Menu

ಹಿಂದೂ ಮಹಾಸಾಗರದಲ್ಲಿ ಇರಾನ್‌ ಯುದ್ಧನೌಕೆ ಧ್ವಂಸ: ಪರ್ಷಿಯನ್ ಕೊಲ್ಲಿಯಲ್ಲಿ ಅಮೆರಿಕದ ಟ್ಯಾಂಕರ್ ನಾಶ

ಹಿಂದೂ ಮಹಾಸಾಗರದಲ್ಲಿ ಇರಾನ್‌ನ ಯುದ್ಧನೌಕೆ ಮೇಲೆ ಅಮೆರಿಕ ನಡೆಸಿದ ದಾಳಿಗೆ ಪ್ರತೀಕಾರವಾಗಿ ಇರಾನ್ ಉತ್ತರ ಪರ್ಷಿಯನ್ ಕೊಲ್ಲಿಯಲ್ಲಿ ಅಮೆರಿಕದ ಟ್ಯಾಂಕರ್ ಹೊಡೆದುರುಳಿಸಿದೆ. ಈ ದಾಳಿಯಲ್ಲಿ ನಡೆದ ಸಾವುನೋವುಗಳ ಸಂಕ್ಯೆ ಇನ್ನೂ ದೃಢಪಟ್ಟಿಲ್ಲ. ಇರಾನ್‌- ಇಸ್ರೇಲ್‌ ಮಧ್ಯೆ ಆರಂಭಗೊಂಡ ಸಂಘರ್ಷ ಅಮೆರಿಕ ಸೇನಾ ಕಾರ್ಯಾಚರಣೆಯಿಂದಾಗಿ ಭೀಕರ ಸ್ವರೂಪ ಪಡೆದುಕೊಂಡಿದ್ದು, ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡು ಜಾಗತಿಕವಾಗಿ ಪ್ರಭಾವ ಬೀರಿದೆ.

ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಪಡೆಗಳು ಅಮೆರಿಕದ ಟ್ಯಾಂಕರ್‌ ಗುರಿಯಾಗಿಸಿ ದಾಳಿ ನಡೆಸಿದ್ದು, ಹಡಗು ಹಾನಿಗೊಂಡಿದೆ. ಈ ಬೆಳವಣಿಗೆ ಸಮುದ್ರ ಮಾರ್ಗಗಳಲ್ಲಿ ಭಾರಿ ಆತಂಕವನ್ನು ಸೃಷ್ಟಿಸಿದೆ. ಇರಾನ್‌  ಯುದ್ಧ ನೌಕೆಯಾದ ಐರಿಸ್ ದೇನಾ ಮೇಲೆ ಅಮೆರಿಕ ನಡೆಸಿರುವ ಕ್ಷಿಪ್ರ ದಾಳಿಯಲ್ಲಿ ಹಡಗು ಸಂಪೂರ್ಣ ಮುಳುಗಿದೆಯೆಂದು ಹೇಳಲಾಗಿದೆ. ಈ ಹಡಗು ಕಳೆದ ತಿಂಗಳು ನಡೆದ ಎರಡು ಪ್ರಮುಖ ನೌಕಾ ವ್ಯಾಯಾಮಗಳಲ್ಲಿ ಭಾಗವಹಿಸಿ ಭಾರತದ ವಿಶಾಖಪಟ್ಟಣಂ ಬಂದರಿನಿಂದ ವಾಪಸಾಗುತ್ತಿದ್ದಾಗ ವೇಳೆ ಈ ದಾಳಿ ನಡೆದಿದ್ದು, ದೊಡ್ಡ ಪ್ರಮಾಣದ ಮಾನವ ಜೀವಹಾನಿ ಸಂಬವಿಸಿದೆ ಎನ್ನಲಾಗುತ್ತಿದೆ.

ಈ ದಾಳಿಯಲ್ಲಿ 87 ಇರಾನ್‌ ಸೈನಿಕರು ಮೃತಪಟ್ಟಿದ್ದು, 60ಕ್ಕೂ ಹೆಚ್ಚು ಮಂದಿ ಕಾಣೆಯಾಗಿದ್ದಾರೆ, ಇದಕ್ಕೆ ಇರಾನ್‌ ತಕ್ಷಣವೇ ಪ್ರತೀಕಾರದ ಕ್ರಮ ಕೈಗೊಂಡಿದೆ. ಕಳೆದ ಎರಡು ದಿನಗಳಿಂದ ಅಮೆರಿಕ ಕೂಡ ಇರಾನ್‌ ನೌಕಾಪಡೆಯ ವಿರುದ್ಧ ತನ್ನ ದಾಳಿಗಳನ್ನು ಹೆಚ್ಚಿಸಿದೆ. ಡ್ರೋನ್ ಕಾರ್ಯಾಚರಣೆಗಳಿಗೆ ಬಳಸಲಾಗುತ್ತಿದ್ದ ಕಂಟೇನರ್ ಹಡಗನ್ನು ಗುರಿಯಾಗಿಸಿ ಅಮೆರಿಕ ದಾಳಿ ನಡೆಸಿದೆ ಎನ್ನಲಾಗಿದೆ.

Related Posts

Leave a Reply

Your email address will not be published. Required fields are marked *