ರಾಜಧಾನಿಯ ಅಕ್ಕಪಕ್ಕದ ಜಿಲ್ಲೆಗಳಿಗೆ “ಬೆಂಗಳೂರು” ಹೆಸರು ಅಂಟಿಸಿ ರಿಯಲ್ ಎಸ್ಟೇಟ್ ದಂಧೆ ವಿಸ್ತರಿಸುವುದರಲ್ಲಿ ತೋರಿಸುತ್ತಿರುವ ಆಸಕ್ತಿಯ ಅರ್ಧದಷ್ಟಾದರೂ ಬೆಂಗಳೂರಿನ ಸುರಕ್ಷತೆ, ಕಾನೂನು ಸುವ್ಯವಸ್ಥೆ ಬಗ್ಗೆ ಈ ಕಾಂಗ್ರೆಸ್ ಸರ್ಕಾರಕ್ಕೆ ಕಾಳಜಿ ಇದ್ದಿದ್ದರೆ ಇಂದು ಸಿಲಿಕಾನ್ ಸಿಟಿ ‘ಕ್ರೈಂ ಸಿಟಿ’ ಆಗುತ್ತಿರಲಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ ಕಿಡಿ ಕಾರಿದ್ದಾರೆ.
ಬೆಂಗಳೂರಿನ ಅಕ್ಕಪಕ್ಕದ ಜಿಲ್ಲೆಗಳಿಗೆ ಬೆಂಗಳೂರು ಹೆಸರು ತಳಕು ಹಾಕಿ, ಜಮೀನಿನ ಬೆಲೆ ಏರಿಸಿ ರಿಯಲ್ ಎಸ್ಟೇಟ್ ಲಾಬಿಯ ಜೇಬು ತುಂಬಿಸುವುದನ್ನೇ ಏಕೈಕ ಅಜೆಂಡಾ ಮಾಡಿಕೊಂಡಿರುವ ಕಾಂಗ್ರೆಸ್ ಸರ್ಕಾರ ಬೆಂಗಳೂರಿನ ಅಭಿವೃದ್ಧಿ, ಕಾನೂನು ಸುವ್ಯವಸ್ಥೆಯನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದೆ. ಇದರ ಪರಿಣಾಮವಾಗಿ ನಮ್ಮ ಹೆಮ್ಮೆಯ ಸಿಲಿಕಾನ್ ಸಿಟಿ, ಕ್ರೈಮ್ ಸಿಟಿಯಾಗಿ ಮಾರ್ಪಟ್ಟಿದೆ. ಆವಿಷ್ಕಾರದ ರಾಜಧಾನಿ, ಅಪರಾಧಗಳ ರಾಜಧಾನಿಯಾಗಿ ಮಾರ್ಪಟ್ಟಿದೆ ಎಂದಿದ್ದಾರೆ.
2024ರಲ್ಲಿ ಬೆಂಗಳೂರಿನಲ್ಲಿ 176 ಕೊಲೆ ಪ್ರಕರಣಗಳು ದಾಖಲು. ಮಹಾನಗರಗಳ ಅಪರಾಧ ಪಟ್ಟಿಯಲ್ಲಿ ಬೆಂಗಳೂರು ಟಾಪ್ ನಗರಗಳಲ್ಲಿ ಒಂದಾಗಿದೆ. ದೇಶದಲ್ಲೇ ಕೊಲೆ ಪ್ರಕರಣಗಳಲ್ಲಿ 2ನೇ ಸ್ಥಾನ. ಮಹಿಳೆಯರ ಮೇಲಿನ ದೌರ್ಜನ್ಯ – 4,748 ಪ್ರಕರಣಗಳು, ಅದರಲ್ಲೂ 16 ಗ್ಯಾಂಗ್ ರೇಪ್ ಪ್ರಕರಣಗಳು ದಾಖಲಾಗಿವೆ. ಇದೇನಾಾಲ್ “ಬ್ರ್ಯಾಂಡ್ ಬೆಂಗಳೂರು” ಎಂದು ಪ್ರಶ್ನಿಸಿದ್ದಾರೆ.
