ಅತೀ ಹೆಚ್ಚು ಸಾಲಗಾರ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕಕ್ಕೆ 5ನೇ ಸ್ಥಾನ!
ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಭಾರತದ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು 88.3 ಲಕ್ಷ ಕೋಟಿ ರೂ. ಸಾಲವನ್ನು ಹೊಂದಿವೆ ಎಂದು ಹೇಳಿದೆ. ರಾಜ್ಯಗಳ ಸಾಲ ಹೆಚ್ಚಾಗಲು ಪ್ರಮುಖವಾಗಿ ಕೊರೊನಾ ಸಾಂಕ್ರಮಿಕ ಹಾಗೂ ಜನಪರ ಯೋಜನೆಗಳು ಕಾರಣಗಳು ಎನ್ನಲಾಗಿದೆ. ಹಲವು ರಾಜ್ಯಗಳಲ್ಲಿ ಉಚಿತ ಯೋಜನೆಗಳು ಘೋಷಣೆಯಾಗಿರುವುದು ಆ ರಾಜ್ಯಗಳ ಸಾಲದ ಪ್ರಮಾಣ ಗಮನಾರ್ಹ ಏರಿಕೆಗೆ ಕಾರಣ ಎನ್ನಲಾಗುತ್ತಿದೆ. ತಮಿಳುನಾಡು, ಉತ್ತರ ಪ್ರದೇಶ ರಾಜ್ಯಗಳು
ವಿಧಾನಸೌಧ, ರಾಜ್ಯಭವನಕ್ಕೆ ತೆರಿಗೆ ಬಾಕಿ ನೋಟಿಸ್ ಜಾರಿ!
ರಾಜ್ಯ ಸರ್ಕಾರದ ಆಡಳಿತ ಕೇಂದ್ರ ವಿಧಾನಸೌಧ, ರಾಜ್ಯಪಾಲರ ನಿವಾಸ ಅಥವಾ ರಾಜಭವನ, ಮತ್ತು ವಿಕಾಸಸೌಧ ಸೇರಿದಂತೆ 258 ಸರ್ಕಾರಿ ಕಟ್ಟಡಗಳಿಗೆ ಆಸ್ತಿ ತೆರಿಗೆ ಪಾವತಿಸದಿರುವ ಬಗ್ಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನೋಟಿಸ್ ಜಾರಿ ಮಾಡಿದೆ. ಕೆಲವು ಇಲಾಖೆಗಳು ಸುಮಾರು
ಹಳ್ಳಿ ಭಾಷೆಯಲ್ಲಿ ಹೇಳಿದ್ದೇನೆ, ಹೊಸ ಭಾಷೆ ಇದ್ದರೆ ಕಲಿಸಿಕೊಡಿ: ಚಿತ್ರರಂಗದ ಗಣ್ಯರ ಅಸಮಾಧಾನಕ್ಕೆ ಡಿಕೆಶಿ ತಿರುಗೇಟು
“ನಾನು ಚಿತ್ರರಂಗದ ಒಳಿತಿಗಾಗಿ ಮಾತನಾಡಿದ್ದೇನೆ. ಒಂದೆರಡು ಸಿನಿಮಾಗಳಿಂದ ಕನ್ನಡ ಚಿತ್ರರಂಗಕ್ಕೆ ಉತ್ತಮ ಯೋಗ ಬಂದಿದೆ. ಬಂದಿರುವ ಯೋಗವನ್ನು ಉಳಿಸಿಕೊಂಡು ಹೋಗಿ ಎಂದು ಹೇಳುತ್ತಿದ್ದೇನೆ. ನಾನು ನನ್ನ ಹಿತವಚನವನ್ನು ಹಳ್ಳಿ ಭಾಷೆಯಲ್ಲಿ ಒರಟಾಗಿ ಹೇಳಿದ್ದೇನೆ. ನನಗೂ ಚಿತ್ರರಂಗ ಉಳಿಯಬೇಕು ಎನ್ನುವ ಆಸೆಯಿದೆ” ಎಂದು
ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಕರಾವಳಿ ಭಾಗದ ಶಾಸಕರ ಜತೆ ಪ್ರತ್ಯೇಕ ಸಭೆ: ಡಿಕೆ ಶಿವಕುಮಾರ್
ಬೆಂಗಳೂರು: ರಾಜ್ಯದ ಕರಾವಳಿ ಭಾಗದಲ್ಲಿ ಆರೋಗ್ಯ, ಶೈಕ್ಷಣಿಕ, ಧಾರ್ಮಿಕ ಹಾಗೂ ವಾಣಿಜ್ಯ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶಗಳಿವೆ. ಹೀಗಾಗಿ ಈ ಭಾಗದ ಎಲ್ಲಾ ಶಾಸಕರ ಜತೆಗೆ ನಾನು ಹಾಗೂ ಪ್ರವಾಸೋದ್ಯಮ ಸಚಿವರು ಪ್ರತ್ಯೇಕವಾಗಿ ಸಭೆ ಮಾಡಿ ಎಲ್ಲರ ಅಭಿಪ್ರಾಯ ಸಂಗ್ರಹಿಸಲಾಗುವುದು ಎಂದು ಡಿಸಿಎಂ
2 ವರ್ಷದಲ್ಲಿ ರಸ್ತೆಗಿಳಿಯಲಿವೆ ಹಸಿರು ಹೈಡ್ರೋಜನ್ ವಾಹನ!
ನವದೆಹಲಿ: ಇಂಧನ ಕ್ಷೇತ್ರದಲ್ಲಿ ಆತ್ಮನಿರ್ಭರತೆ ಜತೆಗೆ ಜಾಗತಿಕ ನಾಯಕತ್ವದತ್ತ ದಾಪುಗಾಲಿಟ್ಟ ಭಾರತ ಇದೀಗ ದೇಶದ ಹತ್ತು ಮಹಾನ್ ನಗರಗಳಲ್ಲಿ ಹಸಿರು ಹೈಡ್ರೋಜನ್ (ಜಲಜನಕ) ಇಂಧನ ಆಧಾರಿತ ವಾಹನಗಳನ್ನು ಓಡಿಸಲು ಸಜ್ಜಾಗಿದೆ. ಸಾರಿಗೆ ವಲಯವನ್ನು ಸುಸ್ಥಿರಗೊಳಿಸುವ ನಿಟ್ಟಿನಲ್ಲಿ ಹೆಜ್ಜೆ ಹಾಕಿದ ಭಾರತ ವಿದ್ಯುತ್
1.20 ಲಕ್ಷ ಕೋಟಿ ರೂ. ಕಾಮಗಾರಿಗೆ ಬಿಜೆಪಿ ಆದೇಶ ನೀಡಿ ಹೋಗಿದೆ: ಡಿಕೆ ಶಿವಕುಮಾರ್
ಬೆಂಗಳೂರು: ಆದ್ಯತೆ ಮೇರೆಗೆ ಗುತ್ತಿಗೆದಾರರ ಬಿಲ್ ಗಳನ್ನು ಪಾವತಿ ಮಾಡಲಾಗುವುದು. ಸಣ್ಣ, ಸಣ್ಣ ಬಿಲ್ ಗಳನ್ನು ಪಾವತಿ ಮಾಡುವುದಾಗಿ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳಿಗೆ ಆಶ್ವಾಸನೆ ನೀಡಿದ್ದು, ಹಣ ಬಂದ ತಕ್ಷಣ ಪಾವತಿ ಮಾಡಲಾಗುವುದು” ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು. ವಿಧಾನಸೌಧದ
ಬಾಡಿಬಿಲ್ಡರ್ ಚಿತ್ರಾ ಪುರುಷೋತ್ತಮ್ ಮದುವೆ ಫೋಟೊ ವೈರಲ್!
