Menu

20 ಲಕ್ಷ ರೂ. ವಾಪಸ್‌ ಆಮಿಷ: ವ್ಯಕ್ತಿಗೆ 12 ಲಕ್ಷ ರೂ. ನಾಮ

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬೀರೂರಿನಲ್ಲಿ ವ್ಯಕ್ತಿಗೆ ಹೆಚ್ಚಿನ ಹಣದ ಆಮಿಷವೊಡ್ಡಿ ೧೨ ಲಕ್ಷ ರೂಪಾಯಿ ವಂಚಿಸಿರುವ ಘಟನೆ ನಡೆದಿದೆ.

500 ಮುಖಬೆಲೆಯ ನೋಟುಗಳನ್ನು ಕೊಟ್ಟರೆ ಅದಕ್ಕಿಂತ ಹೆಚ್ಚಿನ ಮೊತ್ತದ 100 ಮುಖಬೆಲೆಯ ನೋಟಗಳನ್ನು ವಾಪಸ್‌ ನೀಡುವುದಾಗಿ ವಂಚಕರು ಸಿವಿಲ್ ಕಾಂಟ್ರಾಕ್ಟರ್‌ ವಿಜಯಪುರದ  ಸಂತೋಷ್‌ ಎಂಬವರನ್ನು ನಂಬಿಸಿಸಿ ವಂಚಿಸಿದ್ದಾರೆ.

ಸಂತೋಷ್‌ ತಮ್ಮ ಸ್ನೇಹಿತನೊಂದಿಗೆ 12 ಲಕ್ಷ ರೂಪಾಯಿ ನಗದು ಜೊತೆ ಬೀರೂರು-ತರೀಕೆರೆ ರಸ್ತೆಯ ಹೋರಿತಿಮ್ಮನಹಳ್ಳಿ ಸೇತುವೆ ಬಳಿ ಹೋಗಿದ್ದಾರೆ. ಅಲ್ಲಿಗೆ ಬಂದ ವಂಚಕರು, ಉದ್ಯಮಿಯಿಂದ ಹಣ ಪಡೆದಿದ್ದಾರೆ. 20 ಲಕ್ಷ ರೂ. ತರುತ್ತೇವೆ, ಇಲ್ಲೇ ಕಾಯಿರಿ ಎಂದು ಹೇಳಿ ಅಲ್ಲಿಂದ ಜಾಗ ಖಾಲಿ ಮಾಡಿದವರು ವಾಪಸ್‌ ಬಂದಿಲ್ಲ.

ಮೋಸ ಹೋಗಿರುವುದು ಅರಿವಾದ ಸಂತೋಷ್‌ ಪೊಲೀಸರಿಗೆ ದೂರು ನೀಡಿದ್ದಾರೆ. ವಂಚಕರ ಪತ್ತೆಗಾಗಿ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.

Related Posts

Leave a Reply

Your email address will not be published. Required fields are marked *