ರಾಜ್ಯ
ತೆಲಂಗಾಣದಲ್ಲಿ ಹಣಕ್ಕಾಗಿ ಪ್ರಿನ್ಸಿಪಾಲರ ಕೊಲೆಗೈದ ವಿದ್ಯಾರ್ಥಿಗಳು
ತೆಲಂಗಾಣದ ನಲ್ಗೊಂಡ ಜಿಲ್ಲೆಯ ಕೊಂಡಮಲ್ಲೇಪಲ್ಲಿಯಲ್ಲಿ ಪ್ರಿನಿಪಾಲ್ ರೂಪಾ ರೆಡ್ಡಿಯವರನ್ನು ಕೊಲೆ ಮಾಡಿರುವುದು ಆಕೆಯ ವಿದ್ಯಾರ್ಥಿಗಳು ಎಂಬದನ್ನು ಪೊಲೀಸರರು ತನಿಖೆಯಲ್ಲಿ ದೃಢಪಡಿಸಿದ್ದಾರೆ. ನಾಗಾರ್ಜುನ ಗ್ರಾಮರ್ ಕಾನ್ಸೆಪ್ಟ್ ಶಾಲೆಯ 10 ನೇ ತರಗತಿಯ ವಿದ್ಯಾರ್ಥಿಗಳು ಜಲ್ಸಾ ಚಟಕ್ಕೆ ಒಳಗಾಗಿ ಹಣಕ್ಕಾಗಿ ಪ್ರಾಂಶುಪಾಲರಾದ ರೂಪಾ ರೆಡ್ಡಿ ಅವರನ್ನು ಕೊಲೆ ಮಾಡಿದ್ದಾರೆ ಎಂಬುದು ಪತ್ತೆಯಾಗಿದೆ. ನಲ್ಗೊಂಡ ಜಿಲ್ಲಾ ಎಸ್ಪಿ ಶರತ್ ಚಂದ್ರ ಪವಾರ್, ಪ್ರಕರಣದ ತನಿಖೆಗೆ ವಿಶೇಷ ತಂಡಗಳನ್ನು ರಚಿಸಿ ತನಿಖೆ ಕೈಗೆತ್ತಿಕೊಂಡಿದ್ದರು. ಎಲ್ಲಾ ಆರೋಪಿಗಳನ್ನು
ಬಿಡದಿ ಬಳಿ ಆರು ಕೋಟಿ ರೂ. ಬೆಲೆಯ ನಕಲಿ ಔಷಧಿ: ಎಸ್‌ಐಟಿ ತನಿಖೆ
ಬಿಡದಿಯ ದೊಡ್ಡೇರಿ ಬಳಿ ಎಂಎನ್‌ಸಿ ಬ್ಯಾಂಡ್ ಹೆಸರಿನಲ್ಲಿ ನಕಲಿ ಔಷಧಿ ಪೂರೈಕೆ ಘಟಕ ಪತ್ತೆಯಾಗಿದ್ದು, ಆರು ಕೋಟಿ ರೂ. ಬೆಲೆಯ ನಕಲಿ ಔಷಧಿ ವಶಕ್ಕೆ ಪಡೆದಿರುವ ಪ್ರಕರಣದ ತನಿಖೆಯನ್ನು ಕರ್ನಾಟಕ ಸರ್ಕಾರ ಎಸ್‌ಐಟಿಗೆ ವಹಿಸಲು ಮುಂದಾಗಿದೆ. ಆರೋಗ್ಯ ಸಚಿವ ಯು.ಟಿ ಖಾದರ್
ಒಬ್ಬ ಸಚಿವರಿಗಾಗಿ ಸದನ ಹಾಳು ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ: ಆರ್ ಅಶೋಕ
ಕಾಂಗ್ರೆಸ್ ಸರ್ಕಾರ ಒಬ್ಬ ಸಚಿವನನ್ನು ಉಳಿಸಿಕೊಳ್ಳಲು ಸದನವನ್ನು ಹಾಳು ಮಾಡುತ್ತಿದೆ. ಸಚಿವ ನಾಗೇಂದ್ರ ರಾಜೀನಾಮೆ ನೀಡುವವರೆಗೂ ಬಿಜೆಪಿ-ಜೆಡಿಎಸ್ ಹೋರಾಟ ಮಾಡಲಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಬ್ಬ ಸಚಿವನಿಗಾಗಿ ಕಾಂಗ್ರೆಸ್ ಸರ್ಕಾರ ಸದನ ನಡೆಯಲು ಬಿಡುತ್ತಿಲ್ಲ.
ನಾಗೇಂದ್ರ ಕೋರ್ಟ್‌ನಿಂದ ಕ್ಲೀನ್ ಚಿಟ್ ಪಡೆಯಲಿ, ಬೇರೆ ಪರಿಶಿಷ್ಟ ಶಾಸಕರಿಗೆ ಸಚಿವ ಸ್ಥಾನ ನೀಡಿ: ಆರ್ ಅಶೋಕ
ಸಚಿವ ಬಿ.ನಾಗೇಂದ್ರ, ಇಡಿ ಮತ್ತು ಸಿಬಿಐ ತನಿಖೆಯಲ್ಲಿ ಕ್ಲೀನ್ ಚಿಟ್ ಪಡೆದಿಲ್ಲ. ಅವರು ಕನಿಷ್ಠ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಾದರೂ ಕ್ಲೀನ್ ಚಿಟ್ ಪಡೆಯಲಿ. ಅಲ್ಲಿವರೆಗೆ ಸಚಿವ ಸ್ಥಾನದಲ್ಲಿ ಇರುವುದು ಬೇಡ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಕೆಪಿಎಸ್ಸಿಗೆ ಇಬ್ಬರು ಐಎಎಸ್ ಅಧಿಕಾರಿಗಳ ನೇಮಕ
ಕೆಪಿಎಸ್ಸಿ ಪರೀಕ್ಷೆ ಮತ್ತು ನೇಮಕ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ, ಈ ಬಗ್ಗೆ ತನಿಖೆ ನಡೆಸಬೇಕು ಎಂದು ಉದ್ಯೋಗ ಆಕಾಂಕ್ಷಿಗಳು ಆಗ್ರಹಿಸುತ್ತಿರುವ ಮಧ್ಯೆಯೇ ಸರ್ಕಾರವು ಕೆಪಿಎಸ್ಸಿಗೆ ಇಬ್ಬರು ಐಎಎಸ್ ಅಧಿಕಾರಿಗಳ ನೇಮಕ ಮಾಡಿದೆ. ಆಯೋಗದ ಪ್ರಮುಖ ಅಧಿಕಾರಿಗಳ ವರ್ಗಾವಣೆಗೂ ಸರ್ಕಾರ ಆದೇಶ ನೀಡಿದೆ.
ಬೀಳಗಿ ಕ್ರಾಸ್‌ನಲ್ಲಿ ಉರುಳಿದ ಬಸ್: ಇಬ್ಬರ ಸಾವು
ಬಾಗಲಕೋಟೆ ಜಿಲ್ಲೆಯ ಬೀಳಗಿ ಕ್ರಾಸ್ ಹುಬ್ಬಳ್ಳಿ- ಸೋಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಹಾರಾಷ್ಟ್ರದ ನೋಂದಣಿ ಸಂಖ್ಯೆ ಹೊಂದಿರುವ ಖಾಸಗಿ ಬಸ್ ಉರುಳಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹೈದರಾಬಾದ್‌ನಿಂದ ಗೋವಾ ಕಡೆಗೆ ಪ್ರಯಾಣಿಕರನ್ನು ಹೊತ್ತು ಹೊರಟಿದ್ದ ಮಹಾರಾಷ್ಟ್ರ ಪಾಸಿಂಗ್‌ನ ಖಾಸಗಿ ಸ್ಲೀಪರ್ ಬಸ್ ಎದುರಿನಿಂದ
ಕೌಟುಂಬಿಕ ಕಲಹ: ಇಬ್ಬರು ಮಕ್ಕಳನ್ನು ಕಾಲುವೆಗೆಸೆದ ಅಪ್ಪ
ಕೌಟುಂಬಿಕ ಕಲಹದಿಂದ ಬೇಸತ್ತ ವ್ಯಕ್ತಿಯೊಬ್ಬ ಇಬ್ಬರು ಮಕ್ಕಳನ್ನು ಕಾಲುವೆಗೆ ಎಸೆದಿರುವ ಘಟನೆಯೊಂದು ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ ಗ್ರಾಮದಲ್ಲಿ ನಡೆದಿದೆ. ಮಕ್ಕಳಿಗಾಗಿ ಕಾಲುವೆಯಲ್ಲಿ ಶೋಧ ನಡೆಸಲಾಗುತ್ತಿದೆ. ಹೆಂಡತಿ ಜೊತೆ ಜಗಳ ಮಾಡಿಕೊಂಡ ಶಾಂತಪ್ಪ ಬಿರಾದಾರ್ ಎಂಬಾತ ಮೂವರು ಮಕ್ಕಳಲ್ಲಿ ಇಬ್ಬರನ್ನು
ಬಿಎಂಟಿಸಿ ಬಿಡಿ ಭಾಗಗಳ ಖರೀದಿ ಅಕ್ರಮ, 8 ಮಂದಿ ಸಸ್ಪೆಂಡ್: ಬೈರತಿ ಸುರೇಶ್
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಬಸ್ ಬಿಡಿ ಭಾಗಗಳ ಖರೀದಿಯಲ್ಲಿ ನಡೆದಿರುವ ನ್ಯೂನತೆಗಳ ಬಗ್ಗೆ ಐವರು ಸದಸ್ಯರ ಉನ್ನತ ಮಟ್ಟದ ಸಮಿತಿ ತನಿಖೆ ನಡೆಸುತ್ತಿದ್ದು, ಈಗಾಗಲೇ ಎಂಟು ಮಂದಿಯನ್ನು ಅಮಾನತು ಮಾಡಲಾಗಿದೆ. ಮುಂದಿನ ಅಕ್ಟೋಬರ್ ಅಂತ್ಯದ ವೇಳೆಗೆ ತನ್ನ ವರದಿಯನ್ನು ಸರ್ಕಾರಕ್ಕೆ
ಮಾಜಿ ಸಚಿವ ಬಿಸಿ ನಾಗೇಶ್ ಪ್ರಾಮಾಣಿಕ ವ್ಯಕ್ತಿ: ಮುಖ್ಯಮಂತ್ರಿ ಸ್ಮರಣೆ
ಬಹಳ ವರ್ಷಗಳಿಂದ ನನಗೆ ಚಿರಪರಿಚಿತರಾದ ಮಾಜಿ ಸಚಿವ ನಾಗೇಶ್ ಅವರು ಮಂತ್ರಿಗಳಾಗಿ , ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಉತ್ತಮ ಮಾಡಿದ್ದರು. ಅವರೊಬ್ಬ ಪ್ರಾಮಾಣಿಕ ವ್ಯಕ್ತಿಯಾಗಿದ್ದರು ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದರು. ಮಾಜಿ ಸಚಿವ ಬಿಸಿ ನಾಗೇಶ್ ಅವರ ಪಾರ್ಥಿವ ಶರೀರದ
ಹನೂರು ಶೂಟೌಟ್ ಬಗ್ಗೆ ಕೂಲಂಕುಷ ತನಿಖೆ: ಸಿಎಂ ಡಿಕೆ ಶಿವಕುಮಾರ್
ಹನೂರು ಶೂಟೌಟ್ ಪ್ರಕರಣದ ಬಗ್ಗೆ ಕೂಲಂಕಷ ತನಿಖೆ ನಡೆಯುತ್ತಿದ್ದು, ತನಿಖೆ ಬಳಿಕ ಪ್ರತಿಕ್ರಿಯೆ ನೀಡುತ್ತೇವೆ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳಿಗೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದರು. ಕಳ್ಳಬೇಟೆ ನಿಗ್ರಹ ಶಿಬಿರಗಳನ್ನು ಜಿಲೆಟಿನ್ ಬಳಸಿ ಸ್ಪೋಟಿಸಲಾಗಿದ್ದು, ತಮಿಳುನಾಡು ಮೂಲದ




