Friday, September 25, 2026
Menu

ಚಿಕ್ಕಬಳ್ಳಾಪುರ ನಗರಸಭೆಯ 6 ಕಾಂಗ್ರೆಸ್ ಸದಸ್ಯರು ಅನರ್ಹ: ನ್ಯಾಯಾಲಯ ತೀರ್ಪು

ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಪ್ರತಿಪಕ್ಷ ಅಭ್ಯರ್ಥಿಯ ಮತ ಚಲಾಯಿಸಿದ ಚಿಕ್ಕಬಳ್ಳಾಪುರ ನಗರಸಭೆಯ 6 ಕಾಂಗ್ರೆಸ್ ಸದಸ್ಯರನ್ನು ಅನರ್ಹಗೊಳಿಸಿ ನ್ಯಾಯಾಲಯ ತೀರ್ಪು ನೀಡಿದೆ. 2024ರ ಸೆಪ್ಟೆಂಬರ್ 12 ರಂದು ನಡೆದ ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಸದಸ್ಯರು ವಿಪ್ ಜಾರಿ ಮಾಡಿದ್ದರೂ ಪಕ್ಷದ ಅಭ್ಯರ್ಥಿ ಪರ ಮತ ಚಲಾಯಿಸದೇ ಬಿಜೆಪಿ ಅಭ್ಯರ್ಥಿಗಳಿಗೆ ಮತ ಹಾಕಿ ಗೆಲ್ಲಿಸಿದ್ದರು. ಶಾಸಕ ಪ್ರದೀಪ್ ಈಶ್ವರ್ ಹಾಗೂ ಸಂಸದ ಡಾ.ಕೆ. ಸುಧಾಕರ್

ಕಲಬುರಗಿ ಆಸ್ಪತ್ರೆಯಲ್ಲಿ ಬಾಣಂತಿ, ಶಿಶು ಸಾವು: ಕುಟುಂಬದ ದಾಂಧಲೆ

ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಬಾಣಂತಿ ತಾಯಿ ಹಾಗೂ ನವಜಾತ ಶಿಶು ಮೃತಪಟ್ಟಿದ್ದಾರೆ. ಹೆರಿಗೆಗೂ ಮುನ್ನ ಗರ್ಭದಲ್ಲಿಯೇ ಮಗು ಸತ್ತಿರುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದು, ಲೋ ಬಿಪಿಯಿಂದ ತಾಯಿಯೂ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ. ಕಲಬುರಗಿ ನಗರದ ಎಂಎಸ್‌ಕೆ ಮಿಲ್ ಬಡಾವಣೆಯಲ್ಲಿರುವ

ವಿಜಯಪುರದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಮಕ್ಕಳನ್ನು ಕರೆದೊಯ್ಯುತ್ತಿದ್ದ ತಂದೆ ಅಪಘಾತಕ್ಕೆ ಬಲಿ

ವಿಜಯಪುರ ಜಿಲ್ಲೆಯ ಕಗ್ಗೋಡ ಗ್ರಾಮದ ಬಳಿಯ 52ನೇ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಮಕ್ಕಳನ್ನು ಕರೆದುಕೊಂಡು ಹೋಗುವಾಗ ಬೈಕ್‌ಗೆ ಲಾರಿ ಡಿಕ್ಕಿಯಾಗಿ ತಂದೆ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ. ವೆಂಕು ಚವ್ಹಾಣ (43). ಮೃತ ಬೈಕ್ ಸವಾರ. ಈ ಅಪಘಾತದಲ್ಲಿ ಪುತ್ರಿಯರಾದ

