Featured
ಛತ್ತೀಸ್ ಗಢದಲ್ಲಿ ಪೊಲೀಸರಿಗೆ ಶರಣಾದ 29 ನಕ್ಸಲರು!
ಛತ್ತೀಸ್ಗಢದ ಸುಕ್ಮಾದಲ್ಲಿ 29 ನಕ್ಸಲರು ಪೊಲೀಸರ ಮುಂದೆ ಬುಧವಾರ ಶರಣಾಗಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯ ಸರ್ಕಾರದ ಶರಣಾಗತಿ ಮತ್ತು ಪುನರ್ವಸತಿ ನೀತಿಗಳಿಂದ ಪ್ರೇರಿತಗೊಂಡು ಅವರು ಶರಣಾಗಿದ್ದಾರೆ. ಶರಣಾದವರಲ್ಲಿ ಗೋಗುಂಡ ಪ್ರದೇಶದ ದಂಡಕಾರಣ್ಯ ಆದಿವಾಸಿ ಕಿಸಾನ್ ಮಜ್ದೂರ್ ಸಂಘಾನ್ ಮುಖ್ಯಸ್ಥ ಪೋಡಿಯಂ ಬುಧ್ರಾ ಇದ್ದು, ಇವರನ್ನು ಹುಡುಕಿಕೊಟ್ಟವರಿಗೆ 2 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ನಿಷೇಧಿತ ಮಾವೋವಾದಿ ಸಂಘಟನೆಗಳ ಸಕ್ರಿಯ ಸದಸ್ಯರಾಗಿರುವ 29 ಮಂದಿ, ಪೂನಾ ಮಾರ್ಗೆಮ್ (ಪುನರ್ವಸತಿಯಿಂದ
ಜ. 22ರಿಂದ 31ರವರೆಗೆ ವಿಶೇಷ ಅಧಿವೇಶನ: ರಾಜ್ಯ ಸಚಿವ ಸಂಪುಟ ನಿರ್ಧಾರ
ಬೆಂಗಳೂರು: ಜನವರಿ 22ರಿಂದ ಒಂದು ವಾರ ಕಾಲ ವಿಶೇಷ ಅಧಿವೇಶನ ಕರೆಯಲು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೇಂದ್ರ ಸರ್ಕಾರ ಮನರೇಗಾ ರದ್ದುಗೊಳಿಸಿ ಜಾರಿಗೆ ತಂದಿರುವ ವಿಬಿ ಜಿ ರಾಮ್
ಚುನಾವಣೆ ಭರವಸೆ ಈಡೇರಿಸಲು 500 ಬೀದಿನಾಯಿಗಳ ಹತ್ಯೆ!
ಹೈದರಾಬಾದ್: ಚುನಾವಣೆಯ ವೇಳೆ ನೀಡಿದ ಭರವಸೆ ಈಡೇರಿಸಲು ಎರಡು ಜಿಲ್ಲೆಗಳಲ್ಲಿ ಒಂದು ವಾರದಲ್ಲಿ ಸುಮಾರು 500ಕ್ಕೂ ಅಧಿಕ ಬೀದಿನಾಯಿಗಳನ್ನು ಹತ್ಯೆಗೈದ ಘಟನೆ ತೆಲಂಗಾಣದಲ್ಲಿ ನಡೆದಿದೆ. ಕಮರೆಡ್ಡಿ ಮತ್ತು ಹನಮಕೊಂಡ ಜಿಲ್ಲೆಗಳಲ್ಲಿ ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆ ವೇಳೆ ನೀಡಿದ ಭರವಸೆ
ಬೆಂಗಳೂರಲ್ಲಿ ಮೊಮ್ಮಗನ ಎದುರೇ ಅಜ್ಜಿಯ ಕೊಲೆಗೈದಿದ್ದಾತ ಆತ್ಮಹತ್ಯೆ
