Menu

ಲಕ್ಷ್ಮೀ ದೇವಿಗೆ ಅವಮಾನ: ಜ್ಯೋತಿಷಿ ಆರ್ಯವರ್ಧನ್ ವಿರುದ್ಧ ದೂರು

ಲಕ್ಷ್ಮೀ ದೇವಿಯ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದಡಿ ಜ್ಯೋತಿಷಿ ಆರ್ಯವರ್ಧನ್ ವಿರುದ್ಧ ಮೇಲೆ ಬೆಂಗಳೂರಿನ ಶಂಕರಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಆರ್ಯವರ್ಧನ್‌ ಕರ್ನಾಟಕ ಗೋವು ರಕ್ಷಕರ ಸೇನೆಯು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದು, ಮಹಿಳೆಯರನ್ನು ಅವಮಾನಿಸಲಾಗಿದೆ ಎಂದು ಆರೋಪಿಸಿ ಕರ್ನಾಟಕ ಗೋವು ರಕ್ಷಕರ ಸೇನೆ ಪರವಾಗಿ ಸುಮನ್ ದೂರು ಸಲ್ಲಿಸಿದ್ದಾರೆ.

ಪೊಲೀಸರು ದೂರು ಸ್ವೀಕರಿಸಿ ಆರ್ಯವರ್ಧನ್ ವಿಚಾರಣೆಗೆ ಹಾಜರಾಗುವಂತೆ ಮೌಖಿಕ ಸೂಚನೆ ನೀಡಿದ್ದಾರೆ. ಈ ಹಿಂದೆ ಹುಲಿ ಉಗುರಿನ ಪೆಂಡೆಂಟ್‌ ಧರಿಸಿದ್ದಕ್ಕಾಗಿ ಅರಣ್ಯ ಇಲಾಖೆಯ ತನಿಖೆಯನ್ನು ಎದುರಿಸಿ ವಿವಾದಕ್ಕೆ ಸಿಲುಕಿದ್ದರು.

ಲಕ್ಷ್ಮೀ ದೇವಿ ಮನುಷ್ಯರ ದೇಹದ ಅಂಗವೊಂದರಲ್ಲಿ ನೆಲೆಯಾಗಿರುತ್ತಾಳೆ ಎಂದು ಆರ್ಯವರ್ಧನ್‌ ಸಂದರ್ಶನವೊಂದರಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದು, ಆ ವೀಡಿಯೊ ಸಾಕಷ್ಟು ವೈರಲ್‌ ಆಗಿದ್ದು, ಜನ ಜ್ಯೋತಿಷಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Related Posts

Leave a Reply

Your email address will not be published. Required fields are marked *