Menu

ಕ್ಷೇತ್ರ ವಿಂಗಡಣೆಯಿಂದ ದಕ್ಷಿಣ ಭಾರತ ರಾಜ್ಯಗಳಿಗೆ ಆರ್ಥಿಕ ನಷ್ಟ: ಡಿಕೆ ಸುರೇಶ್‌

“ಲೋಕಸಭಾ, ವಿಧಾನಸಭಾ ಕ್ಷೇತ್ರಗಳ ಮರು ವಿಂಗಣೆಯಿಂದ ದಕ್ಷಿಣ ಭಾರತದ ರಾಜ್ಯಗಳಲ್ಲಿ ಕ್ಷೇತ್ರಗಳು ಕಡಿಮೆಯಾಗುವುದರ ಜೊತೆಗೆ ಆರ್ಥಿಕ ಮುಗ್ಗಟನ್ನು ಎದುರಿಸಬೇಕಾಗುತ್ತದೆ. ನಮ್ಮ ತೆರಿಗೆಗಳು ಉತ್ತರದ ರಾಜ್ಯಗಳಿಗೆ ಹಂಚಿಕೆಯಾಗಲಿದೆ” ಎಂದು ಬಮೂಲ್‌ ಅಧ್ಯಕ್ಷ ಡಿಕೆ ಸುರೇಶ್‌ ಹೇಳಿದರು. ಸದಾಶಿವನಗರದ ನಿವಾಸದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಸುರೇಶ್  ಪ್ರತಿಕ್ರಿಯಿಸಿದರು. ಲೋಕಸಭಾ, ವಿಧಾನಸಭಾ ಕ್ಷೇತ್ರ ಮರುವಿಂಗಡಣೆಯಿಂದ ಕ್ಷೇತ್ರಗಳು ನಷ್ಟವಾಗುವುದಿಲ್ಲ ಎನ್ನುವ ಪ್ರಧಾನಿಯವರ ಹೇಳಿಕೆಯ ಬಗ್ಗೆ ಕೇಳಿದಾಗ, “ನಾನು ಈ ಬಗ್ಗೆ ಹಿಂದೆಯೇ ಹೇಳಿದ್ದೆ. ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗಲಿದೆ.

25 ವರ್ಷದ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿ ಪ್ರತ್ಯಕ್ಷ: ಮೈದುನನ ಮದುವೆಯಾಗಿ ಮಕ್ಕಳ ತಾಯಿಯಾಗಿರುವ ಪತ್ನಿ

ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ 25 ವರ್ಷದ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿ ಮನೆಯವರ ಎದುರು ಪ್ರತ್ಯಕ್ಷರಾಗಿ ಒಂದೆಡೆ ಸಂತೋಷ , ಮತ್ತೊಂದೆಡೆ ಕಳವಳಕ್ಕೆ ಕಾರಣರಾಗಿರುವ ಘಟನೆ ನಡೆದಿದೆ. 25 ವರುಷದ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿ ಸತ್ತು ಹೋಗಿರುವುದಾಗಿ ಮನೆಯವರೆಲ್ಲ ನಿರ್ಧರಿಸಿ ಆತನ ಹೆಂಡತಿಯನ್ನು

ಅಕ್ರಮ ಆಸ್ತಿ ಆರೋಪ: ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ

ಅಕ್ರಮ ಆಸ್ತಿ ಹೊಂದಿರುವ ಆರೋಪದಡಿ ಶಿವಮೊಗ್ಗ, ಬಳ್ಳಾರಿ, ಬೆಳಗಾವಿಯ ಹಲವು ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹಿಂದುಳಿದ ವರ್ಗಗಳ ಅಧಿಕಾರಿ ಶೋಭಾ ಅವರ ಶಿವಮೊಗ್ಗದ ನವಲೆ ಬಡಾವಣೆಯ ರೂಂ, ಶಿಕಾರಿಪುರದ ಚನ್ನಕೇಶವ ನಗರದ ಮನೆ, ಶಿಕಾರಿಪುರ ತಾಲೂಕು ತರಲಘಟ್ಟದ ತೋಟದ

