Menu

ನನ್ನ ವಿರುದ್ಧ ಬರೆದರೂ ಚಿಂತೆಯಿಲ್ಲ, ಸತ್ಯಾಂಶ ಶೋಧಿಸಿ ಬರೆಯಿರಿ: ಡಿಕೆಶಿ

“ಮಾಧ್ಯಮಗಳು ನನ್ನ ವಿರುದ್ಧ ಬರೆದರೂ ಚಿಂತೆಯಿಲ್ಲ. ಆದರೆ ಸತ್ಯಾಂಶ ಶೋಧಿಸಿ ಬರೆಯಿರಿ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಮಾಧ್ಯಮಗಳು ಸತ್ಯವನ್ನು ಬರೆಯುವುದಕ್ಕಿಂತ ಹೆಚ್ಚಾಗಿ ವಿವಾದಾತ್ಮಕ ಸುದ್ದಿಯನ್ನೇ ಪ್ರಕಟಿಸುತ್ತೀರಿ. ಮಾಧ್ಯಮಗಳನ್ನು ನೋಡಿ ನನ್ನ ಮಗಳು ಒಂದು ಮೀಡಿಯಾ ಸ್ಕೂಲ್ ಆರಂಭಿಸಬೇಕು ಎಂದು ಹೇಳಿದಳು. ನಾನು ಕೂಡ ಇದನ್ನು ಆರಂಭಿಸಲು ತೀರ್ಮಾನಿಸಿದ್ದೇನೆ ಎಂದರು.

ನೀವು ಎಲ್ಲವನ್ನು ಹತ್ತಿರದಿಂದ ಕಾಣುತ್ತೀರಿ,  ನೀವು ನಿಮ್ಮ ಕರ್ತವ್ಯ ಮಾಡಿ.  ನಾವು ಬಹಳ ಕಷ್ಟಪಟ್ಟು ಬೆಳೆದಿರುತ್ತೇವೆ. ಆದರೆ ಯಾರೋ ಒಬ್ಬ ಒಂದು ಸ್ಟೋರಿ ಪ್ಲಾಂಟ್ ಮಾಡಿದ ಎಂದು ಭವಿಷ್ಯ ನಾಶ ಮಾಡಲು ಮುಂದಾಗುತ್ತಿರುವುದನ್ನು ಗಮನಿಸಿದ್ದೇನೆ ಎಂದು ಹೇಳಿದರು.

ನಾವು ಜಾತಿ ಧರ್ಮ ಬೇಡ ಎಂದರೂ ನಾವು ಹುಟ್ಟಿದಾಗ ಹಾಗೂ ಸತ್ತಾಗ ನಮ್ಮ ಸಂಪ್ರದಾಯ, ಆಚರಣೆಗಳು ನಮ್ಮ ಜಾತಿ ಧರ್ಮವನ್ನು ಬಿಡುವುದಿಲ್ಲ.  ಅದೇ ರೀತಿ ಮಾಧ್ಯಮಗಳು ಬೇಡ ಎಂದರೂ ರಾಜಕಾರಣಿಗಳು ಮಾಧ್ಯಮಗಳನ್ನು ಬಿಡಲು ಆಗುವುದಿಲ್ಲ  ಎಂದು ತಿಳಿಸಿದರು.

ಬೆಂಗಳೂರು ಪ್ರೆಸ್ ಕ್ಲಬ್  ಏರ್ಪಡಿಸಿದ್ದ ‘ಪ್ರೈಡ್ ಆಫ್ ಕರ್ನಾಟಕ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ  ಮಾತನಾಡಿ,  ಮಾಧ್ಯಮದವರು ನನಗೆ ಸಕಾರಾತ್ಮಕ , ನಕಾರಾತ್ಮಕ ಪ್ರಚಾರ ನೀಡಿದ್ದೀರಿ ಎಂದರು.

ರಾಜೀವ್ ಗಾಂಧಿ  ಪ್ರಧಾನಮಂತ್ರಿಯಾಗಿದ್ದಾಗ ಪೆಂಗ್ಯೋಂಗ್ ನಲ್ಲಿ ನಡೆದಿದ್ದ ವಿಶ್ವ ಯುವ ಸಮ್ಮೇಳನಕ್ಕೆ ಕಳುಹಿಸಿಕೊಟ್ಟಿದ್ದರು. ಈ ಸಮ್ಮೇಳನದಲ್ಲಿ ಭಾಗವಹಿಸಲು  ಕತ್ತಿನಲ್ಲಿ ಇದ್ದ ಚಿನ್ನದ ಸರ ಅಡವಿಟ್ಟು ಪೊಲೀಸ್ ಆಯುಕ್ತರ ಕಚೇರಿಗೆ ಹೋಗಿ  ವೀಸಾಗೆ 3 ಸಾವಿರ ಹಣ ಪಾವತಿಸಿದ್ದೆ.  ಸಮ್ಮೇಳನಕ್ಕೆ ಹೊರಡುವ ಮುನ್ನ 5 ಜನ ಸಂಸದರು ನೀವು ಇಂತಹ ಗೂಂಡಾಗಳನ್ನು ಕಳುಹಿಸುತ್ತಿದ್ದೀರಿ ಎಂದು ರಾಜೀವ್ ಗಾಂಧಿ ಅವರಿಗೆ ಹೇಳಿದರು.   ಸಂಸದರ ದೂರಿನ ಮೇರೆಗೆ ರಾಜೀವ್ ಗಾಂಧಿ ರಾಜ್ಯಪಾಲರಿಗೆ ಕರೆ ಮಾಡಿ ನನ್ನ ಬಗ್ಗೆ ವಿಚಾರಿಸಿದರು.  ರಾಜೀವ್ ಗಾಂಧಿ ಅವರು 5 ಸಂಸದರು ಹಾಗೂ ನನ್ನನ್ನು ಕರೆಸಿ ವಿವಾದಾತ್ಮಕ ನಾಯಕರೇ ಹೆಚ್ಚು ಯಶಸ್ವಿಯಾಗುತ್ತಾರೆ ಎಂದು ಹೇಳಿ, ಹಣ ಕೊಟ್ಟು ನನ್ನನ್ನು ಸಮ್ಮೇಳನಕ್ಕೆ ಕಳುಹಿಸಿಕೊಟ್ಟಿದ್ದರು ಎಂದು ಸ್ಮರಿಸಿದರು.

Related Posts

Leave a Reply

Your email address will not be published. Required fields are marked *