Menu

ಅಯೋಧ್ಯೆಯಲ್ಲಿ ಶ್ರೀರಾಮನ ದುಡ್ಡು ಕದ್ದವರಾರು?

ಅಯೋಧ್ಯೆ ರಾಮ ದೇವರ ಹೆಸರಿನಲ್ಲಿ ಸಂಗ್ರಹವಾದ ದುಡ್ಡು ಕದ್ದು ಅಕ್ರಮಗಳಲ್ಲಿ ತೊಡಗಿದವರು ಹಿಂದು ಧರ್ಮದ್ರೋಹಿಗಳೂ ಹೌದು. ಇಂತಹವರ ಮುಖವಾಡಗಳನ್ನು ಕಳಚಲು ಯೋಗಿ ಆದಿತ್ಯನಾಥ್ ಹಿಂಜರಿಯಬಾರದು.

ಬೆಂಕಿ ಇಲ್ಲದೆ ಹೊಗೆಯಾಡಲು ಸಾಧ್ಯವೇ ? ಅಯೋಧ್ಯೆ ರಾಮಮಂದಿರ ನಿರ್ಮಾಣ ಸಂಬಂಧಿ ಸ್ಥಾಪಿತ ಟ್ರಸ್ಟ್ ಈಗ ವಿವಾದದ ಮಹಾಸುಳಿಗೆ ಸಿಲುಕಿದೆ. ದೇಣಿಗೆ ವಿಚಾರದಲ್ಲಿ ಈವರೆಗೆ ಎಂಟು ಮಂದಿ ಆರೋಪಿಗಳ ಬಂಧನವಾಗಿದೆ. ಮಿಗಿಲಾಗಿ ಉತ್ತರ ಪ್ರದೇಶ ಸರ್ಕಾರ ಆರೋಪಗಳ ತನಿಖೆಗೆ ವಿಶೇಷ ತನಿಖಾ ತಂಡವನ್ನು ರಚಿಸಿದೆ. ಮತ್ತೊಂದು ಕಡೆ ಟ್ರಸ್ಟ್‌ನ ಪ್ರಮುಖ ಪದಾಧಿಕಾರಿಗಳು ತಮ್ಮ ಹುದ್ದೆಗಳಿಗೆ ರಾಜೀನಾಮೆ ಸಲ್ಲಿಸಿರುವುದು ಗಮನಾರ್ಹ. ಇದೇನೆ ಇರಲಿ. ಈ ವಿದ್ಯಮಾನಗಳಿಂದ ದೇಶದ ಜನತೆ, ಅದರಲ್ಲಿಯೂ ಮುಖ್ಯವಾಗಿ ಶೀರಾಮ ಭಕ್ತಕೋಟಿ ಅಘಾತಕ್ಕೆ ಒಳಗಾಗಿರುವುದು ಹೌದು.

ರಾಮಮಂದಿರ ನಿರ್ಮಾಣ ಸಂಬಂಧ ರಚನೆಗೊಂಡ ಟ್ರಸ್ಟ್ ದೇಶವಲ್ಲದೆ ವಿದೇಶಗಳಲ್ಲಿ ವಾಸವಾಗಿರುವ ಕೋಟ್ಯಂತರ ಮಂದಿ ಭಕ್ತರಿಂದ ನಗದು, ಚಿನ್ನ ಬೆಳ್ಳಿ ಸೇರಿದಂತೆ ನಾನಾ ತರಹೆಯ ಕಾಣಿಕೆಗಳನ್ನು ಸಂಗ್ರಹಿಸಿದೆ . ಆದರೆ ಇವುಗಳ ಲೆಕ್ಕ ಪತ್ರಗಳ ನಿರ್ವಹಣೆಯಲ್ಲಿ ಹಲವು ಹತ್ತು ಲೋಪಗಳು ಕಂಡು ಬಂದಿವೆ. ಈ ಲೋಪಗಳನ್ನು ಲಘುವಾಗಿ ಪರಿಗಣಿಸುವಂತಿಲ್ಲ. ಏಕೆಂದರೆ ಆಯೋಧ್ಯೆ ಶ್ರೀರಾಮನ ಮೇಲೆ ಈ ದೇಶದ ಜನತೆ ಹೊಂದಿರುವ ಬಲವಾದ ನಂಬಿಕೆ ಮತ್ತು ಅಚಲಭಕ್ತಿಗೆ ಈಗ ಮಾಧ್ಯಮಗಳಲ್ಲಿ ಬಿತ್ತರವಾದ ವಿದ್ಯಮಾನಗಳು ನೇರವಾಗಿ ಅಡ್ಡ ಪರಿಣಾಮವನ್ನು ಬೀರಿದೆ.