ಅನೈತಿಕ ಸಂಬಂಧ: ಪ್ರೇಯಸಿಯ ಗಂಡನಿಗೆ ಮದ್ಯ ಕುಡಿಸಿ ಕೊಲೆ

ಅನೈತಿಕ ಸಂಬಂಧಕ್ಕೆ ತೊಂದರೆಯಾಗುತ್ತಿದೆ ಎಂದು ಪ್ರೇಯಸಿಯ ಪತಿಯನ್ನು ಪ್ರಿಯಕರ ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸುನೀಲ್ ನಾಯಕ್ ಕೊಲೆಯಾದ ವ್ಯಕ್ತಿ.  ಸುನೀಲ್‌ ನಾಯಕನ ಪತ್ನಿಯ ಪ್ರಿಯಕರ ಬಸುದೇವ್ ಮಲ್ಲಿಕ್ ಕೊಲೆ ಮಾಡಿದಾತ. ಬಸುದೇವ್ ಮಲ್ಲಿಕ್ ಸುನೀಲ್ ನಾಯಕ್ ಪತ್ನಿಯೊಂದಿಗೆ ಸಲುಗೆ

20 ಅಡಿ ಆಳದ ಬಾವಿಯಲ್ಲಿ ಅನ್ನ ನೀರಿಲ್ಲದೆ ಮೂರು ದಿನ: ಒಟಿಪಿಯಿಂದ ಬದುಕಿದ ಜೀವ

ಆಕಸ್ಮಿಕವಾಗಿ 20 ಅಡಿ ಆಳದ ಬಾವಿಗೆ ಬಿದ್ದಿದ್ದ 60 ವರ್ಷದ ವ್ಯಕ್ತಿಯೊಬ್ಬರು ಮೂರು ದಿನ ಅನ್ನ ನೀರು ಇಲ್ಲದೆ ಪವಾಡ ಸದೃಶವಾಗಿ ಸುರಕ್ಷಿತವಾಗಿ ಹೊರ ಬಂದಿರುವ ಘಟನೆ ಉಡುಪಿಯ ಕೊಡವೂರಿನಲ್ಲಿ ನಡೆದಿದೆ. ಇದಕ್ಕೆ ಕಾರಣ ಗ್ಯಾಸ್ ಸಿಲಿಂಡರ್‌ಗೆ ಸಂಬಂಧಿಸಿದಂತೆ ಮೊಬೈಲ್‌ಗೆ ಬಂದಿರುವ

ಕೆಎಸ್ಸಾರ್ಟಿಸಿ, ಬಿಎಂಟಿಸಿ ನೌಕರರಿಗೆ ವೇತನ ಹೆಚ್ಚಳ ಪ್ರಸ್ತಾವ

2025ರ ಏ.1ರಿಂದ ಜಾರಿಗೆ ಬರುವಂತೆ ಬಿಎಂಟಿಸಿ ನೌಕರರಿಗೆ ಶೇ.3 ಮತ್ತು ಕೆಎಸ್ಸಾರ್ಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ, ಕೆಕೆಆರ್‌ಟಿಸಿ ನೌಕರರಿಗೆ ಶೇ.5ರಷ್ಟು ವೇತನ ಹೆಚ್ಚಳದ ಪ್ರಸ್ತಾವವನ್ನು ಕೆಎಸ್ಸಾರ್ಟಿಸಿ ಅಧಿಕಾರಿಗಳು ಸಾರಿಗೆ ನೌಕರ ಸಂಘಟನೆಗಳ ಮುಂದಿಟ್ಟಿದ್ದಾರೆ. ಈ ಕುರಿತು ಚರ್ಚಿಸಲು ಏ.17ರಂದು ಸಭೆ ನಡೆಯಲಿದೆ. ವೇತನ ಹೆಚ್ಚಳ

ರಾಜ್ಯದ ಜನತೆ ಬಿಜೆಪಿಗೆ ಯಾವತ್ತೂ ಬಹುಮತ ನೀಡಿಲ್ಲ: ಮುಖ್ಯಮಂತ್ರಿ

ಬಿಜೆಪಿ ರಾಜ್ಯದಲ್ಲಿ ಒಂಬತ್ತು ವರ್ಷ ಅಧಿಕಾರ ನಡೆಸಿದ್ದರೂ ಒಮ್ಮೆಯೂ ಜನಾಭಿಪ್ರಾಯ ಪಡೆದು ಅಧಿಕಾರಕ್ಕೆ ಬರಲಿಲ್ಲ. ರಾಜ್ಯದ ಜನತೆ ಬಿಜೆಪಿಗೆ ಯಾವತ್ತೂ ಪೂರ್ಣ ಬಹುಮತ ಕೊಟ್ಟಿಲ್ಲ. ಎಂಟು ಜನ‌ ಶಾಸಕರಿಗೆ ಕೋಟ್ಯಾಂತರ ರೂಪಾಯಿ ಕೊಟ್ಟು ರಾಜೀನಾಮೆ ಕೊಡಿಸಿ ಬಳಿಕ ಚುನಾವಣೆಯಲ್ಲೂ 25-30 ಕೋಟಿ

