ದೇಶ-ವಿದೇಶ
ತಮಿಳುನಾಡಿನಲ್ಲಿ ವಿಶ್ವಾಸಮತ ಗೆದ್ದು ಭದ್ರಗೊಂಡ ವಿಜಯ್ ಸರ್ಕಾರ
ವಿಜಯ್ ಅವರ ಟಿವಿಕೆ ಪಕ್ಷ ತಮಿಳುನಾಡು ವಿಧಾನಸಭೆಯಲ್ಲಿ ವಿಶ್ವಾಸ ಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದೆ. ಡಿಎಂಕೆ ಮೈತ್ರಿ ಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚಿಸಿದ ಮುಖ್ಯಮಂತ್ರಿ ವಿಜಯ್‌ಗೆ ವಿಶ್ವಾಸಮತ ಪರೀಕ್ಷೆ ಎದುರಾಗಿದ್ದು, ಅವರು ಅದರಲ್ಲಿ ಗೆಲುವು ಕಾಣುವ ಮೂಲಕ ಸರ್ಕಾರ ಭದ್ರವಾಗಿದೆ. ವಿಧಾನಸಭೆಯಲ್ಲಿ ಕಲಾಪ ಆರಂಭಗೊಳ್ಳುತ್ತಿದ್ದಂತೆ ಮುಖ್ಯಮಂತ್ರಿ ವಿಜಯ್ ವಿಶ್ವಾಸ ಮತ ಯಾಚಿಸಿದ್ದರು. ಕಾಂಗ್ರೆಸ್ ಸೇರಿದಂತೆ ಹಲವು ಮೈತ್ರಿ ಪಕ್ಷಗಳು ಬೆಂಬಲ ಸೂಚಿಸಿವೆ. ಹಾಜರಿದ್ದ ಶಾಸಕರ ಒಟ್ಟು ಮತಗಳ ಆಧರಿಸಿ ಬೆಂಬಲ ನಿರ್ಧರಿಸಲಾಗಿದೆ.
ಸೋನಿಯಾ ಗಾಂಧಿ ಮೇದಾಂತ ಆಸ್ಪತ್ರೆಗೆ ದಾಖಲು
ಕಾಂಗ್ರೆಸ್ ನಾಯಕಿ, ರಾಜ್ಯಸಭಾ ಸಂಸದೆ ಸೋನಿಯಾ ಗಾಂಧಿ ಸಣ್ಣ ಶಸ್ತ್ರಚಿಕಿತ್ಸೆಗಾಗಿ ಹರಿಯಾಣದ ಗುರುಗ್ರಾಮದಲ್ಲಿರುವ ಮೇದಾಂತ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸೋನಿಯಾ ಗಾಂಧಿ ಕಳೆದೆರಡು ವರ್ಷದಿಂದ ಆಗಾಗ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದು, ದೆಹಲಿ ಸೇರಿದಂತೆ ಕೆಲವು ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಮಾರ್ಚ್ 2026ರಲ್ಲಿ
ಮಳೆಗಾಳಿಗೆ ಸಾಂಗ್ಲಿಯಲ್ಲಿ ದೇಗುಲ ಆವರಣ ಗೋಡೆ ಕುಸಿದು ಆರು ಮಂದಿ ಸಾವು
ಸಾಂಗ್ಲಿ ಜಿಲ್ಲೆಯ ದೇವಾಲಯದ ಆವರಣದಲ್ಲಿ ಮಳೆ ಗಾಳಿಗೆ ಗೋಡೆ ಕುಸಿದು ಕನಿಷ್ಠ ಆರು ಭಕ್ತರು ಪ್ರಾಣ ಕಳೆದುಕೊಂಡಿದ್ದಾರೆ. 12ರಿಂದ 14 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜಾತ್ ತೆಹಸಿಲ್ ವ್ಯಾಪ್ತಿಯ ಮೋಥೆವಾಡಿ ಗ್ರಾಮದ ಮಾರ್ಗುದೇವಿ ದೇವಸ್ಥಾನದಲ್ಲಿ ಈ ದುರಂತ ನಡೆದಿದೆ.
