ಕೃತಕ ಬುದ್ದಿಮತ್ತೆ ನೆರವಿನಿಂದ ಸಿದ್ದಪಡಿಸಿದ ರಿಟ್ ಅರ್ಜಿಗಳಿಗೆ ಸುಪ್ರೀಂಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ. ಅಲ್ಲದೆ ಇದರಿಂದ ಇಡೀ ನ್ಯಾಯಿಕ ವ್ಯವಸ್ಥೆಯ ಮೇಲೆ ಅಡ್ಡ ಪರಿಣಾಮ ಬೀರಲಿದೆ ಎಂದೂ ದೇಶದ ಸರ್ವೋನ್ನತ ನ್ಯಾಯಾಲಯ ತೀವ್ರ ಕಳವಳ ವ್ಯಕ್ತಪಡಿಸಿದೆ. ಸಾಫ್ಟ್‌ವೇರ್ ಕಂಪನಿಯಲ್ಲೀಗ ಒಂದು ಸಾವಿರ ಮಂದಿ ಇಂಜನಿಯರುಗಳು ಮಾಡುವ ಕೆಲಸವನ್ನು ಒಂದು ರೋಬೋ ಮಾಡುತ್ತಿದೆ. ಆದರೆ ಇದೇ ಕೆಲಸವನ್ನು ಓರ್ವ ನ್ಯಾಯಾಧೀಶನಾಗಿ ರೋಬೋ , ಕೋರ್ಟಿನಲ್ಲಿ ಜಡ್ಜ್ ಜಾಗದಲ್ಲಿ ಕುಳಿತು ತೀರ್ಪು ನೀಡಿದರೂ ಅಚ್ಚರಿಯಿಲ್ಲ !
ಕೃತಕ ಬುದ್ದಿಮತ್ತೆ . ಪ್ರಪಂಚದ ಮೂಲೆ, ಮೂಲೆಯಲ್ಲಿಂದು ಚರ್ಚೆಯಲ್ಲಿರುವ ವಿಷಯ. ಸಾಮಾನ್ಯನ ಬದುಕಿಗೆ ಇದು ಎಷ್ಟರಮಟ್ಟಿಗೆ ಪ್ರಯೋಜನಕಾರಿ ಮತ್ತು ಸಮಾಜಕ್ಕಿದು ಪೂರಕವೋ, ಮಾರಕವೋ? ಶರವೇಗದ ಬೆಳವಣಿಗೆಯ ನಾಗಾಲೋಟದ ಲ್ಲಿರುವ ಜಗತ್ತು ಇದರ ಸಾಧಕ- ಬಾಧಕಗಳ ಕುರಿತು ಗಂಭೀರವಾಗಿ ಆಲೋಚಿಸುತ್ತಿಲ್ಲ ! ಪ್ರಪಂಚವಿಂದು ಈ ಕ್ಷಣದ ಅನುಕೂಲ ಮತ್ತು ಅಗತ್ಯತೆಯನ್ನು ಪೂರೈಸುವ ಅತ್ಯಾಧುನಿಕ ಪರಿಕರಗಳ ಬಗ್ಗೆ ಮಾತ್ರ ಆಲೋಚಿಸುತ್ತಿದೆ. ಕ್ವಿಕ್ ರಿಸಲ್ಟ್ ಮಾತ್ರವೇ ಇಂದಿನ ಪೀಳಿಗೆಯ ಮೊದಲ ಆದ್ಯತೆಯಾಗಿದೆ. ಇದನ್ನು ಪೂರೈಸಲು ಇಂದು ಕೃತಕ ಬುದ್ದಿಮತ್ತೆ ಎಂಬ ತಂತ್ರಜ್ಞಾನ ಮಾನವನಿಗಿಂತಲೂ ಅತಿ ವೇಗವಾಗಿ ಮುಂದೆ ಸಾಗಿದೆ.
ಪಾಶ್ಚಿಮಾತ್ಯ ದೇಶಗಳಲ್ಲಿ ಮಾನವ ಸಂಪನ್ಮೂಲಗಳ ವ್ಯಾಪಕ ಕೊರತೆ ಇದೆ. ಅಲ್ಲಿನ ಜನತೆಯ ಬೇಕು, ಬೇಡಗಳನ್ನು ಪೂರೈಸಲೆಂದು ಹುಟ್ಟಿಕೊಂಡಿದ್ದೇ ಈ ಕೃತಕ ಬುದ್ದಿಮತ್ತೆ ! ೧೯ ಹಾಗೂ ೨೦ನೆಯ ಶತಮಾನದಲ್ಲಿ ಆಧುನಿಕ ಯಂತ್ರೋಪಕರಣ ಗಳು ಹಾಗೂ ಕಂಪ್ಯೂಟರುಗಳು ಮಾನವನ ದೈಹಿಕ ಕಾರ್ಯವನ್ನು ಹಗುರಗೊಳಿಸಿದರೆ ಈ ಶತಮಾನದಲ್ಲಿ ಕೃತಕ ಬುದ್ದಿಮತ್ತೆ ಎಂಬುದು, ಮನುಷ್ಯನ ಎಲ್ಲ ಕೆಲಸಗಳನ್ನು ಹಗುರಗೊಳಿಸಿರುವುದು ಗಮನಾರ್ಹ. ಕ್ಷಣಮಾತ್ರದಲ್ಲಿ ಮಾಹಿತಿ ಮತ್ತು, ಕ್ಷಣ ಮಾತ್ರದಲ್ಲಿ ಯಾವುದೇ ಸಮಸ್ಯೆಗೆ ಪರಿಹಾರಇತ್ಯಾದಿ ಅಚ್ಚರಿಗಳೆಲ್ಲವೂ ಈಗ ಐಐನಿಂದ ಸಾಧ್ಯವಾಗಿದೆ.
