನಿವಾರಣೆ ಔಷಧಗಳು, ವಿಟಮಿನ್ ಮತ್ತು ಖನಿಜಗಳ ಅಗತ್ಯಕ್ಕೆ ಬಳಸುವ ಔಷಧಗಳು, ಮಧುಮೇಹ ನಿರೋಧಕ ಔಷಧಗಳು ಮತ್ತು ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸುವ ಕೆಲವು ಔಷಧಗಳು ಈ ಪಟ್ಟಿಯಲ್ಲಿ ಸೇರಿವೆ.
ಅಗತ್ಯ ಔಷಧಗಳ ಬೆಲೆಯಲ್ಲಿ ಕಳೆದ ಕೆಲವು ವರ್ಷಗಳಿಂದ ಗಣನೀಯ ಏರಿಕೆಯಾಗುತ್ತಲೇ ಇದೆ. 2022ರಲ್ಲಿ ಶೇಕಡ 10ರಷ್ಟು, 2023ರಲ್ಲಿ ಶೇಕಡ 12ರಷ್ಟು ಔಷಧಗಳ ದರ ಏರಿಕೆಯಾಗಿತ್ತು. ಈ ವರ್ಷ ಶೇಕಡ 0.6ರಷ್ಟು ಮಾತ್ರ ಏರಿಕೆಗೆ ಸರ್ಕಾರ ಅವಕಾಶ ನೀಡಿದೆ.


