Monday, September 28, 2026
Menu

ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ ನೂರು ಡಾಲರ್‌?

ಇರಾನ್‌- ಇಸ್ರೇಲ್‌ ಸಂಘರ್ಷದಿಂದ ಗಲ್ಫ್‌ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಹೋರ್ಮುಜ್ ಜಲಸಂಧಿಯ ಪ್ರವೇಶ ನಿರ್ಬಂಧಿಸಾಗಿದೆ, ಹೀಗಾಗಿ ಜಾಗತಿಕವಾಗಿ ತೈಲ ಬೆಲೆ ಏರಿಕೆಯಾಗುತ್ತಿದೆ.

ಅಮೆರಿಕದ ತೈಲ ಬೆಲೆಯಲ್ಲಿ 7.6% ಏರಿಕೆಯಾಗಿ ಪ್ರತಿ ಬ್ಯಾರಲ್‌ಗೆ (159 ಲೀಟರ್) 6604.83‌ ರೂ. ಆಗಿದೆ. ಬ್ರೆಂಟ್‌ ದರದಲ್ಲಿ 8.6% ಹೆಚ್ಚಳವಾಗಿ 7244.98 ರೂ. ತಲುಪಿದ್ದು, ನೂರು ಡಾಲರ್‌ಗೆ ಹತ್ತಿರದಲ್ಲಿದೆ.

ಹೋರ್ಮುಜ್ ಜಲಸಂಧಿಯ ಮೂಲಕ ಜಗತ್ತಿನ 20% ತೈಲ ಸಾಗಣೆಯಾಗುತ್ತಿತ್ತು. ಅಲ್ಲಿ ಸಾಗುವ  ಹಡಗುಗಳ ಮೇಲಿನ ದಾಳಿ ಮುಂದುವರಿದಿರುವ ಕಾರಣ ಪೂರೈಕೆಗೆ ತೊಡಕಾಗಿದೆ. ಬೇಡಿಕೆ ಹೆಚ್ಚಿ ದರದಲ್ಲೂ ಏರಿಕೆಯಾಗಿದೆ. ಈ ಜಲಸಂಧಿ ಹೊರತುಪಡಿಸಿ ತೈಲ ಪೂರೈಕೆ ಸಾಧ್ಯವಿದ್ದರೂ ಅದು ದೀರ್ಘ ಮಾರ್ಗದ ಕಾರಣ ಬೆಲೆ ಏರಿಕೆಯಾಗುತ್ತದೆ.

ನೈಸರ್ಗಿಕ ಅನಿಲದ ಅತಿದೊಡ್ಡ ಪೂರೈಕೆದಾರ ರಾಷ್ಟ್ರಗಳಲ್ಲಿ ಒಂದಾಗಿರುವ ಕತಾರ್ ಮೇಲೆ ಇರಾನ್ ದಾಳಿ ಮಾಡಿದ್ದರಿಂದ ಅಲ್ಲಿ ನೈಸರ್ಗಿಕ ಅನಿಲದ ಉತ್ಪಾದನೆಯನ್ನು ಸ್ಥಗಿತಗೊಳಿಸಿರುವುದಾಗಿ ಪೆಟ್ರೋಲಿಯಂ ಕಂಪನಿ ಕತಾರ್‌ ಎನರ್ಜಿ ಅಧಿಕೃತವಾಗಿ ಪ್ರಕಟಿಸಿದೆ. ಇದರ ಪರಿಣಾಮ ಯುರೋಪ್‌ನಲ್ಲಿ ಅನಿಲದ ಬೆಲೆಯಲ್ಲಿ 40% ಏರಿಕೆ ಆಗಿದೆ.

Related Posts

Leave a Reply

Your email address will not be published. Required fields are marked *