Menu

ಮೈಕ್ರೊ ಫೈನಾನ್ಸ್ ಹಾವಳಿ ಕಡಿವಾಣಕ್ಕೆ ಸುಗ್ರಿವಾಜ್ಞೆ: ರಾಜ್ಯ ಸಚಿವ ಸಂಪುಟ ಅನಮೋದನೆ

ರಾಜ್ಯದಲ್ಲಿ ಹೆಚ್ಚುತ್ತಿರುವ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕಿರುಕುಳತಕ್ಕೆ ಕಡಿವಾಣ ಹಾಕಲು ಸುಗ್ರಿವಾಜ್ಞೆ ಜಾರಿಗೆ ತರಲು ರಾಜ್ಯ ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ಸಚಿವ ಸಂಪುಟ ಸಭೆಯಲ್ಲಿ ಮೈಕ್ರೋಫೈನಾನ್ಸ್ ಸಂಸ್ಥೆಗಳನ್ನು ಕಡಿವಾಣ ಹಾಕಲು ಹೊಸದಾಗಿ ಜಾರಿಗೆ ತರುವ ಮಸೂದೆಗೆ ಒಪ್ಪಿಗೆ ನೀಡಲಾಗಿದೆ. ಕಾನೂನು ಮತ್ತು ಸಂಸದೀಯ ಸಚಿವ ಎಚ್ಕೆ ಪಾಟೀಲ್ ಸುದ್ದಿಗೋಷ್ಠಿಯಲ್ಲಿ ಸಂಪುಟ ಸಭೆಯ ತೀರ್ಮಾನಗಳನ್ನು ವಿವರಿಸಿದ್ದು, ಅಮಾನವೀಯವಾಗಿ ಮೈಕ್ರೋ ಪೈನಾನ್ಸ್ನಿಂದ ಸಾಲ ವಸೂಲಿ ಆಗುತ್ತಿದೆ. ಇಂದು

ಮಯಾಂಕ್ ಕೈ ತಪ್ಪಿದ ಶತಕ: ಬೃಹತ್ ಮೊತ್ತದತ್ತ ಕರ್ನಾಟಕ

ಶತಕ ವಂಚಿತ ನಾಯಕ ಮಯಾಂಕ್ ಅಗರ್ ವಾಲ್ ಭರ್ಜರಿ ಪ್ರದರ್ಶನದಿಂದ ಕರ್ನಾಟಕ ತಂಡ ರಣಜಿ ಟ್ರೋಫಿ ಪಂದ್ಯದಲ್ಲಿ ಹರಿಯಾಣ ವಿರುದ್ಧ ಬೃಹತ್ ಮೊತ್ತದತ್ತ ಸಾಗಿದೆ. ಬೆಂಗಳೂರಿನಲ್ಲಿ ಗುರುವಾರ ಆರಂಭಗೊಂಡ ಸಿ ಗುಂಪಿನ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ

ಮಹಾತ್ಮ ಗಾಂಧಿ ಒಪ್ಪದ ಬಿಜೆಪಿ ಅವರ ಪ್ರತಿಮೆ ಮುಂದೆ ಪ್ರತಿಭಟಿಸುತ್ತದೆ: ಡಿಕೆ ಶಿವಕುಮಾರ್

ಬೆಂಗಳೂರು: ಬಿಜೆಪಿ ಗಾಂಧಿಯವರ ಹೆಜ್ಜೆ ಗುರುತುಗಳನ್ನು ಅಳಿಸುವ ಕೆಲಸ ಮಾಡುತ್ತಿದ್ದಾರೆ. ನಾವು ಅದನ್ನು ಉಳಿಸುವ ಕೆಲಸ ಮಾಡಬೇಕು. ಮಹಾತ್ಮ ಗಾಂಧಿ ಅವರ ತತ್ವಗಳನ್ನು ಒಪ್ಪದ ಬಿಜೆಪಿಯವರು ಅವರ ಪ್ರತಿಮೆ ಕೆಳಗೆ ಕುಳಿತು ಪ್ರತಿಭಟನೆ ಮಾಡುತ್ತಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.

