Menu

ಕೆಎಸ್ಸಾರ್ಟಿಸಿ ಬಸ್‌ಗಳಲ್ಲಿ ಇಂದಿನಿಂದ ಲಗೇಜ್‌ ದರ ಏರಿಕೆ

ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಸಾಗಿಸುವ ಲಗೇಜ್ ದರ ಪರಿಷ್ಕರಿಸಲಾಗಿದ್ದು, ಪರಿಷ್ಕೃತ ದರ ಇಂದಿನಿಂದಲೇ ಜಾರಿಗೆ ಬಂದಿದೆ. ಡೀಸೆಲ್, ಸಿಬ್ಬಂದಿ ಹಾಗೂ ಇತರ ವೆಚ್ಚಗಳಲ್ಲಿ ತೀವ್ರ ಹೆಚ್ಚಳವಾಗಿರುವ ಹಿನ್ನೆಲೆ ನಿಗಮವು ಬಸ್‌ಗಳಲ್ಲಿ ಸಾಗಿಸುವ ಲಗೇಜ್ ದರವನ್ನು ಪರಿಷ್ಕರಿಸಿದೆ.

ಈ ಹಿಂದೆ ಶೇ.15 ಬಸ್ ಪ್ರಯಾಣ ದರ ಹೆಚ್ಚಿಸಲಾಗಿದೆ. ಈಗ ಲಗೇಜು ದರ ಶೇ.15 ಏರಿಕೆ ಮಾಡಲಾಗಿದೆ. ಪ್ರಯಾಣಿಕರು ಉಚಿತವಾಗಿ 30 ಕೆಜಿ ಲಗೇಜ್‌ ಕೊಂಡೊಯ್ಯಲು ಅವಕಾಶವಿದೆ. 30 ಕೆಜಿಗೂ ಅಧಿಕ ಭಾರದ ಲಗೇಜ್‌ ತೆಗೆದುಕೊಂಡು ಹೋಗಲು ದರ ಅನ್ವಯಿಸುತ್ತದೆ. ಈ ಹಿಂದೆ ಲಗೇಜ್‌ ದರ ಡಿಸೆಂಬರ್‌ 2021ರಲ್ಲಿ ಏರಿಕೆಯಾಗಿತ್ತು.

ಪರಿಷ್ಕೃತ ದರವನ್ನು ಇಟಿಎಂ ತಂತ್ರಾಂಶದಲ್ಲಿ ಅಳವಡಿಸಿಕೊಳ್ಳಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಕಳೆದ ವರ್ಷ ಜನವರಿಯಲ್ಲಿ ಬಸ್ ಪ್ರಯಾಣ ದರ ಏರಿಕೆಯಾಗಿತ್ತು. ಲಗೇಜು ದರ ಏರಿಕೆ ಮಾಡಿರಲಿಲ್ಲ. ಇನ್ನು ಬಸ್ ಪ್ರಯಾಣ ದರ ಎಷ್ಟು ಹೆಚ್ಚಾಗು ವುದೋ ಅದೇ ದರದಲ್ಲಿ ಲಗೇಜು ದರವೂ ಹೆಚ್ಚಾಗುತ್ತದೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷ ತಿಳಿಸಿದ್ದಾರೆ.

Related Posts

Leave a Reply

Your email address will not be published. Required fields are marked *