Thursday, September 03, 2026
Menu

ಚಿತ್ತಾಪುರದಲ್ಲಿ ರಸ್ತೆ ಅಪಘಾತಕ್ಕೆ ತಾಯಿ ಮಗು ಬಲಿ

ಕಲಬುರಗಿ ಜಿಲ್ಲೆಯ ಚಿತ್ತಾಪುರ ವಾಡಿ ಪಟ್ಟಣದ ಹೊರ ವಲಯದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ತಾಯಿ ಮತ್ತು ಮೂರು ತಿಂಗಳ ಮಗು ಮೃತಪಟ್ಟಿದ್ದಾರೆ.  ಆಟೋಗೆ ಲಾರಿ ಡಿಕ್ಕಿಯಾಗಿ ಈ ದುರಂತ ನಡೆದಿದ್ದು, ಶರಣಮ್ಮ (30) ಮತ್ತು ಆಕೆಯ ಮೂರು ತಿಂಗಳ ಮಗು ಸ್ಥಳದಲ್ಲೇ ಅಸು ನೀಗಿದ್ದಾರೆ.

ವಾಡಿ ಪಟ್ಟಣಕ್ಕೆ ಬರುತ್ತಿದ್ದಾಗ ಆಟೋಗೆ ಲಾರಿ ಡಿಕ್ಕಿಯಾಗಿದೆ, ಶರಣಮ್ಮರ ಅತ್ತೆ ಸಾಬಮ್ಮ, ಆಟೋ ಚಾಲಕ ಖಾಜಾ ಪಟೇಲ್‌ ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Posts

Leave a Reply

Your email address will not be published. Required fields are marked *