ಬೆಂಗಳೂರು
ಅಮೆರಿಕದಿಂದ ಜೀವಂತ ಗುಂಡುಗಳನ್ನು ತಂದಿದ್ದಾತ ಬೆಂಗಳೂರಿನಲ್ಲಿ ಅರೆಸ್ಟ್
ವಿದೇಶದಿಂದ ಅಕ್ರಮವಾಗಿ ರಿವಾಲ್ವಾರ್‌ನ ಏಳು ಜೀವಂತ ಗುಂಡುಗಳನ್ನು ತಂದಿದ್ದ ಆರೋಪದಡಿ ಅನಿವಾಸಿ ಭಾರತೀಯನೊಬ್ಬನನ್ನು ಬೆಂಗಳೂರು ಜೆ.ಸಿ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರ್.ಟಿ.ನಗರದ ಮುತ್ತಾವರ್ ಅರ್ಮಾನ್ ಬಂಧಿತ. ಆರೋಪಿಯಿಂದ ರೂಗರ್ ಕಂಪನಿಯ ಏಳು ಜೀವಂತ ಗುಂಡುಗಳ ಮ್ಯಾಗ್ಜಿನ್ ಜಪ್ತಿ ಮಾಡಲಾಗಿದೆ. ಸ್ನೇಹಿತನ ಜತೆ ಹೋಟೆಲ್‌ನಲ್ಲಿ ಪಾರ್ಟಿ ನಡೆಸಲು ಬಂದಿದ್ದ ಅರ್ಮಾನ್ ಮರೆತು ಮ್ಯಾಗ್ಜಿನ್‌ನ್ನು ಬಿಟ್ಟು ಹೋಗಿದ್ದ. ಪೊಲೀಸರಿಗೆ ಹೋಟೆಲ್ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಪೊಲೀಸರು ತನಿಖೆ ನಡೆಸಿ ಆತನನ್ನು ಜೈಲಿಗಟ್ಟಿದ್ದಾರೆ. ಹಲವು
ಮನೆ ಲೀಸ್ ಆಫರ್ ಮುಂದಿಟ್ಟು ಗ್ರಾಹಕರಿಗೆ 200 ಕೋಟಿ ರೂ. ವಂಚನೆ
ಬೆಂಗಳೂರಿನಲ್ಲಿ ಮನೆ ಲೀಸ್ಗೆ ನೀಡುವುದಾಗಿ ಗ್ರಾಹಕರಿಗೆ ಭರ್ಜರಿ ಆಫರ್‌ಗಳನ್ನು ನೀಡುವ ಮೂಲಕ ಕಂಪೆನಿಯೊಂದು 200 ಕೋಟಿ ರೂ.ಗೂ ಅಧಿಕ ಹಣ ವಂಚಿಸಿರುವ ಪ್ರಕರಣ ಬಹಿರಂಗವಾಗಿದೆ. ಜಾನ್ಸ್ ಅಸೆಟ್ ಹೆಸರಿನ ಮಿಡಿಯೇಟರ್ ಕಂಪನಿಯು 300ಕ್ಕೂ ಹೆಚ್ಚು ಜನರಿಗೆ ವಂಚಿಸಿದ್ದು, ಮಾಲೀಕ ಪರಾರಿಯಾಗಿದ್ದಾನೆ. ಕಂಪನಿ
ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ನಾಳೆ ಸಂಚಾರ ವ್ಯತ್ಯಯ
ನಾಳೆ ನಮ್ಮ ಮೆಟ್ರೋದ ನೇರಳೆ ಮಾರ್ಗದ ಕೆಲವು ಭಾಗಗಳಲ್ಲಿ ಬೆಳಗ್ಗೆ ಸಂಚಾರ ವ್ಯತ್ಯಯಗೊಳ್ಳಲಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ. ಅಗತ್ಯ ನಿರ್ವಹಣಾ ಕಾಮಗಾರಿಗಳ ಹಿನ್ನೆಲೆ ನೇರಳೆ ಮಾರ್ಗದ ಕೆಲವು ಭಾಗಗಳಲ್ಲಿ ಬೆಳಗ್ಗೆ ಎರಡು ಗಂಟೆ ಮೆಟ್ರೋ ಸಂಚಾರ ಸ್ಥಗಿತಗೊಳಿಸಲಾಗುತ್ತಿದೆ. ನಾಡಪ್ರಭು ಕೆಂಪೇಗೌಡ ಮೆಟ್ರೋ
