Menu

ಮನಸ್ತಾಪ ಬಿಟ್ಟು ಸ್ನೇಹಿತರಾದ ಗಾನವಿ, ಗಗನ್: ಬಿರುಗಾಳಿ ಎದ್ದಿದ್ದ ಬಿಗ್‌ಬಾಸ್‌ನಲ್ಲಿ ಈಗ ಪಾಸಿಟಿವ್ ವೈಬ್!

ಉದಯಕಾಲ ನ್ಯೂಸ್, ಬೆಂಗಳೂರು: ಕಳೆದ ಕೆಲ ದಿನಗಳಿಂದ ತೀವ್ರ ವಾಗ್ವಾದ, ಪರಸ್ಪರ ಆರೋಪ-ಪ್ರತ್ಯಾರೋಪ ಹಾಗೂ ವೈಯಕ್ತಿಕ ಟೀಕೆಗಳಿಂದಾಗಿ ಬಿರುಗಾಳಿಯಂತೆ ಎದ್ದಿದ್ದ ಬಿಗ್‌ಬಾಸ್ (Bigg Boss Kannada) ಮನೆಯಲ್ಲಿ ಸದ್ಯ ಪಾಸಿಟಿವ್ ವೈಬ್ ಕಾಣಿಸಿಕೊಂಡಿದೆ. ಹಿಂದಿನ ವಾರಗಳಲ್ಲಿ ವೈಯಕ್ತಿಕ ವಿಚಾರಗಳನ್ನು ಕೆದಕಿ ತೀವ್ರವಾಗಿ ಜಗಳವಾಡಿಕೊಂಡಿದ್ದ ಸ್ಪರ್ಧಿಗಳಾದ ಗಾನವಿ (Ganavi) ಹಾಗೂ ಗಗನ್ (Gagan) ತಮ್ಮ ನಡುವಿನ ಎಲ್ಲಾ ಮನಸ್ತಾಪಗಳನ್ನು ಬದಿಗಿಟ್ಟು ಹೊಸ ಸ್ನೇಹದ ಹೆಜ್ಜೆ ಇಟ್ಟಿದ್ದಾರೆ. ಈ ಕುರಿತು ಕಲರ್ಸ್ ಕನ್ನಡ