ಹಾಗಾದರೆ ಮಾನವನ ಆಲೋಚನೆ ಮತ್ತು ಮಿದುಳಿಗಿನ್ನು ಕೆಲಸವೆಲ್ಲಿದೆ ? ಮನುಷ್ಯನ ಆಲೋಚನೆಗಳನ್ನೇ ಆಪೋಶನೆ ತೆಗೆದುಕೊಳ್ಳುವ ಕೃತಕ ಬುದ್ದಿಮತ್ತೆ, ಭವಿಷ್ಯದಲ್ಲಿ ಭಾರತದಂತಹ ಅಪಾರ ಮಾನವ ಸಂಪನ್ಮೂಲಗಳು ಉಳ್ಳಂತಹ ದೇಶಕ್ಕೆ ಅತಿ ಮಾರಕವಾಗಿ ಪರಿಣಮಿಸಿ ಇಲ್ಲ -ಸಲ್ಲದ ಸಂಕಷ್ಟಗಳನ್ನು ತಂದೊಡ್ಡುವುದಿಲ್ಲವೇ ? ಸಂಶೋಧನೆ, ಗ್ರಂಥಾಲಯ, ಮತ್ತು ದಾಖಲೀಕರಣ ಹಾಗೂ ಅಂತಹ ಜ್ಞಾನಾರ್ಜಿತ ಕ್ಷೇತ್ರಗಳಿಗೆ ಕೃತಕ ಬುದ್ದಿಮತ್ತೆ ಬಳಕೆಯಾಗುವುದೇನೂ ಸರಿ. ಆದರೆ ಇದೇ ತಂತ್ರ ಜ್ಞಾನವು ನ್ಯಾಯ ವನ್ನು ನೀಡಬೇಕಿರುವ ನ್ಯಾಯಾಲಯಗಳ ಮೇಲೆ ಸವಾರಿ ಮಾಡುವಂತಾದರೆ ನ್ಯಾಯಾಧೀಶರ ನ್ಯಾಯದಾನ ಮತ್ತು ಸ್ವಂತಾಲೋಚನೆಯ ಶಕ್ತಿಯ ಗತಿಯೇನು ?
ವಾಸ್ತವಿಕ ತೊಡಕಗಳನ್ನು ಆಧರಿಸಿ ಓರ್ವ ವಕೀಲನು ಸಿದ್ದಪಡಿಸ ಬೇಕಿರುವ ದಾವೆಯನ್ನು ಕೇವಲ ಒಂದು ನಿಮಿಷದಲ್ಲಿ ವಕೀಲನೋರ್ವ, ಯಾವುದೇ ಪೂರ್ವ ತಯಾರಿ ಇಲ್ಲದೆ ಸಿದ್ದಪಡಿಸಿ ಅದನ್ನೇ ಕೋರ್ಟಿಗೆ ಸಲ್ಲಿಸಿದರೆ, ಇದು ವಕೀಲನ ಸ್ವಂತ ಬರಹ, ಭಾಷೆ ಮತ್ತು ತರ್ಕ ಪ್ರತಿಪಾದನೆಗೆ ಎಲ್ಲಿದೆ ಜಾಗ ? ಈ ವಿಚಾರ ದಲ್ಲಿ ಕೃತಕ ಬುದ್ದಿಮತ್ತೆ ನೆರವಿನಿಂದ ಸಿದ್ದಪಡಿಸಿದ ರಿಟ್ ಅರ್ಜಿಗಳಿಗೆ ಸುಪ್ರೀಂಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ. ಅಲ್ಲದೆ ಇದರಿಂದ ಇಡೀ ನ್ಯಾಯಿಕ ವ್ಯವಸ್ಥೆಯ ಮೇಲೆ ಅಡ್ಡ ಪರಿಣಾಮ ಬೀರಲಿದೆ ಎಂದೂ ದೇಶದ ಸರ್ವೋನ್ನತ ನ್ಯಾಯಾಲಯ ತೀವ್ರ ಕಳವಳ ವ್ಯಕ್ತಪಡಿಸಿದೆ. ಸಾಫ್ಟ್‌ವೇರ್ ಕಂಪನಿಯಲ್ಲೀಗ ಒಂದು ಸಾವಿರ ಮಂದಿ ಇಂಜನಿಯರುಗಳು ಮಾಡುವ ಕೆಲಸವನ್ನು ಒಂದು ರೋಬೋ ಮಾಡುತ್ತಿದೆ. ಆದರೆ ಇದೇ ಕೆಲಸವನ್ನು ಓರ್ವನ್ಯಾಯಾಧೀಶನಾಗಿ ರೋಬೋ , ಕೋರ್ಟಿನಲ್ಲಿ ಜಡ್ಜ್ ಜಾಗ ದಲ್ಲಿ ಕುಳಿತು ತೀರ್ಪು ನೀಡಿದರೂ ಅಚ್ಚರಿಯಿಲ್ಲ ! ಒಟ್ಟಿನಲ್ಲಿ ಕೃತಕ ಬುದ್ದಿಮತ್ತೆ ಪ್ರಪಂಚದ ಸಂಪ್ರದಾಯಿಕ ಬದುಕಿನ ಮೇಲೆ ಊಹೆಗೂ ಮೀರಿದ ಪರಿಣಾಮ ಬೀರುವ ಹಾದಿಯಲ್ಲಿದೆ.


