Menu

ವಿವಾಹಿತ ಸೋದರಿ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಸ್ನೇಹಿತನ ಕೊಲೆ

ಚಾಮರಾಜನಗರದ ಗುಂಡ್ಲುಪೇಟೆ ಪಟ್ಟಣ ಸಮೀಪದ ದೊಡ್ಡಕೆರೆ ಏರಿ ಬಳಿ ಇತ್ತೀಚೆಗೆ ನಡೆದಿದ್ದ ಯುವಕನ ಕೊಲೆ ಪ್ರಕರಣದ ತನಿಖೆ ನಡೆಸಿರುವ ಪೊಲೀಸರು ಕೊಲೆ ಮಾಡಿದ ಆರೋಪಿ ಯಾರು, ಯಾಕೆ ಕೊಲೆ ಮಾಡಿದ್ದ ಎಂಬುದನ್ನು ಪತ್ತೆ ಹಚ್ಚಿದ್ದಾರೆ.

ತನ್ನ ಸಹೋದರಿಯ ಜೊತೆ ಸ್ನೇಹಿತ ಅಕ್ರಮ ಸಂಬಂಧ ಹೊಂದಿದ್ದಕ್ಕೆ ಸಿಟ್ಟಿಗೆದ್ದ ಸೋದರ ಗೆಳೆಯನ ಕೊಲೆ ಮಾಡಿರುವುದು ಗೊತ್ತಾಗಿದೆ. ಮೂಖಹಳ್ಳಿ ಗ್ರಾಮದ ನಂಜುಂಡಸ್ವಾಮಿ (23)ಯನ್ನು ಗೆಳೆಯ ಅಜಯ್‌ ಕೊಲೆ ಮಾಡಿರುವುದು ಬಹಿರಂಗಗೊಂಡಿದೆ.

ಗೆಳೆಯ ಅಜಯ್‌ ಜೊತೆ ಬೈಕ್‌ನಲ್ಲಿ ಪಾರ್ಟಿಗೆ ಹೋಗಿದ್ದ ನಂಜುಂಡಸ್ವಾಮಿಯ ಶವ ಕತ್ತು ಸೀಳಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಕೆಲಸ ಮುಗಿಸಿ ಮನೆಗೆ ಬಂದಿದ್ದ ನಂಜುಂಡಸ್ವಾಮಿಯನ್ನು ಬಲವಂತದಿಂದ ಪಾರ್ಟಿ ಮಾಡೋಣ ಬಾ ಎಂದು ಅಜಯ್ ಕರೆದುಕೊಂಡು ಹೋಗಿದ್ದ. ನಂಜುಂಡಸ್ವಾಮಿ ಕೊಲೆ ಬಳಿಕ ತಲೆಮರೆಸಿಕೊಂಡಿದ್ದ ಆತನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ವಿಚಾರ ಬಾಯ್ಬಿಟ್ಟಿದ್ದಾನೆ.

ಬಾಲ್ಯದಿಂದಲೂ ಅಜಯ್​​ ಮತ್ತು ನಂಜುಂಡಸ್ವಾಮಿ ಗೆಳೆಯರಾಗಿದ್ದು, ಯಾವುದೇ ಕೆಲಸ ಮಾಡದಿದ್ದರೂ ದಿನ ನಿತ್ಯ ಕಂಠಪೂರ್ತಿ ಕುಡಿಯುತ್ತಿದ್ದರು. ಮದುವೆಯಾಗಿದ್ದ ತನ್ನ ಸಹೋದರಿಯ ಜೊತೆಗೆ ನಂಜುಂಡಸ್ವಾಮಿ ಅಕ್ರಮ ಸಂಬಂಧ ಹೊಂದಿರುವುದು ತಿಳಿದ ಅಜಯ್​​ ಸಿಟ್ಟಿನಲ್ಲಿ ಕೊಲೆ ಮಾಡಿದ್ದಾನೆ. ಅವರಿಬ್ಬರೂ ಖಾಸಗಿಯಾಗಿ ಕಾಲ ಕಳೆಯುವಾಗಲೇ ಆಕೆಯ ಪತಿ ಕೈಯಲ್ಲಿ ರೆಡ್​​ ಹ್ಯಾಂಡ್​​ ಆಗಿ ಸಿಕ್ಕಿಬಿದ್ದಿದ್ದರು. ಈ ವಿಚಾರ ತಿಳಿದ ಅಜಯ್‌ ಕೋಪಗೊಂಡಿದ್ದ. ಮನೆಯಲ್ಲಿ ಮಲಗಿದ್ದ ನಂಜುಂಡನನ್ನು ಕರೆದುಕೊಂಡು ಹೋಗಿ ಕಂಠಪೂರ್ತಿ ಕುಡಿಸಿ ಕತ್ತು ಸೀಳಿ ಕೊಲೆ ಮಾಡಿದ್ದಾನೆ.

ಮದುವೆಯಾಗಬೇಕಿದ್ದ ಬಾಲಕಿಯ ಕೊಲೆಗೈದ ಯುವಕ

ತನ್ನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಬಾಲಕಿಯನ್ನು ಯುವಕ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಡಿ.ಜೆ.ಹಳ್ಳಿ ಸಕ್ಕರೆ ಮಂಡಿಯ ಪಾಳುಮನೆಯಲ್ಲಿ ನಡೆದಿದೆ. ಯುವತಿ ಜೋಯಾಳ ಕತ್ತುಕೊಯ್ದು ಕೊಂದು ಆರೋಪಿ ಶಬೀಲ್(20) ಪರಾರಿಯಾಗಿದ್ದು, ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಹತ್ಯೆಯಾದ ಸ್ಥಳದಲ್ಲಿ ಸೋಕೋ ಟೀಮ್ ಪರಿಶೀಲನೆ ನಡೆಸಿದೆ. ಕೊಲೆ ಮಾಡಿರುವುದು ಯಾರು ಎಂದು ಗೊತ್ತಾಗಿದ್ದು, ಆರೋಯ ಬಂಧಿಸಿದ ನಂತರ ಕೊಲೆಗೆ ಕಾರಣ ತಿಳಿಯಲಿದೆ. ಘಟನೆ ನಡೆದ ಸ್ಥಳ ಶಬೀಲ್ ಕುಟುಂಬಕ್ಕೆ ಸೇರಿದ್ದಾಗಿದ್ದು, ಯಾರೂ ವಾಸ ಇರಲಿಲ್ಲ. ಆಗಾಗ ಇಬ್ಬರು ಇಲ್ಲಿ ಬಂದು ಸೇರುತ್ತಿದ್ದರೂ ಎಂಬ ಮಾಹಿತಿ ಇದೆ ಎಂದು ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ವಿಕ್ರಮ್ ಅಮಟೆ ತಿಳಿಸಿದ್ದಾರೆ.

Related Posts

Leave a Reply

Your email address will not be published. Required fields are marked *