ಅಂಕಣ
ಯುರೋಪ್ ಒಕ್ಕೂಟ ಜೊತೆ ವ್ಯಾಪಾರ ಮಾತುಕತೆ: ಭಾರತದ ಜಾಣ ನಡೆ
ಜಾಗತಿಕ ಮಾರುಕಟ್ಟೆಯಲ್ಲಿಂದು ಭಾರತವನ್ನು ಪಕ್ಕಕ್ಕೆ ಸರಿಸಿ ಯಾವ ದೇಶವೂ ಆಕ್ರಮಣಕಾರಿ ಏಕಮುಖವಾದ ಸುಂಕನೀತಿಯನ್ನು ಹೊಂದುವುದು ಕಷ್ಟ. ಒಟ್ಟಿನಲ್ಲಿ ಭಾರತವನ್ನು ಒಂದಲ್ಲ ಒಂದು ರೀತಿಯಲ್ಲಿ ಆರ್ಥಿಕವಾಗಿ ಆತಂಕದಲ್ಲಿಡಬೇಕೆಂಬ ಅಮೆರಿಕದ ದೃಷ್ಟಿಕೋನವೇ ಬಾಲಿಶ. ಅಮೆರಿಕದ ಸುಂಕ ಬೆದರಿಕೆಗೆ ಭಾರತದ ತಿರುಗೇಟು. ಯೂರೋಪಿಯನ್ ಒಕ್ಕೂಟದಿಂದ ಭಾರತಕ್ಕೆ ರವಾನೆಯಾಗುವ ಕಾರುಗಳಿಗೆ ಶೇ. ೭೦ ಸುಂಕ ಕಡಿತ. ದೊಡ್ಡಣ್ಣನ ಸುಂಕದ ಕಠಿಣ ತೀರ್ಮಾನಗಳಿಗೆ ಭಾರತದ ಇದೊಂದು ಜಾಣ ನಡೆ. ಅಷ್ಟೇ ಅಲ್ಲ.ಇದು ಅಮೆರಿಕಕ್ಕೆ ಚಾಟಿ ! ಆಪರೇಷನ್
ಸಿವಿಲ್ ಸೇವೆ ಹುದ್ದೆಗಳ ಭರ್ತಿ: ವಯೋಮಿತಿ ಸಡಿಲಿಕೆಯೊಂದೇ ಸಾಕೇ?
ಲಂಚಗುಳಿತನ, ಸ್ವಜನ ಪಕ್ಷಪಾತ ಮತ್ತು ಅಕ್ರಮ, ಅವ್ಯವಹಾರಗಳೇ ಇಂದು ಸರ್ಕಾರಿ ಹುದ್ದೆಗಳ ನೇಮಕಾತಿ ಸುತ್ತಲೂ ಹರಡಿಕೊಂಡಿರುವ ಅನಿಷ್ಟ. ಯುವಜನತೆಯ ಪಾಲಿಗೆ ಇದು ಶಾಪ ಕೂಡಾ. ಈ ಸಾಮಾಜಿಕ ಪೀಡೆಯನ್ನು ಸರ್ಕಾರ ನಿವಾರಿಸಲು ಗಟ್ಟಿ ಪ್ರಯತ್ನ ಮಾಡದಿದ್ದಲ್ಲಿ ವಯೋಮಿತಿ ಸಡಿಲಿಕೆಯ ಸರ್ಕಾರದ ಆಶಯ
ರಾಜ್ಯಪಾಲರ ಮುಂದಿಟ್ಟು ಆಟ: ಒಕ್ಕೂಟ ವ್ಯವಸ್ಥೆಯ ಕೆಟ್ಟ ಪರಂಪರೆ
ಕೇಂದ್ರ ಮತ್ತು ರಾಜ್ಯ ನಡುವೆ ಕಾನೂನಿನ ಕೊಂಡಿ ಮತ್ತು ರಾಜ್ಯಾಡಳಿತಕ್ಕೆ ಹೊಣೆಗಾರರಾದ ರಾಜ್ಯಪಾಲರು ಮತ್ತು ಲೋಕಭವನಕ್ಕೆ ರಾಜಕೀಯ ಲೇಪ ಹಚ್ಚಿ ಇವರನ್ನು ತೊಗಲುಗೊಂಬೆಯಾಗಿ ಪರಿಗಣಿಸಿ ಆಟವಾಡುವುದು ಕೇಂದ್ರದ ಕೆಟ್ಟ ರಾಜಕೀಯ ಪರಂಪರೆ ಎನ್ನದೆ ವಿಧಿಯಿಲ್ಲ. ರಾಜ್ಯಪಾಲರಾದವರ ಕರ್ತವ್ಯಗಳು ಮತ್ತು ವಿಧಿ ನಿರ್ವಹಣೆಗಳ
ಮೋದಿಯೊಂದಿಗೆ ಟ್ರಂಪ್ ಮೈಂಡ್ ಗೇಮ್!