ರಾಮನ ಹೆಸರು ಹೇಳಿಕೊಂಡು ಟ್ರಸ್ಟ್ ಸಂಗ್ರಹಿಸಿದ ಹಣ ಮತ್ತು ಆಭರಣಗಳ ಸಮರ್ಪಕ ನಿರ್ವಹಣೆ ಆಗಿಲ್ಲವೆಂಬುದು ಈಗ ಸ್ಪಷ್ಟ. ಟ್ರಸ್ಟ್‌ಗೂ ,ಸರ್ಕಾರಕ್ಕೂ ನೇರ ಸಂಬಂಧವಿಲ್ಲ. ಆದರೆ ಈ ಟ್ರಸ್ಟ್‌ನಲ್ಲಿ ಕಾರ್ಯ ನಿರ್ವಹಿಸಿದ ವ್ಯಕ್ತಿಕಗಳು ಸಾಮಾನ್ಯರಂತೂ ಅಲ್ಲ. ಪ್ರತ್ಯಕ್ಷ, ಪರೋಕ್ಷವಾಗಿ ರಾಜಕೀಯ ಪಕ್ಷಗಳ ಜೊತೆ ನಿಕಟ ಸಂಬಂಧವನ್ನು ಹೊಂದಿರುವಂತಹ ಸಮಾಜದ ಗಣ್ಯ ವ್ಯಕ್ತಿಗಳು ಇವರಿಂದು ದೇವರ ಹೆಸರಿನಲ್ಲಿ ರಚನೆಗೊಂಡ ಟ್ರಸ್ಟ್ ಮತ್ತು ಇದಕ್ಕೆ ಸಂಬಂಧಿಸಿದ ಲೆಕ್ಕಪತ್ರಗಳು ಮತ್ತು ವ್ಯವಹಾರವನ್ನು ಕರಾರುವಾಕ್ ಆಗಿ ಕಾನೂನಾತ್ಮಕವಾಗಿ ನಿರ್ವಹಿಸುವುದು ಅನಿವಾರ್ಯ .

ಕಳೆದ ಮೂರು ವರ್ಷಗಳ ಹಿಂದೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಗೊಂಡು ರಾಮಲಲ್ಲ ಪೂಜಾ ಕೈಂಕರ್ಯ ಪ್ರಾರಂಭವಾದ ಮೇಲೆ ದೇಶದಲ್ಲಿಯೇ ಅತಿ ಹೆಚ್ಚು ಭಕ್ತರನ್ನು ಪ್ರತಿ ನಿತ್ಯ ತನ್ನತ್ತ ಬರಸೆಳೆಯುವ ಕೇಂದ್ರ ಬಿಂದುವಾಗಿ ಪರಿವರ್ತಿತವಾಗಿದೆ. ಈ ದಿಶೆಯಲ್ಲಿ ನಿತ್ಯವೂ ಭಕ್ತರಿಂದ ಸಂಗ್ರಹವಾಗುವ ಹಂಡಿ ಮತ್ತು ದೇಣಿಗೆ , ಇವೆಲ್ಲವೂ ಸಮರ್ಪಕ ಲೆಕ್ಕ ಪತ್ರಗಳನ್ನು ಒಳಗೊಂಡಿರಬೇಕು. ಆದರೆ ಈ ವಿಚಾರದಲ್ಲಿ ಕೆಲವು ಲೋಪಗಳು ಕಂಡು ಬಂದಿದ್ದು ಈ ವಿಚಾರದಲ್ಲಿ ರಾಜ್ಯ ಸರ್ಕಾರ ಮುತುವರ್ಜಿ ವಹಿಸಿ ಕ್ರಮ ಕೈಗೊಂಡಿದೆ. ಭಕ್ರರ ಹಣವನ್ನು ಯಾರೋ ಕೆಲವೇ ಮಂದಿ ದೋಚುತ್ತಿದ್ದಾರೆಂಬ ಸಂದೇಶ ಈ ಜನತೆಗೆ ತಲುಪಬಾರದು. ಹೀಗಾಗಬೇಕಾದರೆ ಇದಕ್ಕೆ ಸಂಬಂಧಿಸಿದ ಮೂಲ ದಾಖಲೆಗಳನ್ನು ತನಿಖಾಧಿಕಾರಿಗಳು ಮುಟ್ಟುಗೋಲು ಹಾಕಿದ್ದು ಇದರ ಪರಿಶೀಲನೆಯಲ್ಲಿ ತೊಡಗಿದ್ದಾರೆ. ದೇವರ ದುಡ್ಡು ಕದಿಯುವ ಕೆಲಸದಲ್ಲಿ ತೊಡಗಿದವರು ಧರ್ಮದ್ರೋಹಿಗಳು ಹೌದು. ಇಂತಹವರ ಮುಖವಾಡಗಳನ್ನು ಕಳಚಲು ಯೋಗಿ ಆದಿತ್ಯನಾಥ್ ಹಿಂಜರಿಯಬಾರದು.

Related Posts

Leave a Reply

Your email address will not be published. Required fields are marked *