ಜಿಲ್ಲಾ ಅಧ್ಯಕ್ಷರ ಚುನಾವಣೆಯಲ್ಲಿ ನನ್ನ ಪಾತ್ರವಿಲ್ಲ: ವಿಜಯೇಂದ್ರ ಸ್ಪಷ್ಟನೆ

ಬೆಂಗಳೂರು: ಪಕ್ಷದ ರಾಜ್ಯಾಧ್ಯಕ್ಷನಾಗಿ ಯಾವುದೇ ಜಿಲ್ಲೆಯ ಜಿಲ್ಲಾ ಅಧ್ಯಕ್ಷರ ಚುನಾವಣೆ ಪ್ರಕ್ರಿಯೆಯಲ್ಲಿ ತಮ್ಮ ಯಾವುದೇ ಪಾತ್ರ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ. ಮಾಜಿ ಸಚಿವ, ಚಿಕ್ಕಬಳ್ಳಾಪುರದ ಮಾಜಿ ಶಾಸಕ ಸುಧಾಕರ್ ತಮ್ಮ ವಿರುದ್ಧ ಮಾಡಿದ ಆರೋಪಗಳಿಗೆ ಪ್ರತಿಕ್ರಿಯಿಸುತ್ತ

ಕೊನೆಗೂ ವಕ್ಫ್ ಕರಡು ಮಸೂದೆಗೆ 14-11 ಮತಗಳಿಂದ ಜೆಪಿಸಿ ಅಂಗೀಕಾರ

ನವದೆಹಲಿ: ವಕ್ಫ್ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಸಭೆಯಲ್ಲಿ ವಕ್ಫ್ ಕರಡು ಮಸೂದೆಯನ್ನು ಸ್ವೀಕರಿಸಲಾಗಿದೆ. ಮಸೂದೆಯ ಪರವಾಗಿ 14 ಹಾಗೂ ವಿರುದ್ಧ 11 ಮತಗಳು ಚಲಾವಣೆಯಾದವು. ಜೆಪಿಸಿಯ ವಿರೋಧ ಪಕ್ಷದ ಸದಸ್ಯರು ಇಂದು (ಜ.29) ಸಂಜೆ 4 ಗಂಟೆಯೊಳಗೆ ತಮ್ಮ ಭಿನ್ನಾಭಿಪ್ರಾಯಗಳನ್ನು

ಯಮುನಾ ನದಿ ವಿವಾದ: ಚುನಾವಣಾ ಆಯೋಗಕ್ಕೆ ಕೇಜ್ರಿವಾಲ್ ಸವಾಲು

ಯಮುನಾ ನದಿ ಎಷ್ಟು ವಿಷಕಾರಿ ಎಂಬುದು ತಿಳಿಯುವ ಧೈರ್ಯ ಇದ್ದರೆ ಇದನ್ನು ಕುಡಿಯುವ ಸಾಹಸ ಮಾಡಿ ಎಂದು ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೇಂದ್ರ ಚುನಾವಣಾ ಆಯೋಗಕ್ಕೆ ಸವಾಲು ಹಾಕಿದ್ದಾರೆ. ಯಮುನಾ ನದಿ ಕಲುಷಿತಗೊಂಡಿದ್ದು, ಬಿಜೆಪಿ ಸರ್ಕರ ವಿಷ ಹಾಕುತ್ತಿದೆ

ಅಮೆರಿಕದಲ್ಲಿ ಸೇನಾ ಹೆಲಿಕಾಫ್ಟರ್ ಗೆ ವಿಮಾನ ಡಿಕ್ಕಿ: 64 ಮಂದಿ ಸಾವಿನ ಶಂಕೆ

ವಾಣಿಜ್ಯ ವಿಮಾನವೊಂದು ಮಿಲಿಟರಿ ಹೆಲಿಕಾಫ್ಟರ್ ಗೆ ಡಿಕ್ಕಿ ಹೊಡೆದ ಪರಿಣಾಮ 64 ಮಂದಿ ಮೃತಪಟ್ಟಿರುವ ಶಂಕೆ ಇದ್ದು, ಇದುವರೆಗೆ ೧೮ ಶವಗಳನ್ನು ನದಿಯಿಂದ ಹೊರತೆಗೆಯಲಾಗಿದೆ. ಅಮೆರಿಕದ ರೇಗನ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ಮುಂಜಾನೆ ಈ ದುರಂತ ಸಂಭವಿಸಿದ್ದು, ಪೊಟೊಮ್ಯಾಕ್ ನದಿಗೆ

