Menu

ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆ ಮಹಾಸಂಪನ್ನ: 25 ಲಕ್ಷಕ್ಕೂ ಹೆಚ್ಚು ಭಕ್ತರಿಗೆ ದಾಸೋಹ

ಲಕ್ಷ ಲಕ್ಷ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ ಕೊಪ್ಪಳದ ಗವಿಮಠದ ಜಾತ್ರೆಗೆ ವಿದ್ಯುಕ್ತವಾಗಿ ಮಹಾ ಸಂಪನ್ನಗೊಂಡಿದೆ. 25 ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ದಾಸೋಹದಲ್ಲಿ ಊಟ ಮಾಡಿದ್ದಾರೆ. ಜನವರಿ 15 ರಂದು ಗವಿಸಿದ್ದೇಶ್ವರರ ರಥೋತ್ಸವ ವೈಭವದಿಂದ ನಡೆದಿತ್ತು. ಅಂದು ಐದು ಲಕ್ಷ ಜನ ಭಾಗವಹಿಸಿದ್ದರು. ಜನವರಿ 15 ರಿಂದ ಆರಂಭವಾಗಿದ್ದ ಜಾತ್ರೆಗೆ 29ರಂದು ವಿದ್ಯುಕ್ತ ತೆರೆ ಬೀಳುವುದರೊಂದಿಗೆ ಜಾತ್ರೆಯ ಮಹಾದಾಸೋಹಕ್ಕೆ ಕೂಡ ತೆರೆಬಿದ್ದಿದೆ. ಕೊನೆಯ ದಿನವೂ ಲಕ್ಷಕ್ಕೂ ಅಧಿಕ ಜನರು ಮಹಾ ದಾಸೋಹದಲ್ಲಿ

ವೇಶ್ಯಾವಾಟಿಕೆ ಅಡ್ಡೆಗಳ ಮೇಲೆ ಪೊಲೀಸ್‌ ದಾಳಿ: ನಾಲ್ವರ ಬಂಧನ

ಬೆಂಗಳೂರಿನ ನಾನಾ ಕಡೆ ವೇಶ್ಯಾವಾಟಿಕೆ ಅಡ್ಡೆಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿ 9 ಮಹಿಳೆಯರನ್ನು ರಕ್ಷಿಸಿದ್ದಾರೆ. ಬಿಇಎಲ್ ಬಡಾವಣೆಯಲ್ಲಿ ಹೈಫೈ ಮನೆ ಬಾಡಿಗೆ ಪಡೆದಿದ್ದ ಆರೋಪಿಗಳು ಹೊರ ರಾಜ್ಯದಿಂದ ಕೆಲಸಕ್ಕೆ ಬರುವ ಯುವತಿಯರನ್ನೇ ಗುರಿಯಾಗಿಸಿಕೊಂಡು ಕೆಲಸದ

ಬೆಂಗಳೂರಿನಲ್ಲಿ ಮತ್ತೆ ಟೋಯಿಂಗ್‌ ಜಾರಿ ಚಿಂತನೆ: ಪರಮೇಶ್ವರ್‌

ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಮತ್ತೆ ಟೋಯಿಂಗ್ ವ್ಯವಸ್ಥೆ ಆರಂಭಿಸಲು ಚಿಂತನೆ ನಡೆಸಲಾಗಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದ್ದಾರೆ. ಬೆಂಗಳೂರು ಟ್ರಾಫಿಕ್ ಪೊಲೀಸ್ ವಿಭಾಗವು ನಗರದ ಇನ್ಫೆಂಟ್ರಿ ರಸ್ತೆಯ ಸಂಚಾರ ನಿರ್ವಹಣಾ ಕೇಂದ್ರದಲ್ಲಿ ಆಯೋಜಿಸಿದ್ದ ನಗರ ಚಲನಶೀಲತೆ ಸವಾಲುಗಳು

ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಬಸ್‌ ತಡೆದು ರೌಡಿಯ ಹುಚ್ಚಾಟ

ಹಾಸನ ಹೊರವಲಯದ ಬೈಪಾಸ್‌ ರಸ್ತೆಯಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ತಡೆದ ರೌಡಿ ಲಾಂಗ್‌ನಿಂದ ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದೆ. ನಸುಕಿನ ಜಾವ ಬೈಪಾಸ್‌ ರಸ್ತೆಯ ದೇವರಾಯಪಟ್ಟಣದ ಬಳಿ ಬೆಂಗಳೂರಿನಿಂದ ಮಂಗಳೂರಿಗೆ ಖಾಸಗಿ ಬಸ್‌ ಸಂಚರಿಸುತ್ತಿತ್ತು. ಈ ಸಂದರ್ಭದಲ್ಲಿ ರೌಡಿ

ಹೊಳೆನರಸೀಪುರದಲ್ಲಿ ರೈಲಿಂದ ನದಿಗೆ ಬಿದ್ದ ವಿದ್ಯಾರ್ಥಿ

ಹಾಸನದ ಹೊಳೆನರಸೀಪುರ ಪಟ್ಟಣದಲ್ಲಿ ಚಲಿಸುತ್ತಿದ್ದ ರೈಲಿನಿಂದ ಆಯತಪ್ಪಿ ವಿದ್ಯಾರ್ಥಿಯೊಬ್ಬ ನದಿಗೆ ಬಿದ್ದಿದ್ದಾನೆ. ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಮುಜಾಮಿಲ್ ನದಿಗೆ ಬಿದ್ದ ವಿದ್ಯಾರ್ಥಿ. ವಿದ್ಯಾಥಿ ಕೆ.ಆರ್ ನಗರದಿಂದ ಹಾಸನಕ್ಕೆ ಎಕ್ಸ್ಪ್ರೆಸ್ ರೈಲಿನಲ್ಲಿ ತೆರಳುತ್ತಿದ್ದ. ಚಲಿಸುತ್ತಿದ್ದ ರೈಲಿನ ಬೋಗಿಯ ಮೆಟ್ಟಿಲ ಮೇಲೆ ಮುಜಾಮಿಲ್

ಮುಡಾ ಮಾಜಿ ಅಧ್ಯಕ್ಷ ನಟೇಶ್ ವಿರುದ್ಧ ಇಡಿ ಶೋಧ ರದ್ದುಗೊಳಿಸಿದ ಹೈಕೋರ್ಟ್‌

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ  ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಆಯುಕ್ತ ಡಿಬಿ ನಟೇಶ್ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಹೊರಡಿಸಿರುವ ಸಮನ್ಸ್ ರದ್ದು ವಿಚಾರವಾಗಿ ಮಹತ್ವದ ಸೂಚನೆ ನೀಡಿರುವ ಕರ್ನಾಟಕ ಹೈಕೋರ್ಟ್‌, ನಟೇಶ್ ವಿರುದ್ಧ ಪಿಎಂಎಲ್‌ಎ ಕಾಯ್ದೆಯಡಿ ಇಡಿ ಶೋಧನೆಯನ್ನು ರದ್ದುಪಡಿಸಿದೆ.

ಕುಂಭಮೇಳ ಕಾಲ್ತುಳಿತಕ್ಕೆ ಬಲಿಯಾದ ನಾಲ್ವರ ಮೃತದೇಹ ಬೆಳಗಾವಿಗೆ

ಪ್ರಯಾಗ್‌ ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಉಂಟಾಗಿರುವ ಕಾಲ್ತುಳಿತಕ್ಕೆ ಐವತ್ತಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ ಎನ್ನಲಾಗುತ್ತಿದೆ. ಬಲಿಯಾಗಿರುವವರಲ್ಲಿ ಬೆಳಗಾವಿಯ ನಾಲ್ವರ ಮೃತದೇಹ ಇಂದು (ಗುರುವಾರ) ಸಂಜೆ ಬೆಳಗಾವಿಗೆ ತಲುಪಲಿದೆ. ಇಂದೇ ಅಂತ್ಯ ಸಂಸ್ಕಾರ ಕೂಡ ನಡೆಯಲಿದೆ. ಮೃತದೇಹಗಳನ್ನು ಪ್ರಯಾಗ್‌ರಾಜ್‌ ನಿಂದ ದೆಹಲಿಗೆ

