Menu

ನೇಪಾಳದಲ್ಲಿ ಮತ್ತೆ ಪ್ರವಾಹ, ಭೂಕುಸಿತ: 21 ಮಂದಿ ಸಾವು

ಕಳೆದ ಆಗಸ್ಟ್‌ನಲ್ಲಿ ನೇಪಾಳದಲ್ಲಿ ಭೀಕರ ಪ್ರವಾಹ ಮತ್ತು ಭೂಕುಸಿತಕ್ಕೆ 1,450ಕ್ಕೂ ಹೆಚ್ಚು ಜನ ಬಲಿಯಾಗಿದ್ದು, ಈಗ ಮತ್ತೆ ಪ್ರವಾಹ ಮತ್ತು ಭೂಕುಸಿತ ಸಂಭವಿಸಿ 21 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ನೇಪಾಳದ ಹಲವೆಡೆ ವ್ಯಾಪಕ ಮಳೆ ಸುರಿಯುತ್ತಿದ್ದು, ಪ್ರವಾಹದಿಂದ ಮನೆಗಳು ಹಾನಿಗೊಂಡಿವೆ. ರಸ್ತೆ ಸಂಚಾರಕ್ಕೂ ತೊಡಕುಂಟಾಗಿದೆ. ಭೂಕುಸಿತ ದೃಶ್ಯ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇಳಿಜಾರು ಇರುವ ಒಂದು ಭಾಗವೇ ಸಂಪೂರ್ಣ ಕುಸಿದು ಜನ ಕಂಗೆಟ್ಟು ಸಿಕ್ಕಲ್ಲಿಗೆ ಓಡುತತಿರುವುದು ಆ ವೀಡೊಇಯೊದಲ್ಲಿ ದಾಖಲಾಗಿದೆ.