ರಾಜಧಾನಿಯ ಅಕ್ಕಪಕ್ಕದ ಜಿಲ್ಲೆಗಳಿಗೆ “ಬೆಂಗಳೂರು” ಹೆಸರು ಅಂಟಿಸಿ ರಿಯಲ್ ಎಸ್ಟೇಟ್ ದಂಧೆ ವಿಸ್ತರಿಸುವುದರಲ್ಲಿ ತೋರಿಸುತ್ತಿರುವ ಆಸಕ್ತಿಯ ಅರ್ಧದಷ್ಟಾದರೂ ಬೆಂಗಳೂರಿನ ಸುರಕ್ಷತೆ, ಕಾನೂನು ಸುವ್ಯವಸ್ಥೆ ಬಗ್ಗೆ ಈ ಕಾಂಗ್ರೆಸ್ ಸರ್ಕಾರಕ್ಕಿದ್ದಿದ್ದರೆ ಇಂದು ಸಿಲಿಕಾನ್ ಸಿಟಿ ‘ಕ್ರೈಂ ಸಿಟಿ’ ಆಗುತ್ತಿರಲಿಲ್ಲ!
ಬೆಂಗಳೂರಿನ ಅಕ್ಕಪಕ್ಕದ… pic.twitter.com/4UHWbJrYwB
— R. Ashoka (@RAshokaBJP) May 21, 2026
ಒಂದೇ ವರ್ಷದಲ್ಲಿ 17,561 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿವೆ. ಜನರ ಬೆವರಿನ ಹಣವನ್ನು ಸೈಬರ್ ಕಳ್ಳರು ಲೂಟಿ ಮಾಡುತ್ತಿದ್ದಾರೆ. ಗಾಂಜಾ, ಹೆರಾಯಿನ್ ಸೇರಿ ₹98.69 ಕೋಟಿ ಮೌಲ್ಯದ ಮಾದಕ ವಸ್ತುಗಳು ವಶ.
ಆದರೆ ಡ್ರಗ್ ಮಾಫಿಯಾ ಮಾತ್ರ ನಿರ್ಭಯವಾಗಿ ಓಡಾಡುತ್ತಿದೆ ಎಂದು ಟೀಕಿಸಿದ್ದಾರೆ.
ಹಿರಿಯ ನಾಗರಿಕರಿಗೂ ಸುರಕ್ಷತೆಯಿಲ್ಲ, ಹಿರಿಯರನ್ನು ಗುರಿಯಾಗಿಸಿ 671 ಪ್ರಕರಣಗಳು ದಾಖಲಾಗಿವೆ. ಮಕ್ಕಳ ಅಪರಾಧ ಪ್ರಕರಣಗಳಲ್ಲಿ ಭಾರೀ ಏರಿಕೆಯಾಗಿದೆ. 2022ರಲ್ಲಿ 200 ಇದ್ದ ಪ್ರಕರಣಗಳು 2023ರಲ್ಲಿ 427ಕ್ಕೆ ಏರಿಕೆಯಾಗಿ 2024ರಲ್ಲಿ ಕೂಡ 386 ಪ್ರಕರಣಗಳು ದಾಖಲಾಗಿವೆ. ಇದೇನಾ “ಸಾಧನಾ ಸಮಾವೇಶ”ದ ಸಾಧನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇನಾ ನಿಮ್ಮ “ಬ್ರ್ಯಾಂಡ್ ಬೆಂಗಳೂರು”?!
ಬೆಂಗಳೂರು ಜನರ ಸುರಕ್ಷತೆ ಕುಸಿದು ಬಿದ್ದಿದೆ. ಆದರೆ ಗೃಹ ಸಚಿವ @DrParameshwara ಹಾಗೂ ಡಿಸಿಎಂ @DKShivakumar ಅವರಿಗೆ ತುಮಕೂರು-ರಾಮನಗರದ ರಿಯಲ್ ಎಸ್ಟೇಟ್ ಲಾಭದ ಚಿಂತೆಯೇ ಹೆಚ್ಚು. ಜನರ ಭದ್ರತೆಯಿಗಿಂತ ರಿಯಲ್ ಎಸ್ಟೇಟ್ ದಂಧೆಯೇ ಮುಖ್ಯವಾಗಿರುವ @INCKarnataka ಸರ್ಕಾರದಿಂದ ಇನ್ನೇನು ನಿರೀಕ್ಷಿಸಬಹುದು. ಜನರ ಜೀವ-ಆಸ್ತಿ ರಕ್ಷಿಸಲು ವಿಫಲವಾದ ಈ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯುವ ಯಾವುದೇ ನೈತಿಕ ಹಕ್ಕಿಲ್ಲ. ಬೆಂಗಳೂರಿನ ಗೌರವ, ಸುರಕ್ಷತೆ ಮತ್ತು ಭವಿಷ್ಯಕ್ಕಾಗಿ ಕಾಂಗ್ರೆಸ್ ಸರ್ಕಾರವನ್ನ ಕಿತ್ತೊಗೆಯುವುದು ಅನಿವಾರ್ಯವಾಗಿದೆ ಎಂದಿದ್ದಾರೆ.


