ಸಂಚಾರ
‘ಜನಶತಾಬ್ದಿ’ ಮತ್ತು ಸಾಮಾನ್ಯ ರೈಲು ವಿಸ್ತರಣೆಗೆ ಪ್ರಯಾಣಿಕರ ತೀವ್ರ ಒತ್ತಾಯ!
ಉದಯಕಾಲ ನ್ಯೂಸ್,ಹುಬ್ಬಳ್ಳಿ: ರಾಜ್ಯದ ವಾಣಿಜ್ಯ ನಗರಿ ಹುಬ್ಬಳ್ಳಿ ಭಾಗಕ್ಕೆ ರೈಲು ಸಂಪರ್ಕವನ್ನು ಮತ್ತಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಸಾರ್ವಜನಿಕರಿಂದ ಹಾಗೂ ಪ್ರಯಾಣಿಕರಿಂದ ಮಹತ್ವದ ಬೇಡಿಕೆಗಳು ಮುನ್ನೆಲೆಗೆ ಬಂದಿವೆ. ಪ್ರಸ್ತಾವಿತ ಬೆಂಗಳೂರು–ಮುಂಬೈ ವಂದೇ ಭಾರತ್ ಸ್ಲೀಪರ್ ಎಕ್ಸ್ಪ್ರೆಸ್ ರೈಲನ್ನು ಹುಬ್ಬಳ್ಳಿ ಮಾರ್ಗವಾಗಿಯೂ ಸಂಚರಿಸುವಂತೆ ಒತ್ತಾಯ ಕೇಳಿಬರುತ್ತಿದೆ. ಈ ಬೆನ್ನಲ್ಲೇ ಮತ್ತೊಂದೆಡೆ ವಂದೇ ಭಾರತ್ ರೈಲುಗಳ ದುಬಾರಿ ಬೆಲೆ ಬಡ ಹಾಗೂ ಮಧ್ಯಮ ವರ್ಗದ ಜನರ ಜೇಬಿಗೆ ಹೊರೆಯಾಗಿದೆ. ‘ಜನಶತಾಬ್ದಿ’ ಸೇರಿದಂತೆ ಕಡಿಮೆ ದರದ

