Thursday, January 30, 2025
Menu

ಒಂದು ತಿಂಗಳು ರೆಸ್ಟ್‌ ಪಡೆದುಕೊಂಡು ಚಿತ್ರೀಕರಣದಲ್ಲಿ ಭಾಗಿಯಾಗುವೆನೆಂದ ನಟ ಶಿವರಾಜ್‌ ಕುಮಾರ್‌

ಅಮೆರಿಕದಲ್ಲಿ ಶಸ್ತ್ರಚಿಕಿತ್ಸೆ ಪಡೆದುಕೊಂಡಿದ್ದು, ಒಂದು ತಿಂಗಳು ಸಂಪೂರ್ಣ ರೆಸ್ಟ್‌ ಪಡೆದುಕೊಂಡು ಚಿತ್ರೀಕರಣದಲ್ಲಿ ಭಾಗಿಯಾಗುತ್ತೇನೆ ಎಂದು ನಟ ಶಿವರಾಜ್‌ಕುಮಾರ್ ಹೇಳಿದ್ದಾರೆ.

ಬೆಂಗಳೂರಿಗೆ ಆಗಮಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೋಗಬೇಕಿದ್ದರೆ ಬಹಳ ಎಮೋಷನ್ ಆಗಿದ್ದೆ. ಏನೇ ಇದ್ದರೂ ಫೇಸ್ ಮಾಡಬೇಕಿತ್ತು. ಧೈರ್ಯವಾಗಿ ಹೋಗಬೇಕಿತ್ತು, ಹೋಗಿ ಬಂದೆ. ಹೋಗಬೇಕಿದ್ದರೆ ಸ್ವಲ್ಪ ಭಯ ಇತ್ತು. ಅಭಿಮಾನಿಗಳ ಆಶೀರ್ವಾದದಿಂದ ಹೋಗಿಬಂದೆ. ಏರ್ಪೋಟ್ ಇಳಿದು ಆಸ್ಪತ್ರೆ ಮುಂದೆ ಹೋಗಬೇಕಿದ್ದಾಗಲೇ ಧೈರ್ಯ ಬಂತು. ಆಪರೇಷನ್ ಮುಗಿದ ಮೇಲೆ ಬಂದು ಹೇಳಿದ ಮೇಲೆ ಎಲ್ಲವೂ ಆಗಿದೆ ಅಂತ ಗೊತ್ತಾಯ್ತು ಎಂದು ಆ ದಿನಗಳ ಬಗ್ಗೆ ಮಾಹಿತಿ ನೀಡಿದರು.

ಫ್ಲೈಟ್‌ನಲ್ಲಿ 20 ಗಂಟೆಯಾಯಿತು. ಆರು ಗಂಟೆ ಸರ್ಜರಿ ನಡೆಯಿತು. ಎರಡನೇ ದಿನದಿಂದ ವಾಕ್ ಶುರು ಮಾಡಿದೆ. ಆ ಎನರ್ಜಿ ಎಲ್ಲಿಂದ ಬಂತೋ ಗೊತ್ತಿಲ್ಲ. ಅಭಿಮಾನಿಗಳೊಂದಿಗೆ ಇಂಡಸ್ಟ್ರಿಯವರು ಧೈರ್ಯ ತುಂಬಿದರು. ಗೀತಾ ಹೆಂಡತಿನೂ ಹೌದು, ತಾಯಿನೂ ಹೌದು. ಈ ಬಾರಿ ಮಗಳು ನಿವೇದಿತಾ ತಾಯಿಗಿಂತ ಹೆಚ್ಚು ನೋಡಿಕೊಂಡಿದ್ದಾಳೆ. ನಿವೇದಿತಾ ಗೆಳತಿ ಅನು ಒಂದು ತಿಂಗಳು ನಮ್ಮ ಜೊತೆ ಇದ್ದರು ಎಂದು ತಿಳಿಸಿದರು.

ಇಂಡಸ್ಟ್ರಿಯವರ, ಜನರ , ಮಾಧ್ಯಮದವರ ಹಾರೈಕೆಯಿಂದ ಇವತ್ತು ಒಳ್ಳೆಯದಾಗಿದೆ. ಗಂಡಸರಿಗೆ ತಾಯಂದಿರು ತುಂಬಾ ಇರುತ್ತಾರೆ. ಅಮ್ಮ, ಹೆಂಡತಿ ಮಗಳು ಹೀಗೆ. ಈ ಬಾರಿ ನಿವೇದಿತಾ ಕೂಡ ನಮ್ಮ ಜೊತೆ ಇದ್ದಳು. ವೈದ್ಯರು ಸದ್ಯ ವಿಶ್ರಾಂತಿ ತೆಗೆದುಕೊಳ್ಳುವಂತೆ ಹೇಳಿದ್ದಾರೆ. ನಾರ್ಮಲ್ ಕೆಲಸ ಮಾಡುತ್ತೇನೆ. ಮಾರ್ಚ್ ಬಳಿಕ ಆಕ್ಷನ್ ವರ್ಕ್ ಶುರು ಮಾಡುತ್ತೇನೆ ಎಂದು ಹೇಳಿದರು.

ಎರಡು ಮೂರು ದಿನ ದ್ವಾಹಾರ ಮಾತ್ರ ಸೇವಿಸಿದ್ದೆ. ಮೂರು ದಿನದ ಬಳಿಕ ನಿಧಾನವಾಗಿ ನಡೆಯಲು ಶುರು ಮಾಡಿದೆ. ಜೀವನವೇ ಒಂದು ಪಾಠ, ಜೀವನದಲ್ಲಿ ಇದೆಲ್ಲ ತಾನಾಗಿ ಬರುವುದು, ನಾನು ಎಲ್ಲವನ್ನೂ ಧೈರ್ಯವಾಗಿ ಮಾಡಿದೆ. 131 ಸಿನಿಮಾ ಬಗ್ಗೆ ಪ್ಲ್ಯಾನ್ ಇದೆ. ರಾಮ್ ಚರಣ್ ಅವರ ಸಿನಿಮಾ ಮಾಡುತ್ತೇನೆ ಎಂದರು.

Related Posts

Leave a Reply

Your email address will not be published. Required fields are marked *