Menu

ಗ್ರಾಹಕರ ದೂರು ತಿಂಗಳಲ್ಲಿ ಇತ್ಯರ್ಥಗೊಳಿಸದಿದ್ರೆ ಬ್ಯಾಂಕ್‍ಗಳಿಗೆ ದಿನಕ್ಕೆ 100 ರೂ. ದಂಡ

ದೇಶದ ಬ್ಯಾಂಕ್‍ ಗಳು ಹಾಗೂ ಹಣಕಾಸು ಸಂಸ್ಥೆಗಳು ತಮ್ಮ ಗ್ರಾಹಕರ ದೂರುಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸ ಬೇಕು, ಇಲ್ಲವಾದರೆ ದಿನದ ಆಧಾರದಲ್ಲಿ ದಂಡ ಪಾವತಿಸಬೇಕಾಗುತ್ತದೆ ಎಂದು ರಿಸರ್ವ್ ಬ್ಯಾಂಕ್ ಹೇಳಿದೆ.

ಒಂದು ತಿಂಗಳೊಳಗೆ ಗ್ರಾಹಕರ ದೂರು ಇತ್ಯರ್ಥವಾಗದೇ ಹೋದಲ್ಲಿ ದಿನಕ್ಕೆ 100 ರೂ.ನಂತೆ ದಂಡ ವಿಧಿಸಲಾಗು ವುದು ಎಂದು ಆರ್‌ಬಿಐ ಸೂಚನೆ ನೀಡಿದೆ. ಕ್ರೆಡಿಟ್ ಇನ್ಫಾರ್ಮೇಶನ್ (ಸಾಲ ಮಾಹಿತಿ) ಕಂಪನಿಗಳಿಗೂ ಈ ನಿಯಮ ಅನ್ವಯ ಆಗುತ್ತದೆ ಎಂದು ತಿಳಿಸಿದೆ.

ದಂಡದ ಹಣವನ್ನು ಗ್ರಾಹಕರಿಗೆ ಪರಿಹಾರವಾಗಿ ನೀಡಲಾಗುತ್ತದೆ. ಸಿಬಿಲ್, ಎಕ್ಸ್ಪೀರಿಯನ್ ಇತ್ಯಾದಿ ಕ್ರೆಡಿಟ್ ಇನ್ಫಾರ್ಮೇಶನ್ ಕಂಪನಿಗಳು (ಸಿಐಸಿ) ಯಾವುದೇ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆ ತಮ್ಮ ಗ್ರಾಹಕರ ಕ್ರೆಡಿಟ್ ಮಾಹಿತಿಯನ್ನು ಪಡೆದುಕೊಂಡಲ್ಲಿ ಆ ಬಗ್ಗೆ ಗ್ರಾಹಕರಿಗೆ ಇಮೇಲ್ ಅಥವಾ ಎಸ್ಸೆಮ್ಮೆಸ್ ಮುಖಾಂತರ ಮಾಹಿತಿ ತಿಳಿಸ ಬೇಕು ಎಂದು ಆರ್‌ಬಿಐ ಆದೇಶಿಸಿದೆ.

ಗ್ರಾಹಕರು  ಸಾಲ ಮರುಪಾವತಿಸದೇ ಡೀಫಾಲ್ಟ್ ಆಗುತ್ತಿದ್ದರೆ ಆ ಮಾಹಿತಿಯನ್ನು ಗ್ರಾಹಕರಿಗೆ ತಿಳಿಸಬೇಕು. ಇದನ್ನು 21 ದಿನದೊಳಗೆ ತಿಳಿಸದಿದ್ದರೆ ದಿನಕ್ಕೆ 100 ರೂನಂತೆ ಗ್ರಾಹಕರಿಗೆ ಪರಿಹಾರ ಒದಗಿಸಬೇಕಾಗುತ್ತದೆ ಎಂದೂ ಎಚ್ಚರಿಕೆ ನೀಡಿದೆ.

ಒಂದು ವೇಳೆ ದೂರನ್ನು ತಿರಸ್ಕರಿಸಿದಲ್ಲಿ ಕಾರಣವನ್ನು ತಿಳಿಸಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಕಟ್ಟುನಿಟ್ಟಿನ ಸೂಚನೆ ನೀಡಿದೆ.

Related Posts

Leave a Reply

Your email address will not be published. Required fields are marked *