Tuesday, September 29, 2026
Menu

ಪತ್ನಿಯಿಂದ ಹಲ್ಲೆ: ಪತಿ ಆತ್ಮಹತ್ಯೆ

ಬೆಂಗಳೂರಿನ ನಂದಿನಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಲಗ್ಗೆರೆಯಲ್ಲಿ ಪತ್ನಿಯಿಂದ ಹಲ್ಲೆಗೆ ಒಳಗಾದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಹಾಸನ ಮೂಲದ ನವೀನ್‌ ಆತ್ಮಹತ್ಯೆ ಮಾಡಿಕೊಂಡವರು.

ನವೀನ್‌ ಪತ್ನಿ ಜೊತೆ ಲಗ್ಗರೆಯ ಬಾಡಿಗೆ ಮನೆಯಲ್ಲಿ ವಾಸವಿದ್ದರು. ನವೀನ್‌ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ತಾಯಿಗೆ ಕರೆ ಮಾಡಿ, ಪತ್ನಿ ತನ್ನ ಮೇಲೆ ಹಲ್ಲೆ ನಡೆಸಿರುವುದಾಗಿ ಹೇಳಿಕೊಂಡಿದ್ದರು ಎನ್ನಲಾಗಿದೆ.

ನವೀನ್ ಅವರ ದೇಹದ ಮೇಲಿದ್ದ ಗಾಯದ ಗುರುತುಗಳನ್ನು ಗಮನಿಸಿದ ಕುಟುಂಬಸ್ಥರು, ಆತನನ್ನು ಕವಿತಾ ಕೊಲೆ ಮಾಡಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನವೀನ್ 15 ವರ್ಷಗಳ ಹಿಂದೆ ಕವಿತಾ ಅವರನ್ನು ಮದುವೆಯಾಗಿದ್ದು, ಕೆಲಸಕ್ಕಾಗಿ ಎಂಟು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದರು. ನವೀನ್ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಆಗಾಗ ಕುಡಿದು ಬಂದು ಮನೆಗೆ ಬಂದು ಜಗಳವಾಡುತ್ತಿದ್ದರು ಮತ್ತು ಪತ್ನಿಗೆ ಅಕ್ರಮ ಸಂಬಂಧವಿದೆ ಎಂದು ಆರೋಪಿಸುತ್ತಿದ್ದರು ಎಂದು ಕವಿತಾ ಪೊಲೀಸರಿಗೆ ತಿಳಿಸಿದ್ದಾರೆ.

ಮಗು ಹುಟ್ಟಿದ ನಂತ ಇದು ಮತ್ತಷ್ಟು ಹೆಚ್ಚಿತ್ತು. ಮೊನ್ನೆಯೂ ನವೀನ್ ಮದ್ಯಪಾನ ಮಾಡಿ ಮನೆಗೆ ಬಂದು ಕವಿತಾ ಅವರೊಂದಿಗೆ ಜಗಳವಾಡಿದರು. ಕವಿತಾ ಅವರ ಮೇಲೆ ಹಲ್ಲೆಗೆ ಮುಂದಾದಾಗ ಕವಿತಾ ಪ್ರತಿ-ಹಲ್ಲೆ ನಡೆಸಿದ್ದಾರೆ. ಇದರಿಂದ ನವೀನ್ ತಲೆಗೆ ಗಾಯವಾಗಿದೆ. ಕವಿತಾ ಮನೆಗೆ ಹೊರಗಿನಿಂದ ಬೀಗ ಹಾಕಿ ಹೊರಟುಹೋಗಿದ್ದಾರೆ. ನವೀನ್ ತಾಯಿಗೆ ಕರೆ ಮಾಡಿ, ಪತ್ನಿ ತನ್ನ ಮೇಲೆ ಹಲ್ಲೆ ನಡೆಸಿದ್ದಾಗಿ ತಿಳಿಸಿದ್ದಾರೆ ಎನ್ನಲಾಗಿದೆ. ರಾತ್ರಿ ಮನೆಯಲ್ಲಿನ ಸೀಲಿಂಗ್ ಹುಕ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕವಿತಾ ಮನೆಗೆ ಮರಳಿದಾಗ ನವೀನ್ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಸ್ಕೂಲ್‌ ಬಸ್‌ ಹರಿದು ಪುಟಾಣಿ ಸಾವು

ಶಾಲೆಯಿಂದ ಬರುತ್ತಿದ್ದ ಅಣ್ಣನ ಕರೆದುಕೊಂಡು ಬರಲು ತಾಯಿ ಜೊತೆ ಹೋದ ಒಂದುವರೆ ವರ್ಷದ ಹೆಣ್ಣುಮಗುವಿನ ಮೇಲೆ ಶಾಲಾ ಬಸ್‌ ಹರಿದು ಮೃತಪಟ್ಟ ಘಟನೆ ಹುಣಸೂರು ತಾಲೂಕಿನ ನಂಜಾಪುರ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಬಸವರಾಜು ಹಾಗೂ ಕಾಂಚನ ದಂಪತಿಯ ಮಗು ಲತೀಕ್ಷಾ ರಸ್ತೆ ಬದಿ ನಿಂತಿದ್ದಾಗ ಆಕೆಯ ಮೇಲೆಯೇ ಬಸ್ ಹರಿದಿದೆ. ಬಸವರಾಜು ಮಗ ತಿಲಕ್ ಅದೇ ಶಾಲಾ ಬಸ್​ನಲ್ಲಿ ಬಂದಿದ್ದ. ಆತನನ್ನು ಕೆಳಗೆ ಇಳಿಸಿಕೊಂಡು ರಸ್ತೆ ಬದಿ ನಿಂತಿದ್ದಾಗ ಈ ದುರಂತ ನಡೆದಿದೆ. ಚಾಲಕನ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದೆ ಎಂದು ಕುಟುಂಬಸ್ಥರು ಆರೋಪ ಮಾಡ್ತಿದ್ದಾರೆ. ಬಸ್​ ಚಾಲಕ ಸಿದ್ದರಾಜು ಎಂಬಾತನನ್ನ ಪೊಲೀಸರು ಬಂಧಿಸಿದ್ದು, ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Posts

Leave a Reply

Your email address will not be published. Required fields are marked *