Menu

ಹನಿಟ್ರಾಪ್‌ಗೆ ಕೆಡವಿ ಹಣ, ಚಿನ್ನ, ಕಾರು ದೋಚಿ ಪರಾರಿ: ಮಹಿಳೆ ಅರೆಸ್ಟ್‌

ಸಾಮಾಜಿಕ ಜಾಲತಾಣಗಳ ಮೂಲಕ ಶ್ರೀಮಂತ ವ್ಯಕ್ತಿಗಳನ್ನುಪರಿಚಯಿಸಿಕೊಂಡು ಹನಿಟ್ರಾಪ್‌ ಮಾಡಿ ಅವರಿಗೆ ಸೇರಿದ್ದ ಅಮೂಲ್ಯ ವಸ್ತುಗಳನ್ನೆಲ್ಲ ದೋಚಿ ಪರಾರಿಯಾಗುವುದನ್ನೇ ಉದ್ಯೋಗ ಮಾಡಿಕೊಂಡಿದ್ದ ಮಹಿಳೆ ದೀಪಾ ಅವಟಗಿಯನ್ನು ಬೆಳಗಾವಿ ಟಿಳಕವಾಡಿ ಪೊಲೀಸರು ಬಂಧಿಸಿದ್ದಾರೆ.

ಸಾಮಾಜಿಕ ಜಾಲತಾಣಗಳ ಮೂಲಕ ಶ್ರೀಮಂತ ಪುರುಷರನ್ನು ಬಲೆಗೆ ಬೀಳಿಸಿ, ಲಾಡ್ಜ್​ಗೆ ಕರೆಸಿ ಅಲ್ಲಿಗೆ ಬಂದ ಗಂಡಸರ ಬಳಿ ಸಲುಗೆಯಿಂದ ನಡೆದುಕೊಂಡು ಅವರನ್ನು ಮೊದಲು ಸ್ನಾನಕ್ಕೆ ಕಳುಹಿಸಿ ಅವರ ಬಳಿಯಿದ್ದ ಹಣ, ಚಿನ್ನ, ಬ್ಯಾಗ್ ಹಾಗೂ ಕಾರುಗಳನ್ನು ತೆಗೆದುಕೊಂಡು ಪರಾರಿಯಾಗುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಹೀಗೆ ಮೋಸ ಹೋಗಿದ್ದ ವ್ಯಕ್ತಿಯೊಬ್ಬರು ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ನಂತರ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಬಾಗಲಕೋಟೆ ಮಹಾಲಿಂಗಪುರ ಮೂಲದ ದೀಪಾ ಅವಟಗಿ (33) ಫ್ಯಾಶನ್ ಡಿಸೈನರ್​ ಆಗಿದ್ದು, ಹಣದಾಸೆಗೆ ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂ ಮೂಲಕ ಶ್ರೀಮಂತ ವ್ಯಕ್ತಿಗಳ ಪರಿಚಯ ಮಾಡಿಕೊಳ್ಳುತ್ತಿದ್ದಳು. ಅವರ ನಂಬರ್ ಪಡೆದು ಮೆಸೇಜ್ ಮಾಡಿ ಲಾಡ್ಜ್‌ಗೆ ಕರೆಸಿಕೊಳ್ಳುತ್ತಿದ್ದಳು.

ಆರೋಪಿ ದೀಪಾಗೆ ಆಪ್ತ ಸ್ನೇಹಿತ ಶಿವಾನಂದ ಮಠಪತಿ ಶ್ರೀಮಂತ ವ್ಯಕ್ತಿಗಳ ಮಾಹಿತಿ ನೀಡುತ್ತಿದ್ದ. ಆತ ಪರಾರಿಯಾಗಿದ್ದು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಆತ ಬೆಳಗಾವಿಯ ಹುಕ್ಕೇರಿ ಪಟ್ಟಣದ ನಿವಾಸಿ.

ಬಂಧಿತ ಆರೋಪಿ ದೀಪಾಳಿಂದ 32 ಲಕ್ಷ 86 ಸಾವಿರ ರೂಪಾಯಿ ಮೌಲ್ಯದ ವಸ್ತು ಪೊಲೀಸರು ವಶಪಡಿಸಿದ್ದಾರೆ. ಫಾರ್ಚೂನರ್ ಕಾರು, ಮಾರುತಿ ಸುಜುಕಿ ಎಸ್-ಕ್ರಾಸ್ ಕಾರು, 11 ಮೊಬೈಲ್ ಫೋನ್‌, ಒಂದು ಟ್ಯಾಬ್, ಒಂದು ಡೊಂಗಲ್, ಮೂರು ಕಾರಿನ ಕೀ ಹಾಗೂ 14 ಸಾವಿರ ರೂಪಾಯಿ ನಗದು ಇದರಲ್ಲಿ ಸೇರಿದೆ.

Related Posts

Leave a Reply

Your email address will not be published. Required fields are marked *