Saturday, September 26, 2026
Menu

ಕಾರ್ಮಿಕ ವಿವಾದಗಳಲ್ಲಿ ಎಸ್‌ಸಿ ಎಸ್​ಟಿ ಕಾಯ್ದೆ ದುರ್ಬಳಕೆ ಸಲ್ಲದು: ಹೈಕೋರ್ಟ್​

ಕಾರ್ಮಿಕ ಮತ್ತು ಸಿವಿಲ್ ಪ್ರಕರಣಗಳಿಗೆ ಕ್ರಿಮಿನಲ್ ರೂಪ ನೀಡಿ, ಅದರಲ್ಲೂ ವಿಶೇಷವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯನ್ನು ದುರುಪಯೋಗ ಪಡಿಸಿಕೊಳ್ಳುವುದಕ್ಕೆ ಅವಕಾಶವಿಲ್ಲ ಎಂದು ಹೈಕೋರ್ಟ್​ ಹೇಳಿದೆ. ತಮ್ಮ ವಿರುದ್ಧ ದಾಖಲಾಗಿರುವ ಎಫ್​ಐಆರ್ ಮತ್ತು ಅದಕ್ಕೆ ಸಂಬಂಧಿಸಿದ ಕಾನೂನು ಪ್ರಕ್ರಿಯೆ ರದ್ದು ಮಾಡಬೇಕು ಎಂದು ಕೋರಿ ಭದ್ರಾವತಿಯ ‘ಮಾಲ್ನಾಡ್ ಅಲೋಯ್ಸ್ ಕಾಸ್ಟಿಂಗ್ಸ್ ವ್ಯವಸ್ಥಾಪಕ ಮಧುಕರ್ ಜೋಯಿಸ್ ಸೇರಿ ಮತ್ತಿತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ

ನೆಲಮಂಗಲದಲ್ಲಿ ಆಟವಾಡುತ್ತಿದ್ದ ಮಗು ಮಹಡಿಯಿಂದ ಬಿದ್ದು ಸಾವು

ಆಟವಾಡುತ್ತಿದ್ದ ಮಗು ಮೊದಲನೇ ಮಹಡಿಯಿಂದ ಬಿದ್ದು ಮೃತಪಟ್ಟ ಘಟನೆ ಬೆಂಗಳೂರು ಉತ್ತರ ತಾಲೂಕಿನ ತೋಟದಗುಡ್ಡದಹಳ್ಳಿ ಗ್ರಾಮದಲ್ಲಿ ನಡೆದಿದೆ.  ಟಿ.ದಾಸರಹಳ್ಳಿ ನಿವಾಸಿ ನವೀನ್ ಕುಮಾರ್ ಹಾಗೂ ಕಾವ್ಯ ದಂಪತಿಯ ಎರಡು ವರ್ಷದ ಮಗು ದೀಕ್ಷಿತ್ (2) ಮೃತಪಟ್ಟಿದೆ. ಆಟವಾಡುವಾಗ ಮೆಟ್ಟಿಲ ಮೇಲಿಂದ ಮಗು

ಅತ್ಯಾಚಾರ, ಚಿತ್ರಹಿಂಸೆ ನೀಡಿ ಮಹಿಳೆಯ ಆಸ್ತಿ ಕಬಳಿಸಿದ ಸ್ವಯಂಘೋಷಿತ ಗುರು ಅರೆಸ್ಟ್‌

ಅನಾರೋಗ್ಯ ಮತ್ತು ಕೌಟುಂಬಿಕ ಸಮಸ್ಯೆಗಳನ್ನು ಪರಿಹರಿಸುವುದಾಗಿ ನಂಬಿಸಿದ ಸ್ವಯಂಘೋಷಿತ ಗುರುವೊಬ್ಬನನ್ನು  ಮಹಿಳೆಯ ಮೇಲೆ ೧೫ ವರ್ಷ ಲೈಂಗಿಕ ದೌರ್ಜನ್ಯ ಜೊತೆಗೆ ಮೂತ್ರ ಕುಡಿಸಿ ವಿದ್ಯುತ್‌ ಶಾಕ್‌ ನೀಡಿರುವ ಆರೋಪದಡಿ  ಏಳು ಮಂದಿ ಸಹಚರರೊಂದಿಗೆ ಪುಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಪ್ರಮುಖ ಆರೋಪಿಯನ್ನು

ಪತ್ನಿಯ ಕಿರುಕುಳ ಆರೋಪ: ಹುಬ್ಬಳ್ಳಿಯಲ್ಲಿ ಪತಿ ಸುಸೈಡ್‌

ಪತ್ನಿಯಿಂದ ಕಿರುಕುಳವೆಂದು ಆರೋಪಿಸಿ ಡೆತ್ ನೋಟ್ ಬರೆದಿಟ್ಟು ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿಯ ಬೆಂಗೇರಿ ಹರಿಜನ ಕಾಲೋನಿಯಲ್ಲಿ ನಡೆದಿದೆ. ಸಂತೋಷ್ ಅಳ್ಳೂರು (39) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಕೌಟುಂಬಿಕ ಕಲಹದ ಹಿನ್ನೆಲೆ ಸಂತೋಷ್ ಪತ್ನಿ ಪೊಲೀಸ್ ಠಾಣೆಗೆ ಹೋಗಿದ್ದರು, ಆಕೆಯ

48 ದಿನಗಳ ಹಿಂದೆ ಮದುವೆ: ಪತಿಯ ಕಿರುಕುಳಕ್ಕೆ ನೊಂದು ಪತ್ನಿ ಆತ್ಮಹತ್ಯೆ

48 ದಿನಗಳ ಹಿಂದೆ ಮದುವೆಯಾಗಿದ್ದ ಮಹಿಳೆ ಗಂಡ ಮತ್ತು ಅತ್ತೆ-ಮಾವನ ಕಿರುಕುಳಕ್ಕೆ ನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಥಾಣೆಯ ಅಂಬರನಾಥ್‌ನಲ್ಲಿ ನಡೆದಿದೆ. ವಿಶಾಖಾ ತಿಲ್ಕರ್ (26) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಏಪ್ರಿಲ್ 30ರಂದು ವೈದ್ಯ ನಿತಿನ್ ತಿಲ್ಕರ್ ಎಂಬಾತನನ್ನು

ವ್ಯಕ್ತಿಯ ಕೊಲೆಗೈದು ಬೈಕ್‌ನಲ್ಲಿ ಶವ ಸಾಗಿಸುವಾಗ ಸಾರ್ವಜನಿಕರಿಗೆ ಸಿಕ್ಕಿ ಬಿದ್ದ ಸ್ನೇಹಿತ

ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಸ್ನೇಹಿತರು ಚಾಕುವಿನಿಂದ ಇರಿದು ವ್ಯಕ್ತಿಯ ಕೊಲೆ ಮಾಡಿ ಶವವನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಸಾಗಿಸುವ ವೇಳೆ ಸಾರ್ವಜನಿಕರಿಗೆ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ. ಭೀಮನಹಳ್ಳಿ ಗ್ರಾಮದ ಮಹೇಶ್ (34) ಕೊಲೆಯಾದ ವ್ಯಕ್ತಿ. ಸ್ನೇಹಿತನ ಪತ್ನಿಗೆ ಮೆಸೇಜ್ ಮಾಡುತ್ತಿದ್ದ ಆರೋಪದ ಮೇಲೆ

