Menu

ಕೆಪಿಎಸ್ಸಿ ಪರೀಕ್ಷೆ ಬರೆಯಲು ಭಾಲ್ಕಿಯಿಂದ ಬೆಂಗಳೂರಿಗೆ: ಮಧ್ಯವರ್ತಿಯಾಗಿ ಕೋಟ್ಯಾಧಿಪತಿಯಾದ ಕನ್ನಾಳೆ ಬಂಧನ

ಕೆಪಿಎಸ್ಸಿಯಿಂದ ಪಶು ವೈದ್ಯಾಧಿಕಾರಿಗಳ ನೇಮಕ ಅಕ್ರಮ ಪ್ರಕರಣ ಸಂಬಂಧ ಮಧ್ಯವರ್ತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಬೀದರ್‌ನ ಭಾಲ್ಕಿಯ ಬಸವರಾಜ ಕನ್ನಾಳೆ ಎಂಬಾತನನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.

ಕೆಪಿಎಸ್‌ಸಿ ಪರೀಕ್ಷೆ ಬರೆಯಲು ಭಾಲ್ಕಿಯಿಂದ ಬೆಂಗಳೂರಿಗೆ ಬಂದಿಳಿದಿದ್ದ ಬಸವರಾಜ್ ಕನ್ನಾಳೆ ಪರೀಕ್ಷೆ ಪಾಸಾಗದೆ ಕೋಟ್ಯಾಧಿಪತಿಯಾಗಿರುವುದು ಪತ್ತೆಯಾಗಿದೆ. ಬಿಜೆಪಿ, ಕಾಂಗ್ರೆಸ್ ನಾಯಕರ ಜೊತೆ ಒಟನಾಟ ಇರಿಸಿಕೊಂಡು ಮಧ್ಯವರ್ತಿ ಕೆಲಸ ಪ್ರಾರಂಭ ಮಾಡಿದ್ದಾನೆ.

ರಾಜಕೀಯ ನಾಯಕರ ಜೊತೆ ಇರುವ ಪೋಟೊ ತೋರಿಸಿ ಆತ ಪರೀಕ್ಷಾರ್ಥಿಗಳನ್ನು ಬಲೆಗೆ ಬೀಳಿಸುತ್ತಿದ್ದ ಎನ್ನಲಾಗಿದೆ. ಬೆಂಗಳೂರಿನಲ್ಲಿ ಸ್ವಂತ ಮನೆ, ಭಾಲ್ಕಿ ಪಟ್ಟಣದಲ್ಲಿ ಬೃಹತ್ ನಿವಾಸ,ಕೋಟ್ಯಂತರ ಮೌಲ್ಯದ ಜಮೀನು ಖರೀದಿ ಮಾಡಿದ್ದಾನೆ ಎಂದು ಹೇಳಲಾಗಿದೆ.

ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಪರೀಕ್ಷಾರ್ಥಿಗಳಿಂದ ಹಣ ಪಡೆದುಕೊಂಡು ಪ್ರಶ್ನೆಪತ್ರಿಕೆ ಸೋರಿಕೆ ಆರೋಪಿ ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್ ಕನ್