ಮೈ ಬೆಸ್ಟ್ ಫ್ರೆಂಡ್ ಎಂದು ವಿದೇಶಿ ಮಾಧ್ಯಮಗಳ ಮುಂದೆ ಪ್ರತಿ ಸಾರಿಯೂ ಭಾರತದ ಪ್ರಧಾನಿಯನ್ನು ಹಾಡಿ ಹೊಗಳಿ ಅಟ್ಟಕ್ಕೇರಿಸುವ ಡೊನಾಲ್ಡ್ ಟ್ರಂಪ್, ಒಳಗೊಳಗೆ ಭಾರತಕ್ಕೆ ಚೂರಿ ಹಾಕತ್ತಿರುವುದು ಕಟುಸತ್ಯ! ಜಾಗತಿಕ ಮಟ್ಟದಲ್ಲಿ ಭಾರತದ ನೈಜ ಮತ್ತು ಸದೃಢ ಬೆಳವಣಿಗೆಗೆ ಇಂದು ದೊಡ್ಡ
ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯಗಳಿಗೆ ಅಕ್ಕ ಪಡೆ ತಡೆಯಾಗಲಿ
*ಡಾ.ಕರವೀರಪ್ರಭು ಕ್ಯಾಲಕೊಂಡ ” ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾ:” ಎಂದು ಅಮೃತವಾಣಿಯಲ್ಲಿ ಮಹಿಳೆಯನ್ನು ವರ್ಣಿಸಿದ್ದೇವೆ. ಕವಿ ಪುಂಗವರಿಂದ ಶ್ಲೋಕಗಳನ್ನು ರಚಿಸಿ ಉಚ್ಛರಿಸಿದ್ದೇವೆ. ಕಲಾವಿದರ ಕುಂಚದ ಕೈ ಚಳಕದಲ್ಲಿ ರಂಗುರಂಗಿನ ರಂಜಿಸುವ ಬಣ್ಣಗಳಲ್ಲಿ ಅವರನ್ನು ಸೆರೆಹಿಡಿದು, ಕಟ್ಟು ಹಾಕಿಸಿ, ಗೋಡೆಗೆ
ನಾನಾ ಸಮಸ್ಯೆಗಳಿಂದ ಕಂಗೆಟ್ಟ ಪಾಕ್‌ಗೆ ಯುದ್ಧದಿಂದ ಮಜಾ ಸಿಗುತ್ತಾ?
ಹಣದುಬ್ಬರದಂತಹ ಭೀಕರ ಸಮಸ್ಯೆಗಳಿಂದ ಪಾಕಿಸ್ತಾನವಿಂದು ಜಾಗತಿಕ ಮಟ್ಟದಲ್ಲಿ ತಲೆ ತಗ್ಗಿಸುವಂತಾಗಿದೆ. ಮೊದಲು ಇವುಗಳಿಗೆ ತುಸುಮಟ್ಟಿಗಾದದರೂ ಪಾಕ್ ಪರಿಹಾರ ಕಂಡುಕೊಳ್ಳಲಿ. ಯುದ್ಧದಿಂದ ಮಜಾ ಬರುತ್ತೆ ಎಂಬ ಹಾಸ್ಯಾಸ್ಪದ ಹೇಳಿಕೆಗಳಿಂದ ಪಾಕ್ ಮಿಲಿಟರಿ ಅಧಿಕಾರಿಗಳು ಇನ್ನಾದರೂ ದೂರ ಸರಿಯಲಿ. ಮೊನ್ನೆಯಷ್ಟೆ ಭಾರತದ ಮಿಲಿಟರಿ ಪಡೆಯಿಂದ
ಶಾಸನ ಕರ್ತರ ಆಯ್ಕೆ ಮತದಾರರ ವಿವೇಕದ ಪ್ರತಿಬಿಂಬ
ಎಲ್ಲಿಯವರೆಗೂ ಮತದಾರ ತಾನು ನೀಡುವ ಮತದ ಮೌಲ್ಯದ ಸದಾಶಯಗಳ ಬಗ್ಗೆ ಆಲೋಚಿಸುವುದಿಲ್ಲವೋ ಅಲ್ಲಿಯವರೆಗೂ ಕೆಟ್ಟ ಮತ್ತು ದುಷ್ಟ ಪರಂಪರೆಯುಳ್ಳ ವ್ಯಕ್ತಿಗಳು ಶಾಸನಸಭೆಯನ್ನು ಪ್ರವೇಶಿಸುವುದನ್ನು ತಪ್ಪಿಸಲೂ ಸಾಧ್ಯವಾಗುವುದಿಲ್ಲ! ಶಾಸನಕರ್ತರೇ ದುಶ್ಯಾಸನರಾದರೆ? ಕಾನೂನು ರಚನೆಕಾರರೇ ಕಾನೂನನ್ನು ತಮ್ಮ ಕೈಗೆ ತೆಗೆದುಕೊಂಡರೇ? ಇದು ಬೇಲಿಯೇ ಎದ್ದು
ರಾಜ್ಯದಲ್ಲಿ ಸರ್ಕಾರಿ ಹುದ್ದೆಗಳ ಭರ್ತಿ: ಮೆಕಾನಿಸಂ ಎಲ್ಲಿ ?
ತಮಿಳುನಾಡು, ಅಂಧ್ರ ಪ್ರದೇಶದಲ್ಲಿ ಸರ್ಕಾರಿ ನೌಕರಿ ನೇಮಕಾತಿ ವಿಷಯದಲ್ಲಿ ಹಲವು ಹತ್ತು ಸುಧಾರಣೆಗಳು ಜಾರಿಯಲ್ಲಿವೆ. ಈ ರಾಜ್ಯಗಳ ನೇಮಕ ಪ್ರಕ್ರಿಯೆ ಸುಗಮ ಮತ್ತು ಸರಳವಾಗಿದ್ದು ಜನಮೆಚ್ಚುಗೆಯನ್ನೂ ಪಡೆದಿವೆ. ಆದರೆ ಕರ್ನಾಟಕದಲ್ಲಿ ಪ್ರತಿಯೊಂದು ನೇಮಕಾತಿಯೂ ವಿವಾದಕ್ಕೆ ಸಿಲುಕಿ ಕೋರ್ಟ್ ಮತ್ತು ಟ್ರಿಬೂನಲ್‌ನಲ್ಲಿ ವರ್ಷಾನುಗಟ್ಟಳೆ
ಕೋವಿಡ್ ಭ್ರಷ್ಟರ ಹೆಸರನ್ನು ಸರ್ಕಾರ ಬಹಿರಂಗಪಡಿಸಲಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲಿ
ಕೋವಿಡ್ ಸಮಯದಲ್ಲಿ ಭ್ರಷ್ಟ ಅಧಿಕಾರಿಗಳು ಮತ್ತು ಅಂದಿನ ಮಂತ್ರಿಗಳ ಕೈಚಳಕದಿಂದ ಕೈಲಾಗದಂತಹ ಸಾವಿರಾರು ಮಂದಿ ಆಮ್ಲಜನಕದ ಸಿಲಿಂಡರ್ ಮತ್ತು ಆಸ್ಪತ್ರೆಯಲ್ಲಿ ಬೆಡ್ ಸಿಗದೆ ಪ್ರಾಣ ತ್ಯಜಿಸಿದರು! ಇಂತಹವರನ್ನು ಶಿಕ್ಷೆಗೆ ಗುರಿಪಡಿಸಲು ಸಿದ್ದರಾಮಯ್ಯ ಸರ್ಕಾರ ಮೀನ- ಮೇಷ ಎಣಿಸುವ ಅಗತ್ಯವಿಲ್ಲ . ಸರ್ಕಾರಕ್ಕೆ
ಜಗ-ಜೀವನ: ಹೆಸರು ಬದಲಾವಣೆಯ ಹೊಳಪು ಮತ್ತು ವಾಸ್ತವದ ಕರಿನೆರಳು
ಸರಕಾರಗಳು, ಅವು ಯಾವ ಪಕ್ಷದ್ದೇ ಇರಲಿ, ಯೋಜನೆಗಳನ್ನು ನವರಂಗಿ ಬಣ್ಣಗಳಲ್ಲಿ ಲೇಪಿಸಿ ಜನರ ಮುಂದೆ ತರುವುದು ರಾಜಕೀಯದಷ್ಟೇ ಹಳತಾದ ಸಂಗತಿಯಾಗಿದ್ದು, ಹಲವು ಮರು ನಾಮಾಂಕಿತ ಯೋಜನೆಗಳು ಬಣ್ಣದ ಪೇಪರಲ್ಲಿ ಸುತ್ತಿರುವ ಹಳೆಯ ಮಿಠಾಯಿಯಂತೆಯೇ ಆಗಿದೆ. ಭಾರತದ ಆಡಳಿತ ವ್ಯವಸ್ಥೆಯಲ್ಲಿ ಕಳೆದ ಒಂದು