ಬೆಂಗಳೂರು ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕುದುರೆಗೆರೆ ಕಾಲೋನಿಯಲ್ಲಿ ಮೊಮ್ಮಗನ ಎದುರೇ ಮಹಿಳೆಯನ್ನು ಕೊಡಲಿಯಿಂದ ಕೊಚ್ಚಿ ಕೊಂದಿದ್ದಾತ ದೊಡ್ಡಬಳ್ಳಾಪುರ ತಾಲೂಕಿನ ಕೊಳೂರು ಗ್ರಾಮದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದಾಕ್ಷಾಯಿಣಮ್ಮ(55) ಎಂಬವರನ್ನು ಶನಿವಾರ ಮಧ್ಯಾಹ್ನ ಕೊಂದು ಪರಾರಿಯಾಗಿದ್ದ ವೀರಭದ್ರಯ್ಯ(60) ಆತ್ಮಹತ್ಯೆ ಮಾಡಿಕೊಂಡಿರುವ
ಬೀದರ್ ನಲ್ಲಿ ಕತ್ತು ಸೀಳಿದ ಗಾಳಿಪಟ ದಾರ: ಬೈಕ್ ಸವಾರ ಸಾವು
ಚಿಟಗುಪ್ಪ ತಾಲೂಕಿನ ತಾಳಮಡಗಿ ಗ್ರಾಮದ ಸೇತುವೆ ಸಮೀಪ ಗಾಳಿಪಟ ಹಾರಿಸುವ ದಾರ ಬೈಕ್‌ನಲ್ಲಿ ಹೋಗುತ್ತಿದ್ದ ವ್ಯಕ್ತಿಯ ಕುತ್ತಿಗೆಯನ್ನೇ ಸೀಳಿದ್ದು, ಅತ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚಿಟಗುಪ್ಪ ತಾಲೂಕಿನ ಬಂಬುಳಗಿ ಗ್ರಾಮದ ಸಂಜಕುಮಾರ ಗುಂಡಪ್ಪ (48) ಮೃತಪಟ್ಟವರು. ಅವರಿಗೆ ಪತ್ನಿ, ಪುತ್ರ ಹಾಗೂ ಮೂವರು ಪುತ್ರಿಯರಿದ್ದಾರೆ.
ಮುಂಬೈ ಮ್ಯಾರಥಾನ್ 2026; ಮಂಗಳೂರಿನಲ್ಲಿ ಪ್ಯಾಲಿಯೇಟಿವ್ ಕೇರ್ ಗಾಗಿ 5 ಲಕ್ಷ ನಿಧಿ ಸಂಗ್ರಹಿಸಿದ ಹಸೀನಾ ಥೆಮಾಲಿ!
ಬೆಂಗಳೂರು: 43 ವರ್ಷದ ಓಟಗಾರ್ತಿ ಹಾಗೂ ಕೋಚ್ ಆಗಿರುವ ಹಸೀನಾ ಥೆಮಾಲಿ ಮುಂಬೈ ಮ್ಯಾರಥಾನ್ (TMM) 2026ರಲ್ಲಿ ಮೊದಲ ಬಾರಿಗೆ ನಿಧಿ ಸಂಗ್ರಾಹಕರಾಗಿ ಭಾಗವಹಿಸಿ ₹5,01,001 ಮೊತ್ತವನ್ನು ಸಂಗ್ರಹಿಸಿದ್ದಾರೆ. 95 ದಾನಿಗಳ ಬೆಂಬಲದೊಂದಿಗೆ ನಡೆದ ಈ ನಿಧಿ ಸಂಗ್ರಹ ಅಭಿಯಾನವು ಕರ್ನಾಟಕದಲ್ಲಿ
ಖಜಾನೆ ಖಾಲಿ ಮಾಡಿದ ಸಾಧನೆಗಾ ಸಿಎಂ ಡಿಸಿಎಂ ಸಂಭ್ರಮಾಚರಣೆ?
