ಹೊಸಕೋಟೆ ತಾಲೂಕಿನ ಭುವನಹಳ್ಳಿಯಲ್ಲಿ ಅಕ್ರಮ ಕಸದ ಡಂಪಿಂಗ್ನಿಂದ ಹೊರಹೊಮ್ಮುವ ಹೊಗೆಯಿಂದ ವ್ಯಕ್ತಿಯೊಬ್ಬರು ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಐವತ್ತು ವರ್ಷದ ಮುನೇಗೌಡ ಮೃತಪಟ್ಟವರು.
ಕಸದ ರಾಶಿಯಿಂದ ಬಂದ ಹೊಗೆಯ ಕಾರಣ ಮುನೇಗೌಡ ಅವರಿಗೆ ಏಕಾಏಕಿ ಉಸಿರುಗಟ್ಟಿದೆ. ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ
ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ.
ಸೂಕ್ತ ರೀತಿಯಲ್ಲಿ ಕಸ ವಿಲೇವಾರಿಗೆ ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಸಂಬಂಧಿಸಿದ ಇಲಾಖೆ ಹಾಗೂ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.