Menu

ಪತ್ನಿ, ಪ್ರೇಯಸಿ ಸೇರಿ ಆಹಾರದಲ್ಲಿ ಮಾದಕ ದ್ರವ್ಯ ಬೆರಸಿ ವ್ಯಕ್ತಿಯ ಕೊಲೆ

ಉತ್ತರ ಪ್ರದೇಶದ ಇಟಾವಾದಲ್ಲಿ ಜಿಂದಾಲ್ ಕಂಪನಿಯ ಎಂಜಿನಿಯರ್ ರಾಘವೇಂದ್ರ ಯಾದವ್ ಎಂಬಾತನನ್ನು ಆತನ ಪತ್ನಿ ಮತ್ತು ಪ್ರೇಯಸಿ ಸೇರಿ ಕೊಂದಿದ್ದಾರೆ.

ರಾಘವೇಂದ್ರ ಯಾದವ್ ಮದುವೆಯಾಗಿದ್ದ. ಆತ ಇನ್ನೊಬ್ಬ ಹುಡುಗಿ ಜೊತೆ ಸಂಬಂಧ ಬೆಳೆಸಿಕೊಂಡಿದ್ದ. ಆಕೆಯ ಅಶ್ಲೀಲ ಫೋಟೋಗಳನ್ನು ತೆಗೆದುಕೊಂಡು ಆಕೆಯನ್ನು ಬ್ಲ್ಯಾಕ್‌ಮೇಲ್ ಮಾಡಲು ಪ್ರಾರಂಭಿಸಿದ್ದ. ಮನೆಯಲ್ಲಿ ಹೆಂಡತಿಯನ್ನು ಹೊಡೆಯುತ್ತಿದ್ದ.

ಆತನ ಮೃತದೇಹವು ಕೆಲವು ದಿನಗಳ ಹಿಂದೆ ಹಾಸಿಗೆಯ ಮೇಲೆ ಸುಟ್ಟುಹೋದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಮೃತ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಇದು ಕೊಲೆ ಎಂದು ತಿಳಿದುಬಂದಿದೆ. ಪೊಲೀಸರು ವಿಚಾರಣೆ ನಡೆಸಿದಾಗ ಆತನ ಪತ್ನಿ ಮತ್ತು ಪ್ರೇಯಸಿ ಸೇರಿ ಕೊಲೆ ಮಾಡಿದ್ದಾರೆ ಎಂಬ ವಿಚಾರ ಬಯಲಾಗಿದೆ.

ರಾಘವೇಂದ್ರ ಯಾದವನ ಪತ್ನಿ ಮತ್ತು ಪ್ರೇಯಸಿ ಇಬ್ಬರೂ ಆತನ ವರ್ತನೆಯಿಂದ ಬೇಸತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ಪತ್ನಿಯನ್ನು ಹೊಡೆಯುತ್ತಿದ್ದ. ಅಶ್ಲೀಲ ಫೋಟೋಗಳನ್ನು ಇಟ್ಟುಕೊಂಡು ಪ್ರೇಯಸಿಯನ್ನು ಬ್ಲ್ಯಾಕ್‌ಮೇಲ್ ಮಾಡಿ ಮನೆಗೆ ಕರೆದುಕೊಂಡು ಬಂದು ಹೆಂಡತಿ ಎದುರಲ್ಲೇ ಲೈಂಗಿಕ ಕ್ರಿಯೆ ನಡೆಸುತ್ತಿದ್ದ. ಇದರಿಂದ ಪ್ರೇಯಸಿ ಮತ್ತು ಹೆಂಡತಿ ಬೇಸತ್ತಿದ್ದರು. ಅವರಿಬ್ಬರೂ ಪ್ಲಾನ್ ಮಾಡಿ ರಾಘವೇಂದ್ರನನ್ನು ಕೊಲ್ಲಲು ನಿರ್ಧರಿಸಿ ಆತನ ಆಹಾರದಲ್ಲಿ ಮಾದಕ ದ್ರವ್ಯವನ್ನು ಬೆರಸಿ ತಿನ್ನಿಸಿ ನಂತರ ತಲೆಗೆ ಕಬ್ಬಿಣದ ರಾಡಿನಿಂದ ಹೊಡೆದು ಸಾಯಿಸಿದ್ದಾರೆ. ಶಾರ್ಟ್ ಸರ್ಕ್ಯೂಟ್ ಅಪಘಾತವೆಂದು ತೋರಿಸಲು ಅವರು ಹಾಸಿಗೆಯ ಮೇಲಿನ ಹೊದಿಕೆಗೆ ಬೆಂಕಿ ಹಚ್ಚಿ ಸುಟ್ಟುಹಾಕಿದರು. ಬಳಿಕ ಪ್ರೇಯಸಿ ಪರಾರಿಯಾಗಿದ್ದಾಳೆ ಎಂದು ಪೊಲೀಸರಿಗೆ ವಿಚಾರಣೆಯ ವೇಳೆ ತಿಳಿದು ಬಂದಿದೆ.

Related Posts

Leave a Reply

Your email address will not be published. Required fields are marked *