ಯಾವ ಸಾಧನೆಗೆ ಈ ಸಂಭ್ರಮಾಚರಣೆ ಸಿಎಂ ಸಿದ್ದರಾಮಯ್ಯ ಅವರೇ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರೇ , ಸಾವಿರ ದಿನಗಳ ಆಡಳಿತದ ಹೆಸರಲ್ಲಿ ಸಂಭ್ರಮಿಸಲು ಹೊರಟಿರುವ ನಿಮಗೆ ರಾಜ್ಯದ ವಾಸ್ತವ ಸ್ಥಿತಿ ಅರಿವಿದೆಯೇ? ನಿಮ್ಮ ಈ ‘ಸಂಭ್ರಮ’ ಜನಾಕ್ರೋಶವನ್ನು ಅಣಕಿಸುವ ವಿಕೃತ ಮನಸ್ಸಿನ
ನಮ್ಮ ಪಕ್ಷದ ನಾಯಕರ ಜತೆ ಮಾತುಕತೆ ಬಗ್ಗೆ ಬಹಿರಂಗ ಚರ್ಚೆ ಮಾಡುವುದಿಲ್ಲ: ಡಿಕೆ ಶಿವಕುಮಾರ್
“ನಮ್ಮ ಪಕ್ಷದ ನಾಯಕರ ಜತೆಗಿನ ಮಾತುಕತೆ ಬಗ್ಗೆ ಬಹಿರಂಗವಾಗಿ ಚರ್ಚೆ ಮಾಡುವುದಿಲ್ಲ, ನಾನು ಕೆಪಿಸಿಸಿ ಅಧ್ಯಕ್ಷ, ರಾಹುಲ್ ಗಾಂಧಿ ಅವರು ಲೋಕಸಭೆ ವಿರೋಧ ಪಕ್ಷದ ನಾಯಕ” ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು. ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಪ್ರತಿಕ್ರಿಯೆ
ನಿವೃತ್ತ ಉದ್ಯೋಗಿಗಳಿಗೆ ಬೆಳ್ಳಿ ಪದಕದ ಹೆಸರಲ್ಲಿ ತಾಮ್ರ ನೀಡಿದ ರೈಲ್ವೆ ಇಲಾಖೆ
ಪಶ್ಚಿಮ ಮಧ್ಯ ರೈಲ್ವೆ ವಲಯದಲ್ಲಿ ಹಲವು ದಶಕ ಕೆಲಸ ಮಾಡಿ ನಿವೃತ್ತರಾದ ನೌಕರರಿಗೆ ರೈಲ್ವೆ ಇಲಾಖೆಯು ವಿದಾಯದ ವೇಳೆ ಚಿನ್ನಲೇಪಿತ ಬೆಳ್ಳಿಯ ಪದಕವೆಂದು ಹೇಳಿ ಕೊಟ್ಟಿರುವುದು ತಾಮ್ರದ ಮೇಲೆ ಬೆಳ್ಳಿ ಲೇಪನ ಮಾಡಿದ ಪದಕವೆಂಬುದು ಬೆಳಕಿಗೆ ಬಂದಿದೆ. ಈ ನಕಲಿ ಬೆಳ್ಳಿ
ಬೆಂಗಳೂರು ನಗರದಲ್ಲೇ ಎರಡು ಲಕ್ಷ ಅಕ್ರಮ ಬಾಂಗ್ಲಾ ವಲಸಿಗರು ನೆಲೆಸಿರುವ ಶಂಕೆ: ಆರ್ ಅಶೋಕ
ಗೃಹ ಸಚಿವ @DrParameshwara ಅವರೇ, ಬೆಂಗಳೂರಿನಲ್ಲಿ ನಗರ ಒಂದರಲ್ಲೇ ಸುಮಾರು 2 ಲಕ್ಷ ಅಕ್ರಮ ಬಾಂಗ್ಲಾ ವಲಸಿಗರು ನೆಲೆಸಿದ್ದಾರೆ ಎಂದು ಸ್ವತಃ ಅಕ್ರಮ ವಲಸಿಗರೇ ಒಪ್ಪಿಕೊಳ್ಳುತ್ತಿದ್ದಾರೆ. ಕಳೆದ ಒಂದು ವಾರದಿಂದ ಪೊಲೀಸರು ನಡೆಸುತ್ತಿರುವ ಕಾರ್ಯಾಚರಣೆಯಲ್ಲಿ 71 ಶಂಕಿತ ಬಾಂಗ್ಲಾ ಪ್ರಜೆಗಳನ್ನು ವಶಕ್ಕೆ




