Thursday, September 03, 2026
Menu

‘ಆಫ್ ಕ್ಯಾಂಪಸ್‌’ ಅಂತರ್‌ಕಾಲೇಜು ಸ್ಪರ್ಧಾ ಕಣವಾಗಿ ಬದಲಾಗಲಿರುವ ಬೆಂಗಳೂರಿನ ವಂಡರ್‌ಲಾ

ಬೆಂಗಳೂರು ವಂಡರ್‌ಲಾ ನಗರದಾದ್ಯಂತದ ಕಾಲೇಜು ವಿದ್ಯಾರ್ಥಿಗಳಿಗಾಗಿ ‘ವಂಡರ್‌ಲಾ ಆಫ್ ಕ್ಯಾಂಪಸ್‌’ ಎಂಬ ರೋಚಕ ಅಂತರ್‌ಕಾಲೇಜು ಅಭಿಯಾನಕ್ಕೆ ಬಾಗಿಲುಗಳನ್ನು ತೆರೆಯುತ್ತಿದೆ. ಬೆಂಗಳೂರಿನ ಯುವ ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿರುವ ಈ ಅಭಿಯಾನವು ಇಡೀ ಋತುವಿನಾದ್ಯಂತ ನಡೆಯುವ ಸ್ಪರ್ಧಾತ್ಮಕ ವೇದಿಕೆಯಾಗಿರಲಿದೆ.

2026ರ ಆಗಸ್ಟ್‌ 5ರಿಂದ ಸೆಪ್ಟೆಂಬರ್‌ 11ರವರೆಗೆ ನಡೆಯಲಿರುವ ಈ ಅಭಿಯಾನದಲ್ಲಿ ನಗರದಾದ್ಯಂತದ ಕಾಲೇಜುಗಳು ‘ವಂಡರ್‌ಲಾ ಆಫ್-ಕ್ಯಾಂಪಸ್‌ ಲೀಗ್‌’ನಲ್ಲಿ  ಮುಖಾಮುಖಿಯಾಗಲಿವೆ. ಅಮ್ಯೂಸ್‌ಮೆಂಟ್ ಪಾರ್ಕ್‌ನ ರೋಚಕ ರೈಡ್‌ಗಳ ಉತ್ಸಾಹವನ್ನು ಕ್ಯಾಂಪಸ್‌ ನಡುವಿನ ಪೈಪೋಟಿಯ ಮನೋಭಾವದೊಂದಿಗೆ ಬೆಸೆಯುವ ಈ ಲೀಗ್‌ನಲ್ಲಿ ಪ್ರತಿದಿನ ಅಂಕಗಳಿಗಾಗಿ ರೋಚಕ ಸ್ಪರ್ಧೆ ನಡೆಯಲಿದೆ.

ವಂಡರ್‌ಲಾ ಆಫ್ ಕ್ಯಾಂಪಸ್‌ ಲೀಗ್‌ (WOCL) ಐದು ವಾರ ನಡೆಯಲಿದ್ದು, ವಂಡರ್‌ಲಾದ ವಿಶಿಷ್ಟ ರೈಡ್‌ಗಳು ಮತ್ತು ಆಕರ್ಷಣೆಗಳನ್ನು ಆಧರಿಸಿದ ವೈಯಕ್ತಿಕ ಹಾಗೂ ತಂಡದ ಸವಾಲುಗಳ ಮೂಲಕ ಬೆಂಗಳೂರಿನ ವಿವಿಧ ಕಾಲೇಜುಗಳು  ಸ್ಪರ್ಧಿಸಲಿವೆ. ಸ್ಪರ್ಧೆಯ ಉತ್ಸಾಹ ಮತ್ತು ಒಂದು ದಿನದ ಮೋಜಿನ ಅನುಭವವನ್ನು ಒಟ್ಟುಗೂಡಿಸುವ ಈ ಅಭಿಯಾನವು ಬೆಂಗಳೂರಿನ ಯುವಜನತೆಯನ್ನು ಒಂದೇ ವೇದಿಕೆಯಲ್ಲಿ ಸೇರಿಸಲಿದೆ. ಪ್ರತಿ ಭೇಟಿ, ಪ್ರತಿ ಸವಾಲು ಮತ್ತು ಪ್ರತಿ ಅಂಕವೂ ಬೆಂಗಳೂರಿನ ಅಂತಿಮ ಕಾಲೇಜು ಚಾಂಪಿಯನ್‌ ಪಟ್ಟವನ್ನು ಅಲಂಕರಿಸುವ ಮಹತ್ವದ ಗುರಿಯತ್ತ ಕೊಂಡೊಯ್ಯುವಂತೆ WOCL ಈ ಸ್ಪರ್ಧಾತ್ಮಕ ಮನೋಭಾವಕ್ಕೆ ಮತ್ತಷ್ಟು ಉತ್ಸಾಹ ತುಂಬಲಿದೆ.

