Wednesday, February 25, 2026
Menu

ಇಡಿ ಮೇಲೆ ಮಮತಾ ರೇಡ್‌: ದಾಳಿ ವೇಳೆ ನುಗ್ಗಿ “ಐಪ್ಯಾಕ್‌” ಕಡತಗಳನ್ನು ಹೊತ್ತೊಯ್ದ ದೀದಿ

ಚುನಾವಣಾ ತಂತ್ರಗಾರಿಕೆ ಸಂಸ್ಥೆ ‘ಐ ಪ್ಯಾಕ್‌’ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕೋಲ್ಕತಾದಲ್ಲಿರುವ ಐಪ್ಯಾಕ್‌ ಮುಖ್ಯಸ್ಥನ ಮನೆಯ ಮೇಲೆ ದಾಳಿ ನಡೆದಾಗ ಅಲ್ಲಿಗೆ ನುಗ್ಗಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ದಾಖಲೆಗಳನ್ನು ಎತ್ತಿಕೊಂಡು ಹೋಗಿದ್ದಾರೆ.

ಟಿಎಂಸಿಯ ಚುನಾವಣಾ ದಾಖಲೆ ಕದಿಯಲು ಇಡಿ ದಾಳಿ ನಡೆಸಿದೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇಡಿ ಅಧಿಕಾರಿಗಳನ್ನು ಬಳಸಿಕೊಂಡು ನಮ್ಮ ಪಕ್ಷದ ಮಾಹಿತಿ, ಅಭ್ಯರ್ಥಿಗಳ ಪಟ್ಟಿ, ಆಂತರಿಕ ಚುನಾವಣಾ ರಣತಂತ್ರದ ಮಾಹಿತಿಗಳನ್ನು ಕದಿಯುತ್ತಿದ್ದಾರೆ. ಪಕ್ಷದ ಚುನಾವಣೆಗೆ ಸಂಬಂಧಿಸಿದ ಕೆಲವೊಂದು ದಾಖಲೆಗಳನ್ನು ನಾನು ಮರಳಿ ತಂದಿದ್ದೇನೆ ಎಂದು ಮಮತಾ ಹೇಳಿದ್ದಾರೆ. ಈ ಆರೋಪವನ್ನು ಕೇಂದ್ರೀಯ ತನಿಖಾ ಸಂಸ್ಥೆ ತಳ್ಳಿ ಹಾಕಿದೆ. ಕರ್ತವ್ಯಕ್ಕೆ ಅಡ್ಡಿ ಮತ್ತು ಸಾಕ್ಷ್ಯ ನಾಶ ಆರೋಪದಡಿ ಮಮತಾ ಮತ್ತು ಪೊಲೀಸರ ವಿರುದ್ಧ ಇಡಿ ಹೈಕೋರ್ಟ್‌ಗೆ ದೂರು ಸಲ್ಲಿಸಿದೆ. ಐ ಪ್ಯಾಕ್‌ ಸಂಸ್ಥೆ ಮುಖ್ಯಸ್ಥ ಇಡಿ ವಿರುದ್ಧ ದೂರು ದಾಖಲಿಸಿದ್ದಾರೆ.

ಕಲ್ಲಿದ್ದಲು ಕಳ್ಳಸಾಗಣೆ ಮತ್ತು ಅಕ್ರಮ ಹಣ ವರ್ಗಾವಣೆಯ ಪ್ರಕರಣ ಸಂಬಂಧ ಜಾವ ಸಾಲ್ಟ್‌ ಲೇಕ್‌ನಲ್ಲಿರುವ ‘ಐ ಪ್ಯಾಕ್‌’ ಸಂಸ್ಥೆ ಮತ್ತದರ ಮುಖ್ಯಸ್ಥ ಪ್ರತೀಕ್‌ ಜೈನ್‌ ಅವರ ಕೋಲ್ಕತಾ ಮತ್ತು ದೆಹಲಿ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಇಡಿ ದಾಳಿ ನಡೆಸುತ್ತಿದ್ದ ಪ್ರತೀಕ್‌ ಜೈನ್‌ ಮನೆಗೆ ಬಂಗಾಳ ಪೊಲೀಸರು, ಪಕ್ಷದ ಕಾರ್ಯಕರ್ತರ ಜತೆ ನುಗ್ಗಿದ ಮಮತಾಕೆಲವೊಂದು ಕಡತಗಳನ್ನು ಎತ್ತಿಕೊಂಡು ಹೋಗಿದ್ದಾರೆ.

ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣ ಸಂಬಂಧ ದಾಳಿ ನಡೆಸಿದ್ದೇವೆ. ಟಿಎಂಸಿ ಪಕ್ಷಕ್ಕೆ ಸಂಬಂಧಿಸಿದಂತೆ ಯಾವುದೇ ಶೋಧ ನಡೆಸಿಲ್ಲ. ಜೈನ್ ಮನೆಗೆ ನುಗ್ಗಿ ಮಮತಾ, ಪೊಲೀಸರು ಮತ್ತು ಅವರ ಪಕ್ಷದ ಕಾರ್ಯಕರ್ತರು ಮಹತ್ವದ ದಾಖಲೆಗಳನ್ನು ಬಲವಂತವಾಗಿ ಕೊಂಡೊಯ್ದಿದ್ದಾರೆ ಎಂದು ಆರೋಪಿಸಿ ಹೈಕೋರ್ಟ್ ಇಡಿ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದೆ.

‘ಐಪ್ಯಾಕ್‌’ ಸಂಸ್ಥೆ ಮಮತಾ ಬ್ಯಾನರ್ಜಿ ಅವರ ಪಕ್ಷಕ್ಕೆ ಚುನಾವಣಾ ತಂತ್ರಗಾರಿಕೆ ಸೇವೆಯನ್ನು ಒದಗಿಸುತ್ತಿದೆ. ಇಡಿ. ಅಧಿಕಾರಿಗಳನ್ನು ಬಳಸಿಕೊಂಡು ನಮ್ಮ ಪಕ್ಷದ ಮಾಹಿತಿ, ಅಭ್ಯರ್ಥಿಗಳ ಪಟ್ಟಿ, ಆಂತರಿಕ ಚುನಾವಣಾ ರಣತಂತ್ರದ ಮಾಹಿತಿಗಳನ್ನು ಕದಿಯುತ್ತಿದ್ದಾರೆ. ಪಕ್ಷದ ಚುನಾವಣೆಗೆ ಸಂಬಂಧಿಸಿದ ಕೆಲವೊಂದು ದಾಖಲೆಗಳನ್ನು ನಾನು ತಂದಿದ್ದೇನೆ. ಮೋದಿ ಅವರು ಅಮಿತ್‌ ಶಾ ಅವರನ್ನು ನಿಯಂತ್ರಿಸಿ ಎಂದು ಮಮತಾ ಹೇಳಿದ್ದಾರೆ.

Related Posts

Leave a Reply

Your email address will not be published. Required fields are marked *