ತಾಯಿಯ ನೋಡಿಕೊಳ್ಳಲಾಗದ ಮಗಳು ಆಸ್ತಿ ವಾಪಸ್ ನೀಡಬೇಕು: ಹೈಕೋರ್ಟ್ ಚಾಟಿ
ತಾಯಿಯನ್ನು ನೋಡಿಕೊಳ್ಳಲಾಗದ ಮಗಳು ತಾಯಿಯ ಆಸ್ತಿಯನ್ನು ಅವರಿಗೆ ವಾಪಸ್ ನೀಡುವಂತೆ ಹಿರಿಯ ನಾಗರಿಕರ ನಿರ್ವಹಣಾ ನ್ಯಾಯಮಂಡಳಿ ಮತ್ತು ಉಪವಿಭಾಗಾಧಿಕಾರಿಗಳು ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ಪುರಸ್ಕರಿಸಿದೆ. ತಾಯಿಯಯನ್ನು ನೋಡಿಕೊಳ್ಳುವ ಕಾನೂನು, ನೈತಿಕ ಮತ್ತು ಸಾಮಾಜಿಕ ಜವಾಬ್ದಾರಿಯಿಂದ ಮಗಳು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿರುವ
ಕೋರ್ಟ್ ನಿರ್ದೇಶನದಂತೆ ಜಿಬಿಎ ಪಾಲಿಕೆಗಳ ಚುನಾವಣೆ: ಡಿಕೆ ಶಿವಕುಮಾರ್
“ಜಿಬಿಎ ವ್ಯಾಪ್ತಿಯ ಪಾಲಿಕೆಗಳ ಚುನಾವಣೆ ಕೋರ್ಟ್ ನಿರ್ದೇಶನದ ಪ್ರಕಾರ ನಡೆಯುತ್ತದೆ” ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಜಿಬಿಎ ಕಚೇರಿ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಬುಧವಾರ ಪ್ರತಿಕ್ರಿಯೆ ನೀಡಿದರು. ಜಿಬಿಎ ಚುನಾವಣೆ ಯಾವಾಗ ನಡೆಯಲಿದೆ ಎಂಬ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯಿಸಿದರು.
ಐಪಿಎಲ್ ಬೆಟ್ಟಿಂಗ್‌ಗಾಗಿ ಸಾಲ: ಯುವಕ ಸುಸೈಡ್
ಐಪಿಎಲ್ ಬೆಟ್ಟಿಂಗ್‌ಗಾಗಿ ಸಾಲ ಮಾಡಿಕೊಂಡು ತೀರಿಸಲಾಗದೆ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೆಲಮಂಗಲದ ಅರಿಶಿನಕುಂಟೆ ಗ್ರಾಮದಲ್ಲಿ ನಡೆದಿದೆ. ತಮಿಳುನಾಡಿನ ಸಿಂಗಸದನಪಲ್ಲಿ ಗ್ರಾಮದ ಶಿವಕುಮಾರ್ (28) ಆತ್ಮಹತ್ಯೆ ಮಾಡಿಕೊಂಡ ಯುವಕ. ಆರು ವರ್ಷದಿಂದ ನೆಲಮಂಗಲದ ಕಾರ್ ಗ್ಯಾರೇಜ್‌ನಲ್ಲಿ ಕೆಲಸ ಮಾಡಿಕೊಂಡು
11 ಗಂಟೆ ಈಜಿ ಶ್ರೀಲಂಕಾದಿಂದ ಧನುಷ್ಕೋಡಿ ತಲುಪಿದ ಬೆಂಗಳೂರಿನ ಟೆಕ್ಕಿ ದಂಪತಿ