ಸೈಕಲ್‌ ಕಳ್ಳರ ಬಂಧಿಸಿದ ಪೊಲೀಸರಿಗೆ ಸಿಂಧನೂರು ಕಮಿಷನರ್‌ ಶ್ಲಾಘನೆ

21 ಮೋಟಾರ್ ಸೈಕಲ್ ಕಳ್ಳತನ ಮಾಡಿದ ಆರೋಪಿಗಳನ್ನು ಬಂಧಿಸಿ,ಮಾಲೀಕರಿಗೆ ಮುಟ್ಟಿಸುವ ಕೆಲಸ ಸಿಂಧನೂರಿನ ಪೊಲೀಸರು ಮಾಡುತ್ತಿದ್ದಾರೆ, ಇವರ ಕೆಲಸ ಶ್ಲಾಘನೀಯ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿ ಪುಟ್ಟ ಮಾದಯ್ಯ ಹೇಳಿದರು. ನಗರದ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,  ಬಳಗನೂರ್

ಬಂಗಾರಪೇಟೆಯಲ್ಲಿ ವಾಕಿಂಗ್‌ ಮಾಡುತ್ತಿದ್ದವರಿಗೆ ಬೈಕ್‌ ಡಿಕ್ಕಿ: ನಿವೃತ್ತ ಉಪನ್ಯಾಸಕರಿಬ್ಬರು ಬಲಿ

ಕೋಲಾರದ ಬಂಗಾರಪೇಟೆ ಪಟ್ಟಣದ ಜೂನಿಯರ್ ಕಾಲೇಜು ಬಳಿ ಯು ವಿಹಾರಕ್ಕೆಂದು ತೆರಳಿದ್ದ ನಿವೃತ್ತ ಉಪನ್ಯಾಸಕರಿಗೆ ಬೈಕ್ ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ. ನಿವೃತ್ತ ಕನ್ನಡ ಉಪನ್ಯಾಸಕ ಕೆ.ಬಿ.ಮೋಹನ್ (64), ನಿವೃತ್ತ ರಾಸಾಯನ ಶಾಸ್ತ್ರ ಉಪನ್ಯಾಸಕ ಲಕ್ಷ್ಮೀ ನಾರಾಯಣ (62) ಮೃತಪಟ್ಟವರು. ಸಂಜೆ ವಾಯು

ಹಾಸನದಲ್ಲಿ ಫೋಟೋಶೂಟ್ ಮಾಡುತ್ತಿದ್ದ ಯುವಕ ನೀರಿಗೆ ಬಿದ್ದು ಸಾವು

ಹಾಸನ ತಾಲೂಕಿನ ಹಾಲುವಾಗಿಲು ಗ್ರಾಮದಲ್ಲಿ ಫೋಟೋಶೂಟ್ ಮಾಡುತ್ತಿದ್ದ ವೇಳೆ ಯುವಕನೊಬ್ಬ ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ನಾಗೇಂದ್ರ (19) ಮೃತ ಯುವಕ. ಖಾಸಗಿ ಚಿನ್ನಾಭರಣ ಮಳಿಗೆಯಲ್ಲಿ ಪ್ರಮೋಟರ್ ಆಗಿ ಕೆಲಸ ಮಾಡುತ್ತಿದ್ದ ನಾಗೇಂದ್ರ ಹಾಗೂ ಮಂಜುನಾಥ್ ಮುಗಿಸಿ ಹಾಲುವಾಗಿಲು ಬಳಿ

ಚಿಕ್ಕಮಗಳೂರಿನಲ್ಲಿ ಸ್ವಿಮ್ಮಿಂಗ್‌ ಪೂಲ್‌ಗೆ ಧುಮುಕುವಾಗ ಬೆನ್ನುಮೂಳೆ ಘಾಸಿಯಾಗಿ ಯುವಕ ಸಾವು

ಚಿಕ್ಕಮಗಳೂರಿನ ಖಾಸಗಿ ರೆಸಾರ್ಟ್‌ನ ಸ್ವಿಮ್ಮಿಂಗ್ ಪೂಲ್‌ಗೆ ಧುಮುಕುವ ವೇಳೆ ಬೆನ್ನುಮೂಳೆಗೆ ಘಾಸಿಯಾಗಿ ಯುವಕನೊಬ್ಬ ಮೃತಪಟ್ಟಿದ್ದಾನೆ. ಕೊಡಗಿನ ಕುಶಾಲನಗರದಮೊಬೈಲ್ ಶಾಪ್ ಮಾಲೀಕ ನಿಶಾಂತ್ (35) ಮೃತ ಯುವಕ. ಸ್ವಿಮ್ಮಿಂಗ್‌ ಪೂಲ್‌ಗೆ ಧುಮುಕಿದ ವೇಳೆ ಬೆನ್ನುಮೂಳೆಗೆ ಘಾಸಿಯುಂಟಾದ ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ

ಹುಸ್ಕೂರು ಮದ್ದೂರಮ್ಮ ಜಾತ್ರೆ ತೇರು ಉರುಳಿ ಗಾಯಗೊಂಡಿದ್ದ ಯುವತಿ ಸಾವು

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹುಸ್ಕೂರು ಮದ್ದೂರಮ್ಮ ಜಾತ್ರೆಯಲ್ಲಿ ಶನಿವಾರ ಕುರ್ಜುಗಳು (ತೇರು) ಉರುಳಿಬಿದ್ದಾಗ ಗಾಯಗೊಂಡಿದ್ದ ಯುವತಿ ಮೃತ ಪಟ್ಟಿದ್ದಾರೆ. ಕುರ್ಜು ಕೆಳಗೆ ಸಿಲುಕಿ28ರ ಯುವಕ ಲೋಹಿತ್‌ ಶನಿವಾರವೇ ಮೃತಪಟ್ಟಿದ್ದು, ಜ್ಯೋತಿ ಇಂದು ಅಸು ನೀಗಿದ್ದಾರೆ. ಗಂಭೀರವಾಗಿ ಗಾಯಗೊಂಡಿ ರುವ ಮತ್ತೊಬ್ಬ ಯುವಕ

ದಾವಣಗೆರೆಯಲ್ಲಿ ಚಿನ್ನ ಕಳವು: ಒಂದೇ ದಿನದಲ್ಲಿ ಕಳ್ಳನ  ಬಂಧಿಸಿದ ಪೊಲೀಸ್‌

ದಾವಣಗೆರೆಯ  ಹೊನ್ನಾಳಿ ಪಟ್ಟಣದ ಸರ್ವರಕೇರಿಯಲ್ಲಿ ನಡೆದ ಆಭರಣ ಕಳವು ಪ್ರಕರಣವನ್ನು ಒಂದೇ ದಿನದಲ್ಲಿ ಭೇದಿಸಿರುವ ಪೊಲೀಸರು ಆರೋಪಿಯನ್ನು ಬಂಧಿಸಿರುವುದಾಗಿ ಚನ್ನಗಿರಿ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಸ್ಯಾಮ್ ವರ್ಗೀಸ್ ಹೇಳಿದರು. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಚುರ್ಚುಗುಂಡಿ ಗ್ರಾಮದ ಶಿವರಾಜ್ ಪಿ.ಎಸ್. ಬಂಧಿತ.

ಹೆಚ್‌ಡಿ ಕುಮಾರಸ್ವಾಮಿ ಭೂ ಒತ್ತುವರಿ: ತೆರವಿಗೆ ಮಾರ್ಕಿಂಗ್ ಮಾಡಿ ಕಲ್ಲು ನೆಟ್ಟ ಅಧಿಕಾರಿಗಳು

ಕೇಂದ್ರ ಸಚಿವ ಹೆಚ್‌‌ ಡಿ ಕುಮಾರಸ್ವಾಮಿ ಕುಟುಂಬದ ವಿರುದ್ಧ ಭೂ ಒತ್ತುವರಿ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ಬಿಡದಿಯ ಕೇತುಗಾನಹಳ್ಳಿ ಗ್ರಾಮದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆಗೆ ಸಿದ್ದತೆ ನಡೆಸಿದ್ದಾರೆ. ಕೇತಗಾನಹಳ್ಳಿಯ ಸರ್ವೆ 7,8,9,10,16,17 ಮತ್ತು 79ರಲ್ಲಿ ಕುಮಾರಸ್ವಾಮಿ  ಸೇರಿದಂತೆ ಇತರರು ಒತ್ತುವರಿ