ಭಾಗವಹಿಸಲು ಎಲ್ಲ ವಿದ್ಯಾರ್ಥಿಗಳಿಗೂ ಮುಕ್ತ ಅವಕಾಶವಿದ್ದು, ಸಾಮಾನ್ಯ ಪಾರ್ಕ್ ಪ್ರವೇಶ ಶುಲ್ಕವನ್ನು ಹೊರತುಪಡಿಸಿ ಯಾವುದೇ ಹೆಚ್ಚುವರಿ ಭಾಗವಹಿಸುವಿಕೆ ಶುಲ್ಕವಿರುವುದಿಲ್ಲ. ಪಾರ್ಕ್‌ಗೆ ಪ್ರವೇಶಿಸಲು ವಿದ್ಯಾರ್ಥಿಗಳು ಮಾನ್ಯವಾದ ಕಾಲೇಜು ಗುರುತಿನ ಚೀಟಿಯನ್ನು ಹೊಂದಿರಬೇಕು. ಕಾಲೇಜು ಗುರುತಿನ ಚೀಟಿ ಹೊಂದಿರುವ ವಿದ್ಯಾರ್ಥಿಗಳಿಗೆ ಸಾಮಾನ್ಯ ಪಾರ್ಕ್ ಪ್ರವೇಶ ಶುಲ್ಕದ ಮೇಲೆ 30% ರಿಯಾಯಿತಿ ಕೂಡ ದೊರೆಯಲಿದೆ. WOCLಗೆ ನೋಂದಣಿ ಪ್ರಕ್ರಿಯೆ ಪಾರ್ಕ್‌ನಲ್ಲಿಯೇ ನಡೆಯಲಿದ್ದು, ವಿದ್ಯಾರ್ಥಿಗಳು ವೈಯಕ್ತಿಕವಾಗಿ ಅಥವಾ ಗುಂಪಿನೊಂದಿಗೆ ಭಾಗವಹಿಸುವ ಆಯ್ಕೆಯನ್ನು ಹೊಂದಿರುತ್ತಾರೆ. ಇದರ ಜೊತೆಗೆ, ಪಾರ್ಕ್‌ಗೆ ಪ್ರವೇಶಿಸುವುದಕ್ಕೂ ಸ್ಕೋರ್‌ಬೋರ್ಡ್‌ನಲ್ಲಿ ಅಂಕಗಳು ಸೇರ್ಪಡೆಯಾಗಲಿದ್ದು, ಇದರಿಂದ ಗೆದ್ದ ಸವಾಲುಗಳು ಮಾತ್ರವಲ್ಲದೆ ಪ್ರತಿ ಭೇಟಿಯೂ ಮಹತ್ವ ಪಡೆಯಲಿದೆ.

