kannada news
ಅಣ್ಣನ ಮನೆಯಿಂದ ಚಿನ್ನಾಭರಣ ಕಳವುಗೈದಾತ ಅರೆಸ್ಟ್
ಹೊಸದಾಗಿ ಏನಾದರೂ ಬ್ಯುಸಿನೆಸ್ ಮಾಡಬೇಕೆಂದು ಯೋಚಿಸಿ ಅದಕ್ಕೆ ಹಣ ಹೊಂದಿಸಲು ಅಣ್ನನ ಮನೆಯಲ್ಲೇ ಚಿನ್ನಾಭರಣ ಕದ್ದು ಪರಾರಿಯಾಗಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಿನ ಬೇಗೂರಿನಲ್ಲಿ ನಡೆದಿದೆ. ವಿನಯ್ ಕುಮಾರ್ ಬಂಧಿತ ಆರೋಪಿ. ಸಂಬಂಧದಲ್ಲಿ ತಮ್ಮನಾಗಿರುವ ವಿನಯ್ ಹೋಟೆಲ್ ಮ್ಯಾನೇಜ್ಮೆಂಟ್ ಓದಿಕೊಂಡಿದ್ದ, ಹೊಸ ಬ್ಯುಸಿನೆಸ್ ಶುರು ಮಾಡಬೇಕು ಎಂದು ಹಣ ಹೊಂದಿಸಲು ಅಣ್ಣನ ಮನೆಯಲ್ಲಿ ಚಿನ್ನಾಭರಣ ಕಳವು ಮಾಡುವ ಪ್ಲಾನ್ ರೂಪಿಸಿ ಕಾರ್ಯಗತಗೊಳಿಸಿದ್ದ. ಅಣ್ಣ ಊರಿಗೆ ಹೋದ ದಿನ ತಿಳಿದುಕೊಂಡು
ತಮಿಳುನಾಡಿಗೆ ಕಾವೇರಿ ನೀರು: ರೈತರ, ಕನ್ನಡಪರ ಸಂಘಟನೆಗಳ ಪ್ರತಿಭಟನೆ
ಕಾವೇರಿ ನದಿಯಿಂದ ತಮಿಳುನಾಡಿಗೆ ಮತ್ತೆ 9,000 ಕ್ಯೂಸೆಕ್ ನೀರನ್ನು ೧೫ ದಿನ ಹರಿಸಬೇಕು ಎಂದು ಕಾವೇರಿ ನೀರು ನಿರ್ವಹಣಾ ಸಮಿತಿ ನೀಡಿರುವ ಆದೇಶವನ್ನು ಖಂಡಿಸಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ರೈತರು ಮತ್ತು ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಮಂಡ್ಯ ರಕ್ಷಣಾ ವೇದಿಕೆ
ವಿಷಕಾರಿ ದತ್ತೂರಿ ಬೀಜ ಮಾರಾಟ: ಅಮೆಜಾನ್, ಸ್ವಿಗ್ಗಿ ಇನ್‌ಸ್ಟಾಮಾರ್ಟ್, ಬಿಗ್‌ಬಾಸ್ಕೆಟ್ ಲೈಸನ್ಸ್ ಅಮಾನತು
ವಿಷದ ಅಂಶ ಒಳಗೊಂಡಿರುವ ದತ್ತೂರಿ ಹಣ್ಣು ಹಾಗೂ ಬೀಜಗಳನ್ನು ಆಹಾರ ಪದಾರ್ಥಗಳ ರೀತಿ ಮಾರಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಇಲಾಖೆಯು ಅಮೆಜಾನ್, ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಹಾಗೂ ಬಿಗ್‌ಬಾಸ್ಕೆಟ್ ಸಂಸ್ಥೆಗಳ ಆಹಾರ ಪೂರೈಕೆ ಪರವಾನಗಿಯನ್ನು
