Menu

ಆರೆಸ್ಸೆಸ್‌ಗೆ ನಿಂದನೆ: ಪ್ರಿಯಾಂಕ್‌ ಖರ್ಗೆ ವಿರುದ್ಧ ಆರ್‌ ಅಶೋಕ ಆಕ್ರೋಶ

ಆರ್ ಎಸ್ಎಸ್ ಸಂಘಟನೆಯನ್ನು ವಾಚಾಮಗೋಚರವಾಗಿ ಬೈದರೆ, ನಿರಂತರವಾಗಿ ನಿಂದಿಸಿದರೆ ಹೈಕಮಾಂಡ್ ನಾಯಕರನ್ನು ಮೆಚ್ಚಿಸಿ ಪಕ್ಷದಲ್ಲಿ ಏನಾದರೂ ಸ್ಥಾನಮಾನ ಪಡೆಯಬಹುದು, ಇನ್ನೂ ಹೆಚ್ಚಿನ ಅಧಿಕಾರ ಸಿಗಬಹುದು ಎಂಬ ಭ್ರಮೆಯಲ್ಲಿರುವ ಸಚಿವ @PriyankKharge ಅವರು ಅದನ್ನೇ ನಿತ್ಯ ಚಾಳಿ ಮಾಡಿಕೊಂಡಿದ್ದಾರೆಂದು ಪ್ರತಿಪಕ್ಷ ನಾಯಕ ಆರ್‌ ಅಶೋಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

4 ದಶಕಗಳಿಂದ ಕಲ್ಯಾಣ ಕರ್ನಾಟಕದ ಜನರ ಕೃಪಾಕಟಾಕ್ಷದಿಂದ ಅಧಿಕಾರ ಅನುಭವಿಸಿ, ಅಭಿವೃದ್ಧಿಗೆ ಮಾತ್ರ “ನಾಳೆ ಬಾ” ಎಂಬ ಶಾಶ್ವತವಾದ ಬೋರ್ಡು ಹಾಕಿಕೊಂಡು ಕಲ್ಯಾಣ ಕರ್ನಾಟಕದ ಜನತೆಗೆ ನಂಬಿಕೆ ದ್ರೋಹ ಮಾಡುತ್ತಿರುವ ದೆವ್ವಗಳನ್ನ ಓಡಿಸುವ ದಿನ ಬಹಳ ದೂರವಿಲ್ಲ. ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ನಿಂದನೆ ಮಾಡುವುದೂ ಒಂದೇ ಆಕಾಶಕ್ಕೆ ಉಗಿಯುವುದೂ ಒಂದೇ ಎಂದು  ಮತ್ತೊಂದು ಟ್ವೀಟ್‌ ಮೂಲಕ ಕಿಡಿ ಕಾರಿದ್ದಾರೆ.

ಸರ್ಕಾರಿ ಆಸ್ಪತ್ರೆಗಳಲ್ಲಿನ ಔಷಧಗಳ ಕೊರತೆ ಆಡಳಿತಾತ್ಮಕ ವೈಫಲ್ಯದ ಸ್ಪಷ್ಟ ಸಂಕೇತ ಎಂದು ವ್ಯಾಖ್ಯಾನ ಮಾಡಿರುವ ಇಂದಿನ @prajavani ದಿನಪತ್ರಿಕೆಯ ಸಂಪಾದಕೀಯ ರಾಜ್ಯ @INCKarnataka ಸರ್ಕಾರದ ಕಾರ್ಯವೈಖರಿಗೆ ಕನ್ನಡಿ ಹಿಡಿದಿದೆ. ಬಡರೋಗಿಗಳ ಹಿತದೃಷ್ಟಿಯಿಂದ ಈ ಕೂಡಲೇ ಆರೋಗ್ಯ ಸಚಿವ @dineshgrao ಅವರ ರಾಜೀನಾಮೆ ಪಡೆದು ಯಾರಾದರೂ ಸಮರ್ಥರಿಗೆ ಆರೋಗ್ಯ ಖಾತೆಯನ್ನ ನೀಡಬೇಕು ಎಂದು ಮುಖ್ಯಮಂತ್ರಿ @siddaramaiah ಅವರನ್ನು ಒತ್ತಾಯಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

Related Posts

Leave a Reply

Your email address will not be published. Required fields are marked *