ಬೆಂಗಳೂರಿನಲ್ಲಿ ನಾಲ್ಕು ವಿಭಿನ್ನ ಸವಾಲುಗಳನ್ನು ಆಯೋಜಿಸಲಾಗಿದ್ದು, ಪ್ರತಿಯೊಂದು ಸವಾಲು ವೇಗ, ನಿಖರತೆ ಮತ್ತು ರೋಮಾಂಚನದ ವಿಭಿನ್ನ ಕೌಶಲ್ಯಗಳನ್ನು ಪರೀಕ್ಷಿಸಲಿದೆ. ● ವಂಡರ್‌ಲಾ ಪಜಲ್ ಚಾಲೆಂಜ್ – ನಿಗದಿತ ಸಮಯದೊಳಗೆ ಪಜಲ್‌ ಪೂರ್ಣಗೊಳಿಸಲು ವಿದ್ಯಾರ್ಥಿಗಳು ಪರಸ್ಪರ ಸ್ಪರ್ಧಿಸಲಿದ್ದಾರೆ. ● ಪೆನ್ಸಿಲ್ ಮಸ್ಟ್ಯಾಶ್ – ವಿದ್ಯಾರ್ಥಿಗಳು ಮೇಲಿನ ತುಟಿಯ ಮೇಲೆ ಪೆನ್ಸಿಲ್‌ ಇರಿಸಿ ಬ್ಯಾಲೆನ್ಸ್ ಮಾಡುತ್ತಾ ನಡೆದು, ಕೈಗಳನ್ನು ಬಳಸದೆ ಅದನ್ನು ಬಾಟಲಿಯೊಳಗೆ ಹಾಕಬೇಕು. ಗೆಲುವು ಸಾಧಿಸಲು 60 ಸೆಕೆಂಡುಗಳ ಸಮಯಾವಕಾಶವಿರಲಿದೆ. ● ಜೈಂಟ್ ಜೆಂಗಾ ಚಾಲೆಂಜ್– ನಿಗದಿತ ಸಮಯದಲ್ಲಿ ವಿದ್ಯಾರ್ಥಿಗಳು ಬ್ಲಾಕ್‌ಗಳನ್ನು ಎಳೆದು ಒಂದರ ಮೇಲೊಂದು ಜೋಡಿಸಿ, ಗೋಪುರವು ಬೀಳದಂತೆ ನಿಲ್ಲಿಸುವ ಸವಾಲನ್ನು ಸ್ವೀಕರಿಸಲಿದ್ದಾರೆ. ● ಆಕ್ವಾ ಟ್ಯೂಬ್ ರೇಸ್ – ಫ್ಲೋಟ್‌ನಲ್ಲಿ ಅಲೆಗಳ ಮೇಲೆ ಸವಾರಿ ಮಾಡುತ್ತಾ, ನಿಗದಿಪಡಿಸಿದ ಧ್ವಜವನ್ನು ಪಡೆದು ಆರಂಭದ ಸ್ಥಳಕ್ಕೆ ವೇಗವಾಗಿ ಮರಳಬೇಕು.

ಪ್ರತಿ ಗುರುವಾರ ಪಾರ್ಕ್‌ನಾದ್ಯಂತ ಟ್ರೆಷರ್ ಹಂಟ್‌ ಆಯೋಜಿಸಲಾಗುತ್ತಿದ್ದು, ಸ್ಪರ್ಧೆಯ ಉತ್ಸಾಹ ಇನ್ನಷ್ಟು ಹೆಚ್ಚಲಿದೆ. ವಂಡರ್‌ಲಾದ ಡಿಜಿಟಲ್ ಪ್ಲಾಟ್‌ಫಾರ್ಮ್‌ ಮೂಲಕ ಸಕ್ರಿಯಗೊಳಿಸಲಾದ ವಿಶೇಷ ಮೈಕ್ರೋಸೈಟ್‌ನಲ್ಲಿ ಲೈವ್ ಸ್ಕೋರ್‌ಬೋರ್ಡ್‌ ಲಭ್ಯವಿರಲಿದೆ. ಎಲ್ಲಾ ಚಟುವಟಿಕೆಗಳಲ್ಲಿ ಗಳಿಸಿದ ಪ್ರತಿಯೊಂದು ಅಂಕವೂ ನೈಜ ಸಮಯದಲ್ಲಿ ಅಪ್‌ಡೇಟ್ ಆಗಲಿದ್ದು, ಇಡೀ ಋತುವಿನಾದ್ಯಂತ ನಡೆಯುವ ನಗರದ ಪೈಪೋಟಿಯಲ್ಲಿ ತಮ್ಮ ಕಾಲೇಜಿನ ಸ್ಥಾನಮಾನವನ್ನು ವಿದ್ಯಾರ್ಥಿಗಳು ಸ್ಪಷ್ಟವಾಗಿ ತಿಳಿದುಕೊಳ್ಳಲು ಇದು ಅನುವು ಮಾಡಿಕೊಡಲಿದೆ.  ಜೊತೆಗೆ ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ₹5,000 ನಗದು ಬಹುಮಾನ ಗೆಲ್ಲುವ ಅವಕಾಶವೂ ಇರಲಿದೆ.

