Menu

ತಂಗಿಯನ್ನು ಆರನೇ ಮದುವೆಯಾಗಲು ಒಪ್ಪದ್ದಕ್ಕೆ ಸ್ನೇಹಿತನ ಕೊಲೆ

ಮಧ್ಯಪ್ರದೇಶದ ಭೋಪಾಲ್​ನಲ್ಲಿ ಐದು ಮಹಿಳೆಯರನ್ನು ವಿವಾಹವಾಗಿದ್ದ ವ್ಯಕ್ತಿಯೊಬ್ಬ ಸ್ನೇಹಿತನ ತಂಗಿಯನ್ನು ಮದುವೆಯಾಗಲು ಬಯಸಿದಾಗ ನಿರಾಕರಿಸಿದ್ದಕ್ಕೆ ಆತನನ್ನೇ ಕೊಲೆ ಮಾಡಿದ್ದಾನೆ. ಸ್ನೇಹಿತ ಸಂದೀಪ್ ಪ್ರಜಾಪತಿ ಕೊಲೆಯಾದವ. ಕೊಲೆ ಆರೋಪಿ ವಿಕಾಸ್ ಜೈಸ್ವಾಲ್ ಅಲಿಯಾಸ್ ಅವಕೇಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ತನಿಖೆಯ ನಂತರ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಹೈದರಾಬಾದ್‌ನಲ್ಲಿ ಬಂಧಿಸಿದ್ದಾರೆ. ಕೊಲೆಯಾದವನ ತಂದೆ ಸೂರಜ್ ಪ್ರಜಾಪತಿ ತನ್ನ ಮಗ ಕಾಣೆಯಾಗಿದ್ದಾನೆ ಎಂದು ದೂರು ದಾಖಲಿಸಿದ್ದರು. ಅದೇ ದಿನ ಸಂದೀಪ್ ಸಹೋದರಿ ವಂದನಾ ಅವರಿಗೆ