ಸೇಲ್ಸ್​​ಮ್ಯಾನ್ ಸೋಗಿನಲ್ಲಿ ಬಂದಾತ ಕರುವಿನ ಬಾಲ ಕತ್ತರಿಸಿ ಪರಾರಿ

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಗುಂಡ್ಮಿ ಗ್ರಾಮದಲ್ಲಿ ಸೇಲ್ಸ್​​ಮ್ಯಾನ್ ಸೋಗಿನಲ್ಲಿ ಬಂದ ವ್ಯಕ್ತಿಯೊಬ್ಬ ಕರುವಿನ ಬಾಲ ಕತ್ತರಿಸಿ ವಿಕೃತಿ ಮೆರೆದಿದ್ದಾನೆ. ಗುಂಡ್ಮಿಯಲ್ಲಿ ಮಯ್ಯ ಕುಟುಂಬದ ಮನೆಯೊಂದಕ್ಕೆ ಸೇಲ್ಸ್ ಮ್ಯಾನ್ ಸೋಗಿನಲ್ಲಿ ಬಂದಿದ್ದ ದುಷ್ಕರ್ಮಿ, ಮನೆಯವರನ್ನು ಕರೆದು ವಸ್ತುಗಳನ್ನು ತೋರಿಸಿದ್ದಾನೆ. ವಸ್ತುಗಳ ಖರೀದಿಗೆ

ಡಿಕೆಶಿ ವಿರುದ್ಧ ಅರ್ಜಿ ಸಲ್ಲಿಸಿದ ಯತ್ನಾಳ್ ಗೆ ಸುಪ್ರೀಂ ಚಾಟಿ

ಅಕ್ರಮ ಆಸ್ತಿ ಗಳಿಕೆ ಆರೋಪ ಕುರಿತು ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ಹಿಂಪಡೆದಿದ್ದ ಕಾಂಗ್ರೆಸ್ ಸರ್ಕಾರದ ಕ್ರಮ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಸುಪ್ರೀಂಕೋರ್ಟ್ ಚಾಟಿ ಬೀಸಿದೆ. ಸಿಬಿಐ

ಮೈಕ್ರೋ ಫೈನಾನ್ಸ್‌ನಿಂದ ಮನೆ ಜಪ್ತಿ: ಮಹಿಳೆ ಆತ್ಮಹತ್ಯೆ

ಮಂಡ್ಯ, ಜ.೨೯: ಮೈಕ್ರೋ ಫೈನಾನ್ಸ್ ಕಿರುಕಳದಿಂದ ಮಂಗಳವಾರ ಆತ್ಮಹತ್ಯೆಗೆ ಯತ್ನಿಸಿದ್ದ ಮಳವಳ್ಳಿ ತಾಲೂಕು ಕೊನ್ನಾಪುರ ಗ್ರಾಮದ ಅಂದಾನಯ್ಯ ಅವರ ಪತ್ನಿ ಪ್ರೇಮಾ(52) ಚಿಕಿತ್ಸೆ ಫಲಕಾರಿಯಾಗದೆ ಮಿಮ್ಸ್ ಜಿಲ್ಲಾಸ್ಪತ್ರೆಯಲ್ಲಿ ಬುಧವಾರ ಸಾವನ್ನಪ್ಪಿದ್ದಾರೆ. ಖಾಸಗಿ ಫೈನಾನ್ಸ್ ಸಂಸ್ಥೆಯಿಂದ ೬ ಲಕ್ಷ ರೂ. ಸಾಲ ಪಡೆದಿದ್ದ