Madhyama Tirupati
ಭಕ್ತಿ, ಕಷ್ಟ ಸುಖ, ದುಃಖ ದುಮ್ಮಾನ ವಿನಿಮಯ ಸ್ಥಳವೇ ದೇವಾಲಯ: ಡಿಸಿಎಂ
“ಭಕ್ತ ಹಾಗೂ ಭಗವಂತನ ನಡುವೆ ಭಕ್ತಿ ಸೇರಿದಂತೆ ನಮ್ಮ ಕಷ್ಟ ಸುಖ, ದುಃಖ ದುಮ್ಮಾನಗಳು ವಿನಿಮಯವಾಗುವ ಸ್ಥಳವೇ ದೇವಾಲಯ. ನಾವೆಲ್ಲರೂ ಪ್ರಾರ್ಥಿಸುವುದಕ್ಕೆ ದೇವಾಲಯಗಳಿಗೆ ಹೋಗುತ್ತೇವೆ” ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು. ಚಿಕ್ಕಬಾಣಾವರದ ರಾಮಚಂದ್ರ ದೇಗುಲ ಜೀರ್ಣೋದ್ದಾರ ಪುನಃ ಪ್ರತಿಷ್ಟಾಪನೆ ಹಾಗೂ ವೆಂಕಟೇಶ್ವರಸ್ವಾಮಿ ನೂತನ ಸ್ಥಿರ ಬಿಂಬ ಪ್ರತಿಷ್ಟಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ ದರು. “ಮಾತು ಬಿಡದ ಮಂಜುನಾಥ, ಕಾಸು ಬಿಡದ ತಿಮ್ಮಪ್ಪ ಎನ್ನುವ ಮಾತಿದೆ. ಧರ್ಮಸ್ಥಳ ಮಂಜುನಾಥನ ಮುಂದೆ


