Menu

ಆಳಂದದಲ್ಲಿ ಮತ ಕಳವು ಹೇಗಾಯ್ತು: ಎಸ್‌ಐಟಿ ತನಿಖೆಯಲ್ಲಿ ಬಯಲಾಯ್ತು

ಕಲಬುರಗಿಯ ಆಳಂದ ಕ್ಷೇತ್ರದಲ್ಲಿ ನಡೆದ ಮತ ಕಳ್ಳತನ ಪ್ರಕರಣದ ಎಸ್ಐಟಿ ತನಿಖೆ ಚುರುಕುಗೊಂಡಿದ್ದು, ಹಲವು ಮಹತ್ವದ ವಿಚಾರಗಳು ಬಯಲಾಗಿವೆ. ಮತದಾರ ಪಟ್ಟಿಯಿಂದ ಹೆಸರುಗಳನ್ನು ಕೈಬಿಡಲು 6,018 ನಕಲಿ ಅರ್ಜಿಗಳು ಸಲ್ಲಿಕೆಯಾಗಿದ್ದವು. ಹೆಸರು ಕೈ ಬಿಡಲು ಸಲ್ಲಿಕೆಯಾದ ಒಂದು ಅರ್ಜಿ ಸಂಬಂಧ ಡೇಟಾ ಸೆಂಟರ್‌ಗೆ 80 ರೂಪಾಯಿ ಪಾವತಿಯಾಗಿತ್ತು, ಹೀಗೆ ಡೇಟಾ ಸೆಂಟರ್‌ 4.8 ಲಕ್ಷ ರೂ. ಪಡೆದಿತ್ತು ಎಂಬುದು ಪತ್ತೆಯಾಗಿದೆ. ಮತದಾರನ ಹೆಸರು ಪಟ್ಟಿಯಿಂದ ತೆಗೆದು ಹಾಕಲು ಮೊಹಮ್ಮದ್ ಅಶ್ಫಾಕ್

ಆಶಾ ಕಾರ್ಯಕರ್ತೆಯರಿಗೆ ಮೂರು ತಿಂಗಳಿಂದ ಸಂಬಳವಿಲ್ಲ: ಆರ್‌. ಅಶೋಕ ಕಿಡಿ

ಆಶಾ ಕಾರ್ಯಕರ್ತೆಯರ ಗೌರವಧನ ₹8,000ಕ್ಕೆ ಹೆಚ್ಚಳ ಮಾಡುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಬೊಗಳೆ ಬಿಟ್ಟು ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಪಕ್ಷ, ಗೌರವಧನ ಹೆಚ್ಚಿಸುವುದಿರಲಿ, ಕಳೆದ ಮೂರು ತಿಂಗಳಿಂದ ಕೊಡಬೇಕಾದ ಗೌರವಧನವನ್ನೂ ಕೊಟ್ಟಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್‌. ಅಶೋಕ್‌ ಕಿಡಿ ಕಾರಿದ್ದಾರೆ.

ಆನೇಕಲ್ ಭಾಗ ಭವಿಷ್ಯದಲ್ಲಿ ಜಿಬಿಎ ವ್ಯಾಪ್ತಿಗೆ: ಡಿಕೆ ಶಿವಕುಮಾರ್

“ಆನೇಕಲ್ ಭಾಗ ಭವಿಷ್ಯದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಗೆ ಸೇರಲಿದೆ. ಈಗಾಗಲೇ ಕಾವೇರಿ ಕುಡಿಯುವ ನೀರನ್ನು ನೀಡಲಾಗುತ್ತಿದೆ. ಭವಿಷ್ಯದಲ್ಲಿ ನೀಡಬೇಕಾದ ಸವಲತ್ತುಗಳ ಬಗ್ಗೆ ಚರ್ಚೆ ನಡೆಸಲಾಗುವುದು” ಎಂದು ಡಿಸಿಎಂ ಡಿಕೆ ಶಿವಕುಮಾರ್ ‌ ಹೇಳಿದರು. ನಗರ ಪ್ರದಕ್ಷಿಣೆ ಅಂಗವಾಗಿ ಗುರುವಾರ ಆನೇಕಲ್