ಮಹಿಳಾ ಬಾಡಿ ಬಿಲ್ಡರ್ ಖ್ಯತ ಚಿತ್ರಾಪುರುಷೋತ್ತಮ್ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಬೆನ್ನಲ್ಲೇ ಅವರ ಸಾಂಪ್ರದಾಯಿಕ ಸೀರೆಯಲ್ಲೂ ಬಾಡಿಬಿಲ್ಡ್ ಫೋಟೊ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಕಿಚ್ಚು ಹಚ್ಚಿದೆ. ಕನ್ನಡದ ಖ್ಯಾತ ಮಹಿಳಾ ಬಾಡಿಬಿಲ್ಡರ್ ಚಿತ್ರಾ ಪುರುಷೋತ್ತಮ್ ವಿಶಿಷ್ಟ ವಧುವಿನ ಲುಕ್ನಿಂದಾಗಿ ಗಮನ ಸೆಳೆದಿದ್ದಾರೆ.
ಟೊಮೆಟೊ ಸಾಸ್ ನಲ್ಲಿ ಅಪಾಯಕಾರಿ ಬೆಂಜೊಯೆಟ್ ರಾಸಾಯನಿಕ: ಲ್ಯಾಬ್ ವರದಿಯಲ್ಲಿ ದೃಢ
ಆಹಾರ ಪ್ರಿಯರು ಬಾಯಿ ಚಪ್ಪರಿಸಿ ಸವಿಯುವ ಟೊಮೆಟೊ ಸಾಸ್ಗೆ ಅಪಾಯಕಾರಿ ರಾಸಾಯಾನಿಕ ಬಳಸುತ್ತಿರುವುದು ಆಹಾರ ಸುರಕ್ಷತಾ ಇಲಾಖೆ ವರದಿಯಲ್ಲಿ ದೃಢವಾಗಿದೆ. ಇದು ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ ಎಂದು ವರದಿ ಹೇಳಿದೆ. ವಿವಿಧ ಆಹಾರ ಪದಾರ್ಥಗಳಲ್ಲಿ ರಾಸಾಯನಿಕ ಬಳಕೆಯಾಗುತ್ತಿರುವ ಆರೋಪ ಕೇಳಿಬಂದ ಬೆನ್ನಲ್ಲೇ
ಕನಕಪುರದಲ್ಲಿ ಪೊಲೀಸರ ಮೇಲೆ ಹಲ್ಲೆಗೈದ ಪುಂಡರ ಬಂಧನ
ಕನಕಪುರ ತಾಲೂಕಿನ ಕುರುಬಳ್ಳಿದೊಡ್ಡಿ ಗ್ರಾಮದ ಬಳಿ ರಾಮನಗರ ಅರಣ್ಯ ಪ್ರದೇಶದಲ್ಲಿ ಪಾರ್ಟಿ ಮಾಡುತ್ತಿರುವುದನ್ನು ಪ್ರಶ್ನಿಸಿದ್ದಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರ ಮೇಲೆ ರೌಡಿಶೀಟರ್ ಸೇರಿ ಪುಂಡರ ಗುಂಪೊಂದು ಹಲ್ಲೆ ನಡೆಸಿದೆ. ಆರೋಪಿಗಳಾದ ರೌಡಿಶೀಟರ್ ಕಿರಣ್, ಗುರುಪ್ರಸಾದ್, ಸುಂದರ್ ಎಂಬವರನ್ನು ಸಾತನೂರು
14.8 ಕೆಜಿ ಚಿನ್ನ ಕಳ್ಳಸಾಗಾಣೆ: ಬೆಂಗಳೂರಿನಲ್ಲಿ ಮಾಣಿಕ್ಯ ಚಿತ್ರದ ನಟಿ ಅರೆಸ್ಟ್!
ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಕನ್ನಡದ ಮಾಣಿಕ್ಯ ಚಿತ್ರದ ನಟಿ ಹಾಗೂ ಐಪಿಎಸ್ ಅಧಿಕಾರಿ ಪುತ್ರಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ವಿದೇಶದಿಂದ 14.8 ಕೆಜಿ ಚಿನ್ನವನ್ನು ಕಳ್ಳಸಾಗಾಣೆ ಮಾಡುತ್ತಿದ್ದಾಗ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಟಿ ರನ್ಯಾ ಅವರನ್ನು ಡಿಆರ್ ಐ ಅಧಿಕಾರಿಗಳು ಬಂಧಿಸಿದ್ದಾರೆ.