ಮಹಾತ್ಮಾ ಗಾಂಧೀಜಿ ಮೌಲ್ಯಗಳನ್ನು ಕೊಲ್ಲಲು ಯಾರಿಂದಲೂ ಸಾಧ್ಯವಿಲ್ಲ: ಸಿದ್ದರಾಮಯ್ಯ

ಬೆಂಗಳೂರು: ಮತಾಂಧ ನಾಥೂರಾಮ್ ಗೋಡ್ಸೆ ಮಹಾತ್ಮಾ ಗಾಂಧಿಯವರನ್ನು ಗುಂಡಿಟ್ಟು ಕೊಂದು, ಅವರು ಇಹಲೋಕ ತ್ಯಜಿಸಿರಬಹುದು. ಆದರೆ ಮಹಾತ್ಮಾ ಗಾಂಧೀಜಿಯವರ ಮೌಲ್ಯಗಳನ್ನು ಕೊಲ್ಲಲು ಗೋಡ್ಸೆಯಾಗಲಿ ಅಥವಾ ಇನ್ಯಾರಿಂದಾಗಲಿ ಕೊಲ್ಲಲು ಸಾಧ್ಯವಿಲ್ಲ. ಇಂದಿಗೂ ಅವರ ವಿಚಾರಧಾರೆಗಳು , ಮೌಲ್ಯಗಳು ಭಾರತದಲ್ಲಿ ಮಾತ್ರವಲ್ಲ ಜಗತ್ತಿನಲ್ಲಿಯೇ ಪ್ರಸ್ತುತವಾಗಿವೆ

ತಿರುವನಂತಪುರ ಶ್ರೀ ಅನಂತ ಪದ್ಮನಾಭ ಸ್ವಾಮಿ ಪ್ರಧಾನ ಅರ್ಚಕರಾಗಿ ಶ್ರೀಸತ್ಯನಾರಾಯಣ ತೋಡ್ತಿಲ್ಲಾಯ

ಕೇರಳದ ತಿರುವನಂತಪುರ ಶ್ರೀ ಅನಂತ ಪದ್ಮನಾಭ ಸ್ವಾಮಿ ದೇಗುಲ ಭಾರತದ ಅತ್ಯಂತ ಶ್ರೀಮಂತ ದೇವಸ್ಥಾನವೆಂಬ ಹೆಗ್ಗಳಿಕೆ ಹೊಂದಿದ್ದು, ಅಲ್ಲಿನ ಪೆರಿಯ ನಂಬಿ ಪಟ್ಟ ದಕ್ಷಿಣ ಕನ್ನಡ ಜಿಲ್ಲೆಯ ಅರ್ಚಕ ಬಡೆಕ್ಕರ ಶ್ರೀಸತ್ಯನಾರಾಯಣ ತೋಡ್ತಿಲ್ಲಾಯ ಯಾನೆ ನಾಗೇಶ ತೋಡ್ತಿಲ್ಲಾಯರಿಗೆ ಲಭಿಸಿದೆ. ಪೆರಿಯ ನಂಬಿ

ಸಹಪಾಠಿಯ ರೇಪ್‌ ಮಾಡಲು 7ನೇ ತರಗತಿಯವನಿಂದ 9ನೇ ತರಗತಿಯವನಿಗೆ 100 ರೂ. ಸುಪಾರಿ

ಮಹಾರಾಷ್ಟ್ರದ ದೌಂಡ್ ಜಿಲ್ಲೆಯಲ್ಲಿ 7ನೇ ತರಗತಿಯ ವಿದ್ಯಾರ್ಥಿ ಸಹಪಾಠಿ ವಿದ್ಯಾರ್ಥಿನಿ ಮೇಲೆ ಸೇಡು ತೀರಿಸಿಕೊಳ್ಳಲು ಆಕೆಯ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಲು 9ನೇ ತರಗತಿಯ ಬಾಲಕನಿಗೆ 100 ರೂ ಸುಪಾರಿ ನೀಡಿರುವ ಆತಂಕಕಾರಿ ಪ್ರಕರಣ ಬಹಿರಂಗಗೊಂಡಿದೆ. ಸುಪಾರಿ ಪಡೆದಿದ್ದ ಬಾಲಕ