ಮಾದನಾಯಕನಹಳ್ಳಿ ಮನೆಗೆ ನುಗ್ಗಿ ಗಂಡಸರ ಕಟ್ಟಿ ಹಾಕಿ ಮಹಿಳೆಯ ರೇಪ್‌, ಹಣ, ಮೊಬೈಲ್‌ ದರೋಡೆ

ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿಯ ಗಂಗೊಂಡನಹಳ್ಳಿಯ ಮನೆಯೊಂದಕ್ಕೆ ನುಗ್ಗಿದ ಆರು ದುಷ್ಕರ್ಮಿಗಳು ಅಲ್ಲಿದ್ದ ಗಂಡಸರನ್ನು ಕಟ್ಟಿ ಹಾಕಿ ಥಳಿಸಿ, ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರಗೈದು ಹಣ, ಮೊಬೈಲ್‌ ದೋಚಿ ಪರಾರಿಯಾಗಿದ್ದಾರೆ. ಗಂಗೊಂಡನಹಳ್ಳಿಯ ಮಾರೇಗೌಡ ಎಂಬವರ ಮನೆಯಲ್ಲಿ ನೇಪಾಳ ಮೂಲದ ಸಂತ್ರಸ್ತೆ ಮತ್ತು

ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್‌ ಬೆಂಕಿಗಾಹುತಿ: 25 ಮಂದಿ ಸಜೀವ ದಹನ

ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್‌ಗೆ ಕರ್ನೂಲ್‌  ಚಿನ್ನಟೇಕೂರು ಬಳಿ ಬೈಕ್‌ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡು ಉರಿದಿದ್ದು, 25 ಮಂದಿ ಸಜೀವ ದಹನವಾಗಿದ್ದಾರೆ. ಕಾವೇರಿ ಹೆಸರಿನ ವೋಲ್ವೋ ಬಸ್ಸಿನಲ್ಲಿ 44 ಪ್ರಯಾಣಿಕರಿದ್ದು, ಶುಕ್ರವಾರ ಬಳಗಿನ ಜಾವ ವೇಗವಾಗಿ ಬಂದ ಬೈಕ್‌

ಅ.30ರಂದು ಬೆಂಗಳೂರಿನಲ್ಲಿ ದಕ್ಷಿಣ ಭಾರತದ ನಗರಾಭಿವೃದ್ಧಿ ಸಚಿವರ ಸಭೆ: ಡಿಸಿಎಂ 

“ಇದೇ 30ರಂದು ಬೆಂಗಳೂರಿನಲ್ಲಿ ದಕ್ಷಿಣ ಭಾರತದ ಎಲ್ಲ ರಾಜ್ಯಗಳ ನಗರಾಭಿವೃದ್ಧಿ ಜವಾಬ್ದಾರಿ ಹೊಂದಿರುವ ಸಚಿವರುಗಳ ಸಮ್ಮೇಳನವನ್ನು  ನಡೆಸಲು ಕೇಂದ್ರ ಇಂಧನ, ವಸತಿ ಹಾಗೂ ನಗರಾಭಿವೃದ್ಧಿ ಸಚಿವ ಮನೋಹರ ಲಾಲ್ ಖಟ್ಟರ್ ಒಪ್ಪಿದ್ದಾರೆ” ಎಂದು ಡಿಸಿಎಂ ಡಿಕೆ ಶಿವಕುಮಾರ್  ಹೇಳಿದ್ದಾರೆ. ಸದಾಶಿವನಗರ ನಿವಾಸದ

