ಪೊಲೀಸ್ ಇಲಾಖೆ
ಪೊಲೀಸ್ ಹಾಗೂ ಎಫ್ಎಸ್ಎಲ್ ಹೆಮ್ಮೆ : 7 ಅಧಿಕಾರಿ ಹಾಗೂ ಸಿಬ್ಬಂದಿಗೆ ದಕ್ಷತಾ ಪದಕ
ಉದಯಕಾಲ ನ್ಯೂಸ್,ಬೆಂಗಳೂರು: ತನಿಖಾ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ, ವೃತ್ತಿಪರತೆ ಹಾಗೂ ಅಸಾಧಾರಣ ಸಾಧನೆಗೈದ ಕರ್ನಾಟಕದ ಪೊಲೀಸ್ ಇಲಾಖೆ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ (FSL) ಒಟ್ಟು 7 ಮಂದಿ ಸಮರ್ಥ ಅಧಿಕಾರಿಗಳು ಮತ್ತು ಸಿಬ್ಬಂದಿಗೆ 2026ನೇ ಸಾಲಿನ ಪ್ರತಿಷ್ಠಿತ ‘ಕೇಂದ್ರ ಗೃಹ ಮಂತ್ರಿಗಳ ದಕ್ಷತಾ ಪದಕ’ ಒಲಿದುಬಂದಿದೆ. ರಾಜ್ಯಕ್ಕೆ ಹಾಗೂ ಇಲಾಖೆಗೆ ಕೀರ್ತಿ ತಂದಿರುವ ಈ ಸಾಧಕರ ಪಟ್ಟಿಯನ್ನು ಕೇಂದ್ರ ಸರ್ಕಾರ ಪ್ರಕಟಿಸಿದ್ದು, ಪ್ರಶಸ್ತಿ ಭಾಜನರಾದ ಎಲ್ಲರಿಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರು

