ರಾಜಕೀಯ
ಪ್ರಜ್ವಲ್ ರೇವಣ್ಣ ಜೈಲಿಗೆ ಹೋಗಲು ಕುಮಾರಸ್ವಾಮಿ ನೇರ ಕಾರಣ: ಶಾಸಕ ಕದಲೂರು ಉದಯ್
ಪ್ರಜ್ವಲ್ ರೇವಣ್ಣ ಜೈಲಿಗೆ ಹೋಗಲು ಕೇಂದ್ರ ಸಚಿವರಾಗಿರುವ ಹೆಚ್‌ಡಿ ಕುಮಾರಸ್ವಾಮಿಯವರೇ ಕಾರಣ, ಸಿಡಿ ಹೊರತಂದಿದ್ದೇ ಅವರು. ಷಡ್ಯಂತ್ರ ಮಾಡಿ ಪ್ರಜ್ವಲ್‌ನ ಜೈಲಿಗೆ ಹಾಕಿಸಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಕದಲೂರು ಉದಯ್ ಗಂಭೀರ ಆರೋಪ ಮಾಡಿದ್ದಾರೆ. ಮನಸ್ಸು ಮಾಡಿದ್ದರೆ ದೇವೇಗೌಡರೇ ತಮ್ಮ ಮೊಮ್ಮಗನನ್ನು ಜೈಲಿಂದ ಬಿಡಿಸಿ ಹೊರತರಬಹುದಿತ್ತು, ಷಡ್ಯಂತ್ರ ಮಾಡಿ ಪ್ರಜ್ವಲ್‌ನ ಜೈಲಿಗೆ ಹಾಕಿಸಿದ್ದಾರೆ, ಅಣ್ಣನ ಮಗನ (ಪ್ರಜ್ವಲ್) ಬೆಳವಣಿಗೆ ಸಹಿಸಿಕೊಳ್ಳದ ಕುಮಾರಸ್ವಾಮಿ, ತಮ್ಮ ಮಗನನ್ನು ಬೆಳೆಸಲು ಅಣ್ಣನ ಮಗನನ್ನು ಜೈಲಿಗೆ
ಇರಾನ್‌ನಲ್ಲಿ ದಾಳಿಗೆ ಬಲಿಯಾದ 165 ವಿದ್ಯಾರ್ಥಿನಿಯರ ಅಂತ್ಯಸಂಸ್ಕಾರ
ಇರಾನ್‌ನಲ್ಲಿ ಅಮೆರಿಕ- ಇಸ್ರೇಲ್ ಜಂಟಿ ದಾಳಿಗೆ ಬಲಿಯಾಗಿರುವ 165 ಶಾಲಾ ಬಿದ್ಯಾರ್ಥಿನಿಯರ ಸಾಮೂಹಿಕ ಅಂತ್ಯ ಸಂಸ್ಕಾರ ನೆರವೇರಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಜನ ತೀವ್ರ ಆಕ್ರೋಶ ಹೊರ ಹಾಕಿದ್ದಾರೆ. ಈ ಸಂಘರ್ಷದಿಂದಾಗಿ ಮಧ್ಯ ಪ್ರಾಚ್ಯ ಹೊತ್ತಿ ಉರಿಯುತ್ತಿದ್ದು, ಅಪಾರ ಪ್ರಮಾಣದ ನಷ್ಟದೊಂದಿಗೆ
ಬಿಜೆಪಿ ಅಧ್ಯಕ್ಷ ನಿತಿನ್ ನಬಿನ್ ರಾಜ್ಯಸಭೆಗೆ ಅಭ್ಯರ್ಥಿ
ಮಾರ್ಚ್ 16 ರಂದು ನಡೆಯಲಿರುವ ಸಂಸತ್ತಿನ ಮೇಲ್ಮನೆ ಚುನಾವಣೆಗೆ ಬಿಜೆಪಿಯು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಸೇರಿ ಒಂಬತ್ತು ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ನಿತಿನ್ ನಬಿನ್ ರಾಜ್ಯಸಭಾ ಚುನಾವಣೆಯಲ್ಲಿ ಬಿಹಾರದಿಂದ ಸ್ಪರ್ಧಿಸಲಿದ್ದಾರೆ ಎಂದು ಹೇಳಿದೆ. ರಾಜ್ಯಸಭೆಯ 37 ಸ್ಥಾನಗಳಿಗೆ ಹತ್ತು
ಡಿಕೆ ಶಿವಕುಮಾರ್ ಮೇಲೆ ನಿಗಾಗೆ ಸಿಎಂ ತಂಡ: ಅತೃಪ್ತ ಆತ್ಮಗಳ ಹತಾಶ ಹೇಳಿಕೆಯೆಂದ ಸಿದ್ದರಾಮಯ್ಯ
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಮೇಲೆ ಕಣ್ಣಿಡಲು ಪೋನ್ ಕದ್ದಾಲಿಕೆ ನಡೆಯುತ್ತಿದೆ ಎಂಬ ಪ್ರತಿ ಪಕ್ಷದ ನಾಯಕ ಆರ್ ಅಶೋಕ ಮತ್ತು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿಯವರ ಆರೋಪ ‘’ತಾ ಕಳ್ಳ ಇತರರ ನಂಬ’’ ಎಂಬ ಗಾದೆಯಂತಿದೆ. ಇದೊಂದು ಅತೃಪ್ತ ಆತ್ಮಗಳ
ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ ನೂರು ಡಾಲರ್?
ಇರಾನ್- ಇಸ್ರೇಲ್ ಸಂಘರ್ಷದಿಂದ ಗಲ್ಫ್ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಹೋರ್ಮುಜ್ ಜಲಸಂಧಿಯ ಪ್ರವೇಶ ನಿರ್ಬಂಧಿಸಾಗಿದೆ, ಹೀಗಾಗಿ ಜಾಗತಿಕವಾಗಿ ತೈಲ ಬೆಲೆ ಏರಿಕೆಯಾಗುತ್ತಿದೆ. ಅಮೆರಿಕದ ತೈಲ ಬೆಲೆಯಲ್ಲಿ 7.6% ಏರಿಕೆಯಾಗಿ ಪ್ರತಿ ಬ್ಯಾರಲ್‌ಗೆ (159 ಲೀಟರ್) 6604.83 ರೂ. ಆಗಿದೆ. ಬ್ರೆಂಟ್ ದರದಲ್ಲಿ
ರಿಯಾದ್‌ನಲ್ಲಿ ಅಮೆರಿಕ ರಾಯಭಾರ ಕಚೇರಿಗೆ ಡ್ರೋನ್ ದಾಳಿ
ಸೌದಿ ಅರೇಬಿಯಾದ ರಿಯಾದ್‌ನಲ್ಲಿರುವ ಅಮೆರಿಕ ರಾಯಭಾರಿ ಕಚೇರಿಯನ್ನು ಗುರಿಯಾಗಿಸಿಕೊಂಡು ಮಂಗಳವಾರ ಡ್ರೋನ್ ದಾಳಿ ನಡೆದಿದೆ. ಇರಾನ್ ಬೆಂಬಲಿತ ಪಡೆಗಳು ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದ್ದು, ಈ ಬೆಳವಣಿಗೆಯಿಂದಾಗಿ ಯುದ್ಧ ಭೀತಿ ಮತ್ತಷ್ಟು ಹೆಚ್ಚಿದೆ. ರಿಯಾದ್‌ನ ಡಿಪ್ಲೊಮ್ಯಾಟಿಕ್ ಕ್ವಾರ್ಟರ್‌ನಲ್ಲಿರುವ ಅಮೆರಿಕ ರಾಯಭಾರಿ
ದುಬೈನಿಂದ ಸುರಕ್ಷಿತವಾಗಿ ಬೆಂಗಳೂರಿಗೆ ಬಂದಿಳಿದ 123 ಕನ್ನಡಿಗರು
ಅಮೆರಿಕಾ-ಇಸ್ರೇಲ್ ದಾಳಿ, ಇರಾನ್ ಪ್ರತಿದಾಳಿಯಿಂದ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಪರಿಸ್ಥಿತಿ ಗಂಭೀರವಾಗಿದ್ದು, ವಿಮಾನಗಳ ರಾಟಾಟ ರದ್ದುಗೊಂಡು ದುಬೈ ಅಬುದಾಬಿಗಳಲ್ಲಿ ಸಿಲುಕಿದ್ದ 213 ಕನ್ನಡಿಗರು ಸೋಮವಾರ ರಾತ್ರಿ ಸುರಕ್ಷಿತವಾಗಿ ಬೆಂಗಳೂರಿಗೆ ವಾಪಸಾಗಿದ್ದಾರೆ. ಇರಾನ್ ಇಸ್ರೇಲ್ ಸಂಘರ್ಷದಿಂದ ನಡೆದ ಬೆಳವಣಿಗೆಗಳಿಂದ ಮೂರು ದಿನಗಳ ಆತಂಕದಲ್ಲಿಯೇ ಇವರೆಲ್ಲ
ಇರಾನ್-ಇಸ್ರೇಲ್ ಸಂಘರ್ಷ: ದೇಶದಲ್ಲಿ ಹಿಂಸಾಚಾರ ಸಾಧ್ಯತೆ, ರಾಜ್ಯಗಳಿಗೆ ಕೇಂದ್ರ ಎಚ್ಚರಿಕೆ
ಇರಾನ್-ಇಸ್ರೇಲ್ ಸಂಘರ್ಷ ತೀವ್ರಗೊಂಡು ಅಮೆರಿಕ ನಡೆಸಿದ ದಾಳಿಯಲ್ಲಿ ಖಮೇನಿ ಸಾವಿನ ಬಳಿಕ ಇರಾನ್ ಅಮೆರಿಕದ ವಾಯುನೆಲೆಗಳನ್ನು ಗುರಿಯಾಗಿಸಿಕೊಂಡು ಮಧ್ಯಪ್ರಾಚ್ಯದ ಕೆಲವು ದೇಶಗಳಲ್ಲಿ ದಾಳಿ ನಡೆಸಿದೆ. ದಾಳಿ, ಪ್ರತಿದಾಳಿಗಳಿಂದ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿದೆ. ಪರಿಣಾಮವಾಗಿ ಭಾರತದಲ್ಲಿ ಸಂಭಾವ್ಯ ಹಿಂಸಾಚಾರದ ಬಗ್ಗೆ ಎಲ್ಲಾ
ಡಿಸಿಎಂ ಮೇಲೆ ನಿಗಾ ಇರಿಸಲು ಮುಖ್ಯಮಂತ್ರಿಯಿಂದ ಅನಧಿಕೃತ ತಂಡ: ಆರ್ ಅಶೋಕ ಗಂಭೀರ ಆರೋಪ
ಡಿಸಿಎಂ ಡಿಕೆ ಶಿವಕುಮಾರ್ ಚಟುವಟಿಕೆಗಳ ಮೇಲೆ ನಿಗಾ ಇರಿಸಲು ಸಿಎಂ ಸಿದ್ದರಾಮಯ್ಯ ಎಸ್‌ಪಿ ನೇತೃತ್ವದಲ್ಲಿ ಅನಧಿಕೃತವಾಗಿ ತಂಡ ರಚಿಸಿದ್ದಾರೆ. ಅನುದಾನ ಕಡಿತ ಮಾಡುವುದು, ಫೋನ್ ಟ್ಯಾಪ್ ಮಾಡುವುದು ಹೀಗೆ ಎಲ್ಲ ಕಾರ್ಯಗಳನ್ನು ಮಾಡುತ್ತಿದ್ದಾರೆ. ಇದು ಕಣ್ಣಿಗೆ ಕಾಣದ ಎಸ್‌ಐಟಿ ಎಂದು ಪ್ರತಿಪಕ್ಷ
ಇರಾನ್ ಮೇಲಿನ ದಾಳಿಯಿಂದ ಎಪ್ಸ್ಟೀನ್ ಕೇಸ್ ಫೈಲ್‌ಗಳು ನಾಶವಾಗದು: ಟ್ರಂಪ್ ವಿರುದ್ಧ ಮಾಸ್ಸಿ ಕಿಡಿ
ಇರಾನ್ ಮೇಲೆ ಅಮೆರಿಕ ದಾಳಿ ನಡೆಸಿ ಧ್ವಂಸಗೊಳಿಸಿದ ಮಾತ್ರಕ್ಕೆ ಎಪ್ಸ್ಟೀನ್ ಪ್ರಕರಣದ ದಾಖಲೆಗಳು ನಾಶವಾಗುವುದಿಲ್ಲ, ಈ ಪ್ರಕರಣದಿಂದ ಜನರ ಗಮನ ಬೇರೆಡೆಗೆ ಸೆಳೆಯಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಮೇಲೆ ಬಾಂಬ್ ದಾಳಿ ನಡೆಸಿರುವುದಾಗಿ ರಿಪಬ್ಲಿಕನ್ ಪಕ್ಷದ ಶಾಸಕ ಥಾಮಸ್ ಮಾಸ್ಸಿ




