Hit and run
ಹಿಟ್ ಅಂಡ್ ರನ್: ದೊಡ್ಡಬಳ್ಳಾಪುರದಲ್ಲಿ ಯುವಕರಿಬ್ಬರು ಬಲಿ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ರಾಮಯ್ಯನಪಾಳ್ಯ ಬಳಿ ಹಿಟ್ ಅಂಡ್ ರನ್‌ಗೆ ಬೈಕ್ ಸವಾರರಿಬ್ಬರು ಬಲಿಯಾಗಿದ್ದಾರೆ. ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್ನಲ್ಲಿದ್ದ ಇಬ್ಬರು ಯುವಕರು ಪ್ರಾಣ ಕಳೆದುಕೊಂಡಿದ್ದಾರೆ. ತೂಬಗೆರೆ ನಿವಾಸಿ ನಂದನ್ ಕುಮಾರ್(22) ಮತ್ತು ದೊಡ್ಡತಿಮ್ಮನಹಳ್ಳಿಯ ರವಿಕುಮಾರ್(24) ಮೃತ ಯುವಕರು. ಮೃತ ಯುವಕರು ದೊಡ್ಡಬಳ್ಳಾಪುರ ನಗರದ ಎಲ್&ಟಿ ಕಂಪನಿ ಸಿಬ್ಬಂದಿ ಎಂಬುದಾಗಿ ತಿಳಿದು ಬಂದಿದೆ. ಬೈಕ್ಗೆ ಹಿಂದಿನಿಂದ ವೇಗವಾಗಿ ಬಂದ ಅಪರಿಚಿತ ವಾಹನ ಡಿಕ್ಕಿಯಾಗಿದ್ದು, ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.