ಅಮೆರಿಕದ ನಿರ್ಬಂಧಗಳಿಗೆ ತಲೆ ಬಾಗುವುದಿಲ್ಲ, ಪ್ರತೀಕಾರಕ್ಕೆ ಸಿದ್ಧವೆಂದ ಇರಾನ್
ಅಮೆರಿಕದ ಯಾವುದೇ ಬೆದರಿಕೆ, ನಿರ್ಬಂಧ ಮತ್ತು ಹೊಸ ಕ್ರಮಗಳಿಗೆ ತಲೆ ಬಾಗುವುದಿಲ್ಲ, ಅಗತ್ಯವಾದರೆ ತೀವ್ರ ಪ್ರತೀಕಾರಕ್ಕೆ ಸಿದ್ಧವೆಂದು ಇರಾನ್ ಎಚ್ಚರಿಕೆ ನೀಡಿದೆ. ಟ್ರಂಪ್ ಆಡಳಿತ ಇರಾನ್ ವಿರುದ್ಧ ಆರ್ಥಿಕ ನಿರ್ಬಂಧ ಮತ್ತಷ್ಟು ಬಿಗಿಗೊಳಿಸಿರುವ ಬಳಿಕ ಉಭಯ ದೇಶಗಳ ನಡುವಿನ ಉದ್ವಿಗ್ನತೆ ಮತ್ತೆ
ಸಿಗ್ನಲ್‌ನಲ್ಲಿ ನಿಂತಿದ್ದ ವಾಹನಗಳಿಗೆ ಕಾರು ಡಿಕ್ಕಿ: ಬೈಕ್ ಸವಾರ ಸಾವು
ಬೆಂಗಳೂರಿನ ಕಗ್ಗದಾಸನಪುರ ಮುಖ್ಯ ರಸ್ತೆಯ ವಿಜ್ಞಾನ ನಗರದಲ್ಲಿ ವೇಗವಾಗಿ ಬಂದ ಕಾರೊಂದು ಸಿಗ್ನಲ್‌ನಲ್ಲಿ ನಿಂತಿದ್ದ ಮತ್ತೊಂದು ಕಾರು ಹಾಗೂ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ೩೩ ವರ್ಷದ ನವೀನ್ ಮೃತಪಟ್ಟವರು. ಅವರು ವಿಜ್ಞಾನನಗರ ಸಿಗ್ನಲ್‌ನಲ್ಲಿ
ವಿರೋಧ ಪಕ್ಷಕ್ಕೆ ರಾಜಕಾರಣಕ್ಕಿಂತ ರಾಜ್ಯದ ಹಿತ ಮುಖ್ಯವಾಗಲಿ: ಸಿಎಂ ಡಿಕೆ ಶಿವಕುಮಾರ್
ರಾಜ್ಯದ ಹಿತ ಕಾಪಾಡಲು ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ಸದಸ್ಯರು ಒಗ್ಗಟ್ಟಾಗಿ ಕೆಲಸ ಮಾಡಬೇಕು. ರಾಜಕಾರಣಕ್ಕಿಂತ ಜನರ ಸಮಸ್ಯೆಗಳ ಚರ್ಚೆಗೆ ವಿಧಾನಮಂಡಲದ ಕಲಾಪವನ್ನು ಬಳಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರೋಧ ಪಕ್ಷದ ಸದಸ್ಯರಿಗೆ ಮನವಿ ಮಾಡಿದರು. ವಿಧಾನ ಪರಿಷತ್ತಿನಲ್ಲಿ
SIR ಕರಡು ಮತದಾರರ ಪಟ್ಟಿ ಪ್ರಕಟ: ಕೋಟಿಗೂ ಹೆಚ್ಚು ಮಂದಿಯ ಹೆಸರು ಡಿಲಿಟ್
ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪೂರ್ಣಗೊಂಡಿದ್ದು, ಮೊದಲ ಕರಡು ಮತದಾರರ ಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿದೆ. ಒಂದು ಕೋಟಿಗೂ ಹೆಚ್ಚು ಮಂದಿಯ ಹೆಸರು ಡಿಲಿಟ್ ಆಗಿದೆ. ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಎಸ್ಐಆರ್-2026 ಕರಡು ಮತದಾರರ ಪಟ್ಟಿ