ವಿದ್ಯಾರ್ಥಿಗಳು ‘ಕಾಲೇಜ್ ಕ್ರಿಯೇಟರ್ ಚಾಲೆಂಜ್’ನಲ್ಲೂ ಭಾಗವಹಿಸಬಹುದು. ವಂಡರ್‌ಲಾದಲ್ಲಿ ತಮ್ಮ ಅನುಭವವನ್ನು ಒಳಗೊಂಡ ರೀಲ್‌ ಅನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ, @wonderla_in ಅನ್ನು ಟ್ಯಾಗ್ ಮಾಡುವುದರ ಜೊತೆಗೆ #WonderlaOffCampus ಹ್ಯಾಶ್‌ಟ್ಯಾಗ್‌ ಬಳಸಬೇಕು. ರೀಲ್‌ನ ಗುಣಮಟ್ಟ ಮತ್ತು ಸೃಜನಶೀಲತೆಯ ಆಧಾರದ ಮೇಲೆ ವಿಜೇತರನ್ನು ಆಯ್ಕೆ ಮಾಡಲಾಗುತ್ತಿದ್ದು, iPhone 17 Pro Max ಗೆಲ್ಲುವ ಅವಕಾಶದ ಜೊತೆಗೆ ಪ್ರತಿ ವಾರ ಹೆಡ್‌ಫೋನ್‌ಗಳನ್ನು ಬಹುಮಾನವಾಗಿ ಗೆಲ್ಲುವ ಅವಕಾಶವೂ ಇರಲಿದೆ. (ನಿಯಮ ಮತ್ತು ಷರತ್ತುಗಳು ಅನ್ವಯಿಸುತ್ತವೆ.)

ಅಭಿಯಾನದ ಕುರಿತು ವಂಡರ್‌ಲಾ ಹಾಲಿಡೇಸ್‌ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ (COO) ಧೀರನ್‌ ಚೌಧರಿ , “ವಂಡರ್‌ಲಾ ಆಫ್ ಕ್ಯಾಂಪಸ್‌ ಮೂಲಕ ಕಾಲೇಜು ವಿದ್ಯಾರ್ಥಿಗಳನ್ನು ಕೇವಲ ಪಾರ್ಕ್‌ಗೆ ಭೇಟಿ ನೀಡುವವರಾಗಿ ಅಲ್ಲದೆ, ಇನ್ನೂ ದೊಡ್ಡದಾದ ಒಂದು ಅನುಭವದ ಸಕ್ರಿಯ ಭಾಗಿಗಳಾಗಿ  ಕರೆತರುವುದು ನಮ್ಮ ಉದ್ದೇಶವಾಗಿದೆ.  ಪ್ರತಿದಿನದ ಸವಾಲುಗಳು, ನೈಜ ಸ್ಪರ್ಧೆ ಮತ್ತು ಇಡೀ ಋತುವಿನಾದ್ಯಂತ ಪ್ರತಿಯೊಂದು ಕಾಲೇಜನ್ನೂ ಸ್ಪರ್ಧೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ಲೀಡರ್‌ಬೋರ್ಡ್‌ ಇದರ ಪ್ರಮುಖ ಆಕರ್ಷಣೆಗಳಾಗಿವೆ. ಯುವ ಭಾರತಕ್ಕೆ ಭಾಗವಹಿಸಲು, ಸ್ಪರ್ಧಿಸಲು ಮತ್ತು ಪ್ರತಿಯೊಂದು ರೈಡ್‌ ಹಾಗೂ ಪ್ರತಿಯೊಂದು ಸವಾಲಿನಲ್ಲೂ ತಮ್ಮ ಕಾಲೇಜಿನ ಹೆಮ್ಮೆಯನ್ನು ವ್ಯಕ್ತಪಡಿಸಲು ಒಂದು ಕಾರಣವನ್ನು ನೀಡುವುದೇ ಇದರ ಉದ್ದೇಶ.” ಎಂದು ಹೇಳಿದರು.

ವಂಡರ್‌ಲಾ ಆಫ್ ಕ್ಯಾಂಪಸ್‌ ಇದೀಗ ವಂಡರ್‌ಲಾ ಬೆಂಗಳೂರಿನಲ್ಲಿ ಆರಂಭವಾಗಿದ್ದು, 2026ರ ಸೆಪ್ಟೆಂಬರ್‌ 11ರವರೆಗೆ ಪ್ರತಿದಿನ ವಿವಿಧ ಸ್ಪರ್ಧೆಗಳು ನಡೆಯಲಿವೆ. ವಿದ್ಯಾರ್ಥಿಗಳು ಪಾರ್ಕ್‌ನಲ್ಲಿನ ಚಟುವಟಿಕೆಗಳ ವೇಳಾಪಟ್ಟಿಯನ್ನು ಪರಿಶೀಲಿಸುವುದರ ಜೊತೆಗೆ, ಲೈವ್‌ ಅಂಕಪಟ್ಟಿ ಮತ್ತು ಸ್ಪರ್ಧೆಯಲ್ಲಿನ ತಮ್ಮ ಕಾಲೇಜಿನ ಸ್ಥಾನವನ್ನು offcampus.wonderla.com ನಲ್ಲಿ ವೀಕ್ಷಿಸಬಹುದು.

Related Posts

Leave a Reply

Your email address will not be published. Required fields are marked *