ಗಾಜನೂರು ರೆಸಾರ್ಟ್‌ನಲ್ಲಿ ವಿದ್ಯುತ್‌ ಸ್ಪರ್ಶಕ್ಕೆ ಮಹಿಳೆ ಬಲಿ

ಶಿವಮೊಗ್ಗದ ಗಾಜನೂರು ಬಳಿಯ ತುಂತುರು ರೆಸಾರ್ಟ್‌ನಲ್ಲಿ ವಿದ್ಯುತ್ ಶಾಕ್‌ಗೆ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಅಬ್ಬಲಗೆರೆ ಗ್ರಾಮದ ನಿವಾಸಿ ನಾಗಮ್ಮ (45) ಮೃತಪಟ್ಟವರು. ರೆಸಾರ್ಟ್‌ನಲ್ಲಿ ನಡೆಯುತ್ತಿದ್ದ ನಿಶ್ಚಿತಾರ್ಥ ಕಾರ್ಯಕ್ರಮದ ಕ್ಯಾಟರಿಂಗ್ ಕೆಲಸಕ್ಕೆ ನಾಗಮ್ಮ ತೆರಳಿದ್ದರು. ರೆಸಾರ್ಟ್ ಅಲಂಕಾರಕ್ಕಾಗಿ ಅಳವಡಿಸಲಾಗಿದ್ದ ಲೈಟಿಂಗ್‌ನಿಂದಾಗಿ ಬೇಲಿಗೆ ವಿದ್ಯುತ್ ಪ್ರವಹಿಸಿತ್ತು, 

ರಾಜಕೀಯ ಮೀಸಲು: ಮಹಿಳಾ ಸಬಲೀಕರಣವೋ, ಬಿಜೆಪಿ ಶಕ್ತಿವರ್ಧನೆಯೋ?

ರಾಜಕೀಯವಾಗಿ ಮಹಿಳೆಯರಿಗೆ ಶೇ. ೫೦ ಮೀಸಲು ಕಲ್ಪಿಸಬೇಕಾದರೆ. ಲೋಕಸಭೆ ಮತ್ತು ದೇಶದ ಎಲ್ಲ ವಿಧಾನಸಭೆಗಳ ಈಗಿನ ಸೀಟುಗಳ ಪ್ರಮಾಣ ಹೆಚ್ಚಳವಾಗಲೇಬೇಕು. ಆದರೆ ಇದಕ್ಕೆ ಸಂಬಂಧಿಸಿದ ನೀಲನಕ್ಷೆ ಏನು, ಇದರ ಸ್ವರೂಪವೇನು . ಇದರ ಜಾರಿ ಮತ್ತು ಅನುಷ್ಠಾನ ಹೇಗೆ  ಎಂಬಿತ್ಯಾದಿ ವಿವರಗಳು

ಇಸ್ರೇಲ್‌- ಇರಾನ್‌ ಯುದ್ಧದಿಂದ ಬದುಕು ಅತಂತ್ರ: ದಂಪತಿ ಕೊಡಗಿನಲ್ಲಿ, ಮಕ್ಕಳು ಇರಾನ್‌ನಲ್ಲಿ

ಮಕ್ಕಳನ್ನು ಇರಾನ್‌ನಲ್ಲಿ ಬಿಟ್ಟು ದೀರ್ಘ ರಜೆಯಲ್ಲಿ ಕೊಡಗಿಗೆ ಬಂದಿದ್ದ ದಂಪತಿ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿಮಾನ ಸಂಚಾರ ರದ್ದುಗೊಂಡ ಕಾರಣ ಇರಾನ್‌ಗೆ ಹೋಗಲಾಗದೆ ಪರಿತಪಿಸುತ್ತಿದ್ದರೆ ಮತ್ತೊಂದೆಡೆ ಅವರಿಗೆ ಇರಾನ್‌ನಲ್ಲಿರುವ ಮಕ್ಕಳನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ದಂಪತಿಯ ಪಾಸ್‌ಪೋರ್ಟ್‌ ಅವಧಿ ಮುಕ್ತಾಗೊಳ್ಳುವ ಹಂತದಲ್ಲಿದ್ದು, ಮತ್ತೆ