Tuesday, February 03, 2026
Menu

ಸ್ನೇಹಿತನ ಪತ್ನಿ ಜತೆ ಸಲುಗೆ: ಗೆಳೆಯನಿಂದಲೇ ವ್ಯಕ್ತಿ ಕೊಲೆ

ಬಾದಾಮಿ ತಾಲೂಕಿನ ಖಾನಾಪುರ ಎಸ್‌ಕೆ ಗ್ರಾಮದಲ್ಲಿ ಸ್ನೇಹಿತನ ಪತ್ನಿ ಜತೆ ಸಲುಗೆ, ಫೋನ್ ಸಂಪರ್ಕದಲ್ಲಿದ್ದ ಕಾರಣಕ್ಕೆ ವ್ಯಕ್ತಿಯನ್ನು ಸ್ನೇಹಿತನೇ ಕೊಲೆ ಮಾಡಿರುವ ಘಟನೆ ನಡೆದಿದೆ.

ತನ್ನ ಪತ್ನಿಯೊಂದಿಗೆ ಸ್ನೇಹಿತ ಅನೈತಿಕ ಸಂಬಂಧ ಹೊಂದಿರುವ ಶಂಕೆಯಲ್ಲಿ ಗೆಳೆಯನೇ ಕೊಲೆಗೈದಿದ್ದಾನೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ನಡೆಸುತ್ತಿದ್ದಾರೆ.

ಖಾನಾಪುರ ಎಸ್‌ಕೆ ಗ್ರಾಮದ ಸಮೀಪದ ಮಾವಿನ ತೋಟದಲ್ಲಿ ಕಲ್ಲಿನಿಂದ ಜಜ್ಜಿ ಕೊಲೆ ಮಾಡಲಾಗಿದ್ದು,. ಹತ್ಯೆಯಾದ ವ್ಯಕ್ತಿಯನ್ನು ಖಾನಾಪುರ ಎಸ್‌ಕೆ ಗ್ರಾಮದ ನಿವಾಸಿ ಸೋಮಶೇಖರ್ ಕಿಳ್ಳಿಕೇತರ (45) ಎಂದು ಗುರುತಿಸಲಾಗಿದೆ. ಕೊಲೆ ಆರೋಪಿ ಸಂಜೀವ್ ಕಿಳ್ಳಿಕೇತರ (28) ಕಾಕನೂರು ಗ್ರಾಮದ ನಿವಾಸಿ.

ಆರೋಪಿ ಸಂಜೀವ್ ಪತ್ನಿಯೊಂದಿಗೆ ಸೋಮಶೇಖರ್ ಅತಿ ಸಲುಗೆಯಿಂದ ವರ್ತಿಸುತ್ತಿದ್ದು, ಫೋನ್‌ನಲ್ಲಿ ಸಂಪರ್ಕದಲ್ಲಿರುವುದು ಸಂಜೀವ್​​ಗೆ ಅನುಮಾನ ಹುಟ್ಟಿಸಿತ್ತು. ಈ ವಿಷಯವಾಗಿ ಸ್ನೇಹಿತನಿಗೆ ದೂರ ರುವಂತೆ ಎಚ್ಚರಿಕೆ ನೀಡಿ ಜೀವ ಬೆದರಿಕೆ ಹಾಕಿದ್ದ ಎಂದು ತಿಳಿದುಬಂದಿದೆ.

ಆದರೂ ಇಬ್ಬರೂ ಮದ್ಯಪಾನಕ್ಕೆ ಜೊತೆಯಾಗಿರುತ್ತಿದ್ದರು. ಇಬ್ಬರೂ ಖಾನಾಪುರ ಎಸ್‌ಕೆ ಗ್ರಾಮದ ಸಮೀಪದ ಮಾವಿನ ತೋಟದಲ್ಲಿ ಮದ್ಯಪಾನ ಮಾಡಿದ್ದರು. ಸೋಮಶೇಖರ್‌ಗೆ ಕಂಠಪೂರ್ತಿ ಮದ್ಯ ಕುಡಿಸಿದ್ದ ಸಂಜೀವ್ ಆತ ಪೂರ್ತಿ ನಶೆಯಲ್ಲಿದ್ದಾಗ ಕಲ್ಲಿನಿಂದ ತಲೆ ಮತ್ತು ಮುಖ ಜಜ್ಜಿ ಕೊಲೆ ಮಾಡಿರುವುದಾಗಿ ಎಂದು ಪೊಲೀಸರು ತಿಳಿಸಿದ್ದಾರೆ.

ಸೋಮಶೇಖರ್ ಕಾಣೆಯಾಗಿದ್ದ ಹಿನ್ನೆಲೆ ಪೊಲೀಸರು ಶೋಧ ನಡೆಸಿದಾಗ ಮಾವಿನ ತೋಟದಲ್ಲಿ ಶವ ಪತ್ತೆಯಾಗಿದೆ. ಸ್ಥಳಕ್ಕೆ ಬಾದಾಮಿ ಪೊಲೀಸರು ಹಾಗೂ ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯೆಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾದಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.

Related Posts

Leave a Reply

Your email address will not be published. Required fields are marked *