Menu

ಖಾನಾಪುರ ಕಾಡಂಚಿನ ಸಮುದಾಯಗಳ ಬದುಕು: ‘ಉದಯಕಾಲ’ ಕಳಕಳಿಗೆ ಡಿಸಿ ಮೆಚ್ಚುಗೆ, ಜ.28ಕ್ಕೆ ವಿಶೇಷ ಸಭೆ

ಖಾನಾಪುರದ  ಕಾಡಂಚಿನ ಸಮುದಾಯಗಳ ಬದುಕಿಗೆ ಆಶಾಕಿರಣ ಗೋಚರಿಸಿದ್ದು,  ಜನೆವರಿ 28ಕ್ಕೆ ಅಧಿಕಾರಿಗಳ ವಿಶೇಷ ಸಭೆ ನಡೆಯಲಿದೆ.ಹಕ್ಕಿ-ಪಿಕ್ಕಿ, ಕಾತಕರಿ ಸಮುದಾಯದ ಸಮಸ್ಯೆಗಳಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ,  ‘ಉದಯಕಾಲ’ ದಿನಪತ್ರಿಕೆಯ ಸಾಮಾಜಿಕ ಕಳಕಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  ಖಾನಾಪುರ ತಾಲೂಕಿನ ನಂದಗಡ ಭಾಗದ ಕಾಡಂಚಿನಲ್ಲಿ ವಾಸಿಸುತ್ತಿರುವ ಹಕ್ಕಿ-ಪಿಕ್ಕಿ ಹಾಗೂ ಕಾತಕರಿ ಸಮುದಾಯಗಳ ದಶಕಗಳ ಕಾಲದ ಸಮಸ್ಯೆಗಳಿಗೆ ಕೊನೆಗೂ ಪರಿಹಾರ ಸಿಗುವ ಲಕ್ಷಣಗಳು ಗೋಚರಿಸುತ್ತಿವೆ. ಈ ಸಮುದಾಯಗಳಿಗೆ ವಸತಿ, ಜಮೀನು ಹಾಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