ರಸ್ತೆ, ಸಾರ್ವಜನಿಕ ಸ್ಥಳಗಳಲ್ಲಿ ರಾಜಕೀಯ ಬ್ಯಾನರ್ ಹಾಗೂ ಪೋಸ್ಟರ್ ಹಾಕಬೇಡಿ: ಟಿವಿಕೆ ಪಕ್ಷ ಮನವಿ
ತಮಿಳುನಾಡಿನಲ್ಲಿ ರಾಜಕೀಯ ಬ್ಯಾನರ್ ಹಾಗೂ ಪೋಸ್ಟರ್‌ಗಳ ಹಾವಳಿಗೆ ಕಡಿವಾಣ ಹಾಕಲು ಮುಂದಾಗಿರುವ ಸಿಎಂ ವಿಜಯ್ ಅವರ ಟಿವಿಕೆ ಪಕ್ಷವು, ಚುನಾವಣೆಯಲ್ಲಿ ಗೆದ್ದ ಬಳಿಕ ವಿಜಯೋತ್ಸವದ ಹೆಸರಿನಲ್ಲಿ ರಸ್ತೆ, ಸಾರ್ವಜನಿಕ ಸ್ಥಳ ಹಾಗೂ ಫುಟ್‌ಪಾತ್‌ಗಳಲ್ಲಿ ಬ್ಯಾನರ್, ಪೋಸ್ಟರ್ ಹಾಕಬಾರದು ಎಂದು ರಾಜಕೀಯ ಪಕ್ಷಗಳಿಗೆ
ಪ್ರಶ್ನೆ ಪತ್ರಿಕೆ ಸೋರಿಕೆ, ಅಕ್ರಮ ಆರೋಪ: NEET-UG ಪರೀಕ್ಷೆ ರದ್ದುಗೊಳಿಸಿದ NTA
ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮ ಆರೋಪಗಳ ಹಿನ್ನೆಲೆ ವೈದ್ಯಕೀಯ ಶಿಕ್ಷಣ ಪ್ರವೇಶಕ್ಕಾಗಿ ಮೇ ಮೂರರಂದು ದೇಶಾದ್ಯಂತ ನಡೆದಿದ್ದ ನೀಟ್ ಯುಜಿ ಪರೀಕ್ಷೆಯನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಅಧಿಕೃತವಾಗಿ ರದ್ದುಗೊಳಿಸಿದೆ. ಗಂಭೀರ ಆರೋಪಗಳ ಕಾರಣ ಕೇಂದ್ರ ಸರ್ಕಾರದ ಅನುಮೋದನೆಯೊಂದಿಗೆ ಈ
11 ಗಂಟೆ ಈಜಿ ಶ್ರೀಲಂಕಾದಿಂದ ಧನುಷ್ಕೋಡಿ ತಲುಪಿದ ಬೆಂಗಳೂರಿನ ಟೆಕ್ಕಿ ದಂಪತಿ
ಬೆಂಗಳೂರಿನ ಟೆಕ್ಕಿ ದಂಪತಿ ಶ್ರೀಲಂಕಾದಿಂದ 11 ಗಂಟೆ ಈಜಿಕೊಂಡು ಭಾರತದ ದಡ ಸೇರಿದ್ದಾರೆ. ಐಟಿ ಉದ್ಯಮಿಗಳಾದ ಡ್ಯಾನಿಶ್ ಅಬ್ದಿ ಮತ್ತು ವೃಶಾಲಿ ಪ್ರಸಾದೆ ಈ ದಾಖಲೆ ಸೃಷ್ಟಿಸಿದ್ದಾರೆ. ಶ್ರೀಲಂಕಾದಿಂದ ರಾಮ ಸೇತು ಮಾರ್ಗದ ಮೂಲಕ 11 ಗಂಟೆ ಈಜಿಕೊಂಡು ಭಾರತ ತಲುಪಿದ್ದು,
ಶಾಲೆ-ಕಾಲೇಜುಗಳು, ದೇವಸ್ಥಾನಗಳು, ಬಸ್ ನಿಲ್ದಾಣಗಳ ಬಳಿ ಮದ್ಯದಂಗಡಿ ಮುಚ್ಚಲು ತಮಿಳುನಾಡು ಸಿಎಂ ವಿಜಯ್ ಆದೇಶ
ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ರಾಜ್ಯದ ಶಾಲೆ-ಕಾಲೇಜುಗಳು, ದೇವಸ್ಥಾನಗಳು, ಬಸ್ ನಿಲ್ದಾಣಗಳ ಬಳಿ ಇರುವ 717 ಟಾಸ್ಮ್ಯಾಕ್ ಮದ್ಯದಂಗಡಿಗಳನ್ನು ತಕ್ಷಣ ಮುಚ್ಚುವಂತೆ ಆದೇಶಿಸಿದ್ದಾರೆ. ಮುಂದಿನ ಎರಡು ವಾರಗಳೊಳಗೆ ಈ ಎಲ್ಲ ಅಂಗಡಿಗಳಿಗೆ ಬೀಗ ಹಾಕುವಂತೆ ಸಿಎಂ ವಿಜಯ್ ಖಡಕ್ ಆಗಿ ಸೂಚಿಸಿದ್ದಾರೆ.
