Friday, September 04, 2026
Menu

ಬರ ಬಂದು ಹೋದರೂ ಬಾರದ ಕೇಂದ್ರದ ನೆರವು

ತಮಿಳರು ಹೊರತುಪಡಿಸಿದರೆ ಉಳಿದವರ ಬಗ್ಗೆ ಪರಿಜ್ಞಾನವೇ ಇಲ್ಲ. ದಕ್ಷಿಣದ ಎಲ್ಲರನ್ನೂ ಮದ್ರಾಸಿ ಎಂದೇ ಕರೆಯುತ್ತಾರೆ. ಇತ್ತೀಚೆಗೆ ಐಟಿಬಿಟಿ ಬಂದ ಮೇಲೆ ಬೆಂಗಳೂರು ಇದೆ ಎಂಬುದು ತಿಳಿದಿದೆ. ಮೊದಲಿನಿಂದಲೂ ಬರಗಾಲ ಹೋಗಲಾಡಿಸಲು ಕೇಂದ್ರ ಸರ್ಕಾರ ಯಾವುದೇ ರೀತಿಯ ದೀರ್ಘಕಾಲಿ ಯೋಜನೆಗಳನ್ನು ರೂಪಿಸಿಲ್ಲ. ರಾಜಸ್ತಾನದ ನಂತರ ಅತಿ ಹೆಚ್ಚು ಒಣ ಭೂಮಿ ಇರುವುದು ನಮ್ಮಲ್ಲಿ ಮಾತ್ರ. ಕೇಂದ್ರ ಸರ್ಕಾರ ರಾಜಸ್ಥಾನಕ್ಕೆ   ಕೊಡುವ ಮಹತ್ವವನ್ನು ನಮಗೆ ಕೊಡುವುದಿಲ್ಲ.

ತೆರಿಗೆ ಸಂಗ್ರಹಿಸಿಕೊಡುವುದರಲ್ಲಿ ನಾವು ಮುಂದೆ ಇದ್ದರೂ ಕೇಂದ್ರದ ನೆರವು ಮಾತ್ರ ಬರುತ್ತಿಲ್ಲ. ಇದು ಎಲ್ಲ ಕಾಲಕ್ಕೂ ಇರುವ ಸಮಸ್ಯೆ. ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ಇದೇ ಪರಿಸ್ಥಿತಿ ಮುಂದುವರಿದಿತ್ತು. ಈಗಲೂ ಮುಂದುವರಿದಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಬರ ಪರಿಹಾರವನ್ನು ಕೇಂದ್ರ ಕೊಡದೇ ಇದ್ದಾಗ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಬೇಕಾಯಿತು. ೨೦೨೩ ರಲ್ಲಿ ಬರಗಾಲದಿಂದ ಆದ ನಷ್ಟ ೩೯ ಸಾವಿರ ಕೋಟಿ ರೂ. ಪರಿಹಾರ ಕೇಳಿದ್ದು ೧೮,೧೭೧ ಕೋಟಿ ರೂ. ಆದರೆ ಕೇಂದ್ರ ಕೊಟ್ಟಿದ್ದು ೩೮೧೯ ಕೋಟಿ ರೂ. ಮಾತ್ರ. ಇದು ಕೇಂದ್ರ ಕರ್ನಾಟಕದ ಜನರ ಬಗ್ಗೆ ತಳೆದಿರುವ ಉದಾಸೀನ ಭಾವನೆಗೆ ಹಿಡಿದ ಕನ್ನಡಿ. ಇದನ್ನು ಸರಿಪಡಿಸಲು ನಮ್ಮ ರಾಜ್ಯ ಪ್ರತಿನಿಧಿಸುವ ಸಂಸದರು ಮತ್ತು ಕೇಂದ್ರ ಸಚಿವರು ಕಿಂಚಿತ್ತೂ ಆಸಕ್ತಿ ತೋರಿಸುತ್ತಿಲ್ಲ. ಇದಕ್ಕಿಂತ ದೊಡ್ಡ ಕೆಲಸ ನಮ್ಮ ಜನಪ್ರತಿನಿಧಿಗಳಿಗೆ ಏನು ಇದೆಯೋ ತಿಳಿಯದು.

ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಯ ಜನ ಸರ್ಕಾರವನ್ನು ನಂಬಿಕೊಂಡು ಬದುಕುತ್ತಿಲ್ಲ. ಬರಗಾಲ ಬಂತು ಎಂದರೆ ಗುಳೇ ಹೋಗುವುದು ಅವರ ಕಾಯಕವಾಗಿ ಹೋಗಿದೆ. ಈ ರೀತಿ ಕಷ್ಟ ಕಾರ್ಪಣ್ಯಗಳಲ್ಲಿರುವ ಜನ ದೇವರನ್ನು ನಂಬದೆ ಜನಪ್ರತಿನಿಧಿಗಳನ್ನು ನಂಬಿಕೊಂಡು ಬದುಕು ನಡೆಸಲು ಸಾಧ್ಯವೆ? ಜನ ಬದಲಾದರೇನು ಆಡಳಿತ ಬದಲಾಗಿಲ್ಲ. ಈಗಲೂ ಜನ ಅನ್ನಕ್ಕಾಗಿ ಬೇರೆ ರಾಜ್ಯಗಳಿಗೆ ಹೋಗಬೇಕು. ಬಹುತೇಕ ಹೆಂಗಸರು ಕೂಲಿ ಕೆಲಸ ಮಾಡಬೇಕು. ಇಲ್ಲವೆ ದೇಹ ಮಾರಿಕೊಳ್ಳಬೇಕು. ಇದು ಸರ್ಕಾರದ ಕಣ್ಣಿಗೆ ಕಾಣಿಸುವುದಿಲ್ಲ. ಗೋವಾ ಮತ್ತು ಮುಂಬೈ ಸ್ಲಂಗಳಿಗೆ ಹೋಗಿ ನೋಡಿದರೆ ಕನ್ನಡಿಗರ ದುಸ್ಥಿತಿ ತಿಳಿಯುತ್ತದೆ.

ಉತ್ತರ ಕರ್ನಾಟಕದ ಜನಪ್ರತಿನಿಧಿಗಳಿಗೆ ಬೆಂಗಳೂರು- ಹೈದರಾಬಾದ್ ನಗರಲ್ಲಿ ಐಷಾರಾಮಿ ಬಂಗಲೆ ನಿರ್ಮಿಸುವುದರತ್ತ ಗಮನವೇ ಹೊರತು ಬಡವರ ಜೀವನ ದುರ್ಬರ ಆಗಿರುವುದಲ್ಲ. ನಮ್ಮ ಬಹುತೇಕ ಸಚಿವರು ಉತ್ತರ ಕರ್ನಾಟಕ ಕುಗ್ರಾಮಗಳನ್ನು ಕಣ್ಣಾರೆ ನೋಡೇ ಇಲ್ಲ. ಅವರಿಗೆ ತಮ್ಮ ಜಿಲ್ಲೆಯ ಸಚಿವರನ್ನು ಹೊರತುಪಡಿಸಿದರೆ ಬೇರೆ ಯಾವ ಸಚಿವರ ಮುಖ ಪರಿಚಯವೂ ಇರುವುದಿಲ್ಲ. ಆ ಭಾಗದಲ್ಲಿ ಡಿಸಿ ಮತ್ತು ಎಸ್‌ಪಿಗಳೇ ದೇವರು. ಅವರಲ್ಲಿ ಕರುಣೆ ಇದ್ದರೆ ಬಡವರು ಬದುಕುತ್ತಾರೆ. ಇಲ್ಲವೆ ಹೇಳಹೆಸರಿಲ್ಲದಂತೆ ಹೋಗಿ ಬಿಡುತ್ತಾರೆ. ಇವರ ಕಷ್ಟಕ್ಕೆ ಮರುಗುವವರು ಯಾರೂ ಇಲ್ಲ. ಇನ್ನು ದೂರದ ದೆಹಲಿಯಲ್ಲಿರುವವರು ಕಣ್ಣೀರು ಸುರಿಸಲು ಸಾಧ್ಯವೇ?

Related Posts

Leave a Reply

Your email address will not be published. Required fields are marked *