ಪ್ರತಿಪಕ್ಷಕ್ಕೆ ಮಾಧ್ಯಮ ಪ್ರಸಾರ ತಾರತಮ್ಯ: ವಿಧಾನಸಭಾಧ್ಯಕ್ಷರಿಗೆ ಆರ್ ಅಶೋಕ ದೂರು
ಸದನದ ಕಲಾಪಗಳಲ್ಲಿ ಪ್ರತಿಪಕ್ಷದ ಸದಸ್ಯರ ಹೇಳಿಕೆಗಳು, ಛಾಯಾಚಿತ್ರಗಳು ಹಾಗೂ ವೀಡಿಯೊ ತುಣುಕುಗಳನ್ನು ಅಧಿಕೃತ ಮಾಧ್ಯಮ ಪ್ರಸಾರದಿಂದ ಉದ್ದೇಶಪೂರ್ವಕವಾಗಿ ಕೈ ಬಿಡಲಾಗುತ್ತಿದೆ ಎಂದು ಆರೋಪಿಸಿ ಪ್ರತಿಪಕ್ಷ ನಾಯಕ ಆರ್ ಅಶೋಕ ವಿಧಾಸಭಾ ಅಧ್ಯಕ್ಷರಿಗೆ ದೂರು ಸಲ್ಲಿಸಿದ್ದಾರೆ. ಈ ಬಾರಿ ಮುಂಗಾರು ಅಧಿವೇಶನ ಆರಂಭಗೊಂಡ
ಬೌದ್ಧ ಅಭಿವೃದ್ಧಿ ನಿಗಮವನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಸೇರಿಸಲು ಸಿಎಂಗೆ ಮನವಿ
ರಾಜ್ಯದಲ್ಲಿನ ಬೌದ್ಧ ಸಮುದಾಯದ ಅಭಿವೃದ್ಧಿಗಾಗಿ ನೂತನವಾಗಿ ಘೋಷಿಸಲಾಗಿರುವ ಬೌದ್ಧ ಅಭಿವೃದ್ಧಿ ನಿಗಮವನ್ನು ಸಮಾಜ ಕಲ್ಯಾಣ ಇಲಾಖೆಯಿಂದ ಹಿಂಪಡೆದು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಡಿಯಲ್ಲೇ ಸ್ಥಾಪಿಸಬೇಕೆಂದು ಬೌದ್ಧ ಬಿಕ್ಕುಗಳ ನಿಯೋಗವು ಸಿಎಂ ಡಿಕೆ ಶಿವಕುಮಾರ್ ಅವರಿಗೆ ಮನವಿ ಮಾಡಿದೆ. ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ
ಸೈಬರ್ ವಂಚನೆ ಜಾಲ: ಇಬ್ಬರನ್ನು ಬಂಧಿಸಿದ ಇಡಿ
ದೇಶದಲ್ಲಿ ವ್ಯಾಪಿಸಿರುವ ಸೈಬರ್ ವಂಚನೆ ಜಾಲದ ವಿರುದ್ಧ ಜಾರಿ ನಿರ್ದೇಶನಾಲಯವು ತನಿಖೆ ತೀವ್ರಗೊಳಿಸಿದ್ದು, ಇಬ್ಬರನ್ನು ಬಂಧಿಸಿದೆ. ಜಾಲದಲ್ಲಿ 30,000 ಕೋಟಿ ರೂ. ಬ್ಯಾಂಕ್ ಮತ್ತು ನಗದು ವಹಿವಾಟು ನಡೆದಿರುವ ಶಂಕೆ ವ್ಯಕ್ತವಾಗಿದೆ. ಫಹೀಮ್ ಮೊಯಿನ್ ಹುಸೇನ್ ಸಯ್ಯದ್ ಮತ್ತು ನಯೀಮ್ ಮುಯೀನ್