ಬೆಂಗಳೂರಿನ ಟೆಕ್ಕಿ ದಂಪತಿ ಶ್ರೀಲಂಕಾದಿಂದ 11 ಗಂಟೆ ಈಜಿಕೊಂಡು ಭಾರತದ ದಡ ಸೇರಿದ್ದಾರೆ. ಐಟಿ ಉದ್ಯಮಿಗಳಾದ ಡ್ಯಾನಿಶ್ ಅಬ್ದಿ ಮತ್ತು ವೃಶಾಲಿ ಪ್ರಸಾದೆ ಈ ದಾಖಲೆ ಸೃಷ್ಟಿಸಿದ್ದಾರೆ. ಶ್ರೀಲಂಕಾದಿಂದ ರಾಮ ಸೇತು ಮಾರ್ಗದ ಮೂಲಕ 11 ಗಂಟೆ ಈಜಿಕೊಂಡು ಭಾರತ ತಲುಪಿದ್ದು,
ಕೆಆರ್‌ಎಸ್ ನೀರಿನ ಮಟ್ಟ 90 ಅಡಿಗೆ ಕುಸಿತ: ಬೆಂಗಳೂರಿಗೂ ಆತಂಕ
ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೃಷ್ಣರಾಜ ಸಾಗರ ಅಣೆಕಟ್ಟಿನ ನೀರಿನ ಮಟ್ಟವು 90 ಅಡಿಗೆ ಕುಸಿದಿದ್ದು, ಬೆಂಗಳೂರು ನಗರ ಸೇರಿದಂತೆ ಹಳೆ ಮೈಸೂರು ಭಾಗದ ಜನರಿಗೆ ಕುಡಿಯುವ ನೀರಿನ ಆತಂಕ ಎದುರಾಗಿದೆ. 124.80 ಅಡಿ ಗರಿಷ್ಠ ಮಟ್ಟವನ್ನು ಹೊಂದಿರುವ ಜಲಾಶಯದಲ್ಲಿ ಈಗ 90 ಅಡಿ
ಬೆಂಗಳೂರಿನಲ್ಲಿ ಮೇ 16ರಿಂದ ಬೃಹತ್ ಇ- ಖಾತಾ ಮೇಳ
ಬೆಂಗಳೂರಿನ ನಾಗರಿಕರಿಗೆ ಜಿಬಿಎ ಇ-ಖಾತಾ ಮನೆ ಬಾಗಿಲಿಗೆ ತಲುಪಿಸಲು ಕ್ರಮ ಕೈಗೊಂಡಿದ್ದು, ಮೇ 16ರಿಂದ ಬೃಹತ್ ಇ- ಖಾತಾ ಮೇಳ ನಡೆಸಲಿದೆ. ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳ 50 ಕಡೆಗಳಲ್ಲಿ ಇ-ಖಾತಾ ಮೇಳ ನಡೆಯಲಿದ್ದು, 25 ಲಕ್ಷ ಖಾತಾಗಳನ್ನ ಇ-ಖಾತಾ
ಗಂಡ, ಮಕ್ಕಳ ತೊರೆದಿದ್ದ ಮಹಿಳೆ ಜೊತೆ ಲಿವ್-ಇನ್ ರಿಲೇಷನ್‌ಶಿಪ್: ನೇಣುಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ
ಬೆಂಗಳೂರಿನ ಶ್ರೀಗಂಧನಗರದಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದ ಯುವಕನ ಶವ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಾವಿನ ಬಗ್ಗೆ ಪೋಷಕರು ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಚಿತ್ರದುರ್ಗದ ತಿಪ್ಪೇಸ್ವಾಮಿ (28) ಮೃತ ವ್ಯಕ್ತಿಯಾಗಿದ್ದು, ಬೆಂಗಳೂರಿನ ಗಾರ್ಮೆಂಟ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ದಾವಣಗೆರೆಯ