ಸಿಂಧನೂರು ಎಪಿಎಂಸಿಯಲ್ಲಿ ಯುವಕರ ಮಾರಾಮಾರಿ

ಸಿಂಧನೂರುಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮೊದಲನೇ ಗೇಟ್ ಆವರಣದಲ್ಲಿ ಯುವಕರು ಕಟ್ಟಿಗೆಯಿಂದ ಒಬ್ಬರಿಗೊಬ್ಬರು ಹೊಡೆದಾಡಿಕೊಂಡು ಗಾಯ ಮಾಡಿಕೊಂಡಿದ್ದಾರೆ. ಯುವಕರು ಯಾವುದೋ ಒಂದು ಆಟದ ಹಣದ ವಿಚಾರಕ್ಕೆ ಹೊಡೆದಾಡಿಕೊಂಡು ದೊಡ್ಡ ಪ್ರಮಾಣದಲ್ಲಿ ಒಬ್ಬರಿಗೊಬ್ಬರು ಬಡಿದಾಡಿಕೊಂಡಿಕೊಂಡಿದ್ದಾರೆ. ಬಸವ ವಿರುಪಾಪುರ ಹಾಗೂ ಶಿವರಾಜ ಪಿ ಅವರವರ

ಚಿಕ್ಕೋಡಿಯಲ್ಲಿ ಅಕ್ರಮ ಸಂಬಂಧ ಪ್ರಶ್ನಿಸಿದ ಪತ್ನಿಗೆ ರಸ್ತೆಯಲ್ಲೇ ಒದ್ದು ಹಲ್ಲೆ

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೆಂಬಲವಾಡ ಗ್ರಾಮದಲ್ಲಿ ಅಕ್ರಮ ಸಂಬಂಧವನ್ನು ಪ್ರಶ್ನಿಸಿದ ಪತ್ನಿಗೆ ಸಾರ್ವಜನಿಕವಾಗಿ ಒದ್ದು ಪತಿ ಹಲ್ಲೆ ಮಾಡುತ್ತಿದ್ದು, ತಡೆಯಲು ಬಂದ ಆಕೆಯ ತಾಯಿ ಮೇಲೂ ದೌರ್ಜನ್ಯ ನಡೆಸುತ್ತಿದ್ದರೂ ಗ್ರಾಮಸ್ಥರು ಮೂಕ ಪ್ರೇಕ್ಷಕರಾಗಿ ನಿಂತಿದ್ದ ಘಟನೆ ನಡೆದಿದೆ. ದೌರ್ಜನ್ಯಕ್ಕೆ ಒಳಗಾದ

ರಕ್ಷಣಾ ಪಡೆಗಳ ಬಲವರ್ಧನೆಗೆ 79,000 ಕೋಟಿ ಮೌಲ್ಯದ ಹಾರ್ಡ್ ವೇರ್ ಖರೀದಿಗೆ ಕೇಂದ್ರ ನಿರ್ಧಾರ

ಭಾರತದ ರಕ್ಷಣಾ ಪಡೆಗಳ ಬಲವರ್ಧನೆಗೆ ಕೇಂದ್ರ ಸರ್ಕಾರ 79,000 ಕೋಟಿ ರೂ. ಮೌಲ್ಯದ ಹಾರ್ಡ್ ವೇರ್ ಖರೀದಿಗೆ ಮುಂದಾಗಿದೆ. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಗುರುವಾರ ನಡೆದ ರಕ್ಷಣಾ ಪಡೆಗಳ ಖರೀದಿ ಕೌನ್ಸಿಲ್ (The Defence Acquisition Council)

4ನೇ ಮಹಡಿಯಿಂದ ಕೆಳಗೆ ಬಿದ್ದು ಯುವಕ ಸಾವು

ಬೆಂಗಳೂರು: ಮನೆಯೊಂದರ ನಾಲ್ಕನೇ ಮಹಡಿಯಿಂದ ಬಿದ್ದು ಯುವಕನೊಬ್ಬ ಮೃತಪಟ್ಟಿರುವ ಘಟನೆ ಕೆಜಿ ಹಳ್ಳಿಯಲ್ಲಿ ಬುಧವಾರ ಸಂಜೆ ನಡೆದಿದೆ. ಕೆಜಿ ಹಳ್ಳಿಯ ಮುಸ್ಲಿಂ ಕಾಲೋನಿಯ ಅಹಮದ್‌ (25) ಮೃತಪಟ್ಟವರು, ಸಂಜೆ 4.30 ರ ಸುಮಾರಿಗೆ ಈತ ಬಿಎಂ ಲೇಔಟ್‌ನ ಮನೆಯೊಂದಕ್ಕೆ ಹೋಗಿದ್ದು, ನಾಲ್ಕನೇ