ಗೆಲುವಿನ ಅಂತರ: ಹೊಸದಾಗಿ ಅರ್ಜಿ ಸಲ್ಲಿಸಲು ಮಮತಾ ಬ್ಯಾನರ್ಜಿಗೆ ಸುಪ್ರೀಂ ಸೂಚನೆ
ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ ಸಮಯದಲ್ಲಿ ಗೆಲುವಿನ ಅಂತರವು ಡಿಲಿಟ್ ಮಾಡಲಾಗಿರುವ ಮತಗಳಿಗಿಂತ ಕಡಿಮೆಯಾಗಿದೆ ಎಂದು ಆರೋಪಿಸಿದ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಇತರರು ಹೊಸದಾಗಿ ಅರ್ಜಿಗಳನ್ನು ಸಲ್ಲಿಸಬಹುದು ಎಂದು ಸುಪ್ರೀಂ
ಕೊಲೆ ಪ್ರಕರಣದ ಹಿಂದೂ ಕೈದಿ ಜೊತೆ ಪ್ರೀತಿಯಾಗಿ ಮದುವೆಯಾದ ಮುಸ್ಲಿಂ ಜೈಲರ್
ಕೊಲೆ ಮಾಡಿದ್ದ ಜೈಲು ಸೇರಿದ್ದ ಅಪರಾಧಿ ಮತ್ತು ಜೈಲು ಅಧಿಕಾರಿ ನಡುವೆ ಪ್ರೀತಿಯಾಗಿ ಶಿಕ್ಷೆ ಅವಧಿ ಮುಗಿದು ಹೊರ ಬಂದ ಹಿಂದೂ ಅಪರಾಧಿ ಮುಸ್ಲಿಂ ಮಹಿಳಾ ಜೈಲರ್ ಅನ್ನು ಮದುವೆಯಾಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಮುಸ್ಲಿಂ ಅಪರಾಧಿ ಸತ್ನಾ ಸೆಂಟ್ರಲ್ ಜೈಲಿನಲ್ಲಿ
ಭಾರತೀಯ ಸೇರಿ ಮೂವರು ಹಂಟಾ ವೈರಸ್‌ಗೆ ಬಲಿ
ಯೂರೋಪ್ ಕಡೆಗೆ ಸಾಗುತ್ತಿದ್ದ ಐಷಾರಾಮಿ ಹಡಗೊಂದರಲ್ಲಿ ಹಂಟಾ ವೈರಸ್ ಕಾಣಿಸಿಕೊಂಡಿದ್ದು, ಒಬ್ಬ ಭಾರತೀಯ ಸೇರಿದಂತೆ ಮೂವರನ್ನು ಬಲಿ ಪಡೆದಿದೆ ಎನ್ನಲಾಗಿದೆ. ದಕ್ಷಿಣ ಅಮೆರಿಕದಿಂದ ಯೂರೋಪ್ ಕಡೆಗೆ ಸಂಚರಿಸುತ್ತಿದ್ದ ‘ಎಂವಿ ಹೊಂಡುಯಸ್’ ಎಂಬ ಪ್ರವಾಸಿ ಹಡಗಿನಲ್ಲಿ ಈ ದುರಂತ ನಡೆದಿದೆ. ಹಡಗಿನಲ್ಲಿದ್ದ ಪ್ರಯಾಣಿಕರೊಬ್ಬರಿಗೆ ಏಕಾಏಕಿ