ಅಟ್ರಾಸಿಟಿ ಕೇಸ್‌ನಲ್ಲಿ ಲಂಚಕ್ಕೆ ಬೇಡಿಕೆಯಿಟ್ಟ ಅಧಿಕಾರಿಗಳ ವಿರುದ್ಧ ಎಫ್‌ಐಆರ್‌

ನಟ ದ್ವಾರಕೀಶ್ ಸೊಸೆ ದಾಖಲಿಸಿದ್ದ ಅಟ್ರಾಸಿಟಿ ಪ್ರಕರಣದಲ್ಲಿ ಆರೋಪಿಗಳ ಹೆಸರು ಕೈಬಿಡಲು ತಲಾ 50 ಸಾವಿರ ರೂ. ಲಂಚಕ್ಕೆ ಬೇಡಿಕೆಯಿಟ್ಟ ಆರೋಪದಡಿ ಇಬ್ಬರು ಅಧಿಕಾರಿಗಳ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಪ್ರಕರಣದಿಂದ ಕೈಬಿಡಲು ಪ್ರತಿ ಆರೋಪಿಯಿಂದ 50 ಸಾವಿರ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದ

ಕಾಂಪೌಂಡ್‌ ಗೋಡ ಕುಸಿತ: ಆಟವಾಡುತ್ತಿದ್ದ ಮಗು ಸಾವು

ಬೆಂಗಳೂರಿನ ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಕ್ಕಳು ಆಟವಾಡುತ್ತಿದ್ದಾಗ ಮನೆಯೊಂದರ ಕಾಂಪೌಂಡ್ ಗೋಡೆ ಮತ್ತು ಗೇಟ್ ಬಿದ್ದು, ಐದು ವರ್ಷದ ಮಗುವೊಂದು ಮೃತಪಟ್ಟಿದೆ. ಮತ್ತೊಂದು ಮಗು ಗಂಭೀರವಾಗಿ ಗಾಯಗೊಂಡಿದೆ. ಯಾದಗಿಯ ದಾವಲ್ ಸಾಬ್ ಅವರ ಪುತ್ರ ಅಫೀನ್ (5) ಮೃತಪಟ್ಟ ಮಗು

ತೋಟಕ್ಕೆ ವಾಕಿಂಗ್‌ ಹೋಗಿದ್ದ ವೃದ್ಧೆಯ ಕೊಲೆ

ತೋಟಕ್ಕೆ ವಾಕಿಂಗ್‌ ಹೋಗಿದ್ದ ವೃದ್ಧೆಯನ್ನು ಕೊಲೆ ಮಾಡಿರುವ ಘಟನೆ ಕೊರಟಗೆರೆ ಸಿಎನ್ ದುರ್ಗದ ದಾಸಲುಕುಂಟೆಯಲ್ಲಿ ನಡೆದಿದೆ. ರತ್ನಮ್ಮ (74) ಕೊಲೆಯಾದ ವೃದ್ಧೆ. ರತ್ನಮ್ಮ ಸಂಜೆ ವಾಕಿಂಗ್‌ಗೆಂದು ತೋಟಕ್ಕೆ ಹೋಗಿದ್ದವರು ರಾತ್ರಿಯಾದರೂ ಮನೆಗೆ ವಾಪಸ್ ಆಗಿರಲಿಲ್ಲ. ಸೊಸೆ ಭಾಗ್ಯಮ್ಮ ಹಾಗೂ ಊರಿನ ಜನರು

ಇನ್‌ಸ್ಟಾದಲ್ಲಿ ಪರಿಚಯ, ಲಿವ್‌ಇನ್‌: ಯುವತಿಯ ಕತ್ತು ಹಿಚುಕಿ ಕೊಂದ ಯುವಕ

ಬೆಂಗಳೂರಿನ ಮಲ್ಲೇಶ್ವರದ ಮನೆಯೊಂದರಲ್ಲಿ ಯುವಕ ಲಿವ್-ಇನ್ ಗೆಳತಿಯನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ನಡೆದಿದ್ದು, ತಡವಾಗಿ ಬಹಿರಂಗಗೊಂಡಿದೆ.  ಸಕಲೇಶಪುರದ ೨೦ ವರ್ಷದ ಯುವತಿ ಅನುಷಾ ಕೊಲೆಯಾದವಳು, ಅದೇ ಊರಿನ ಶರತ್ ಕೊಲೆ ಆರೋಪಿ. ಆತ ವೃತ್ತಿಯಲ್ಲಿ ವಾಟರ್ ಟ್ಯಾಂಕರ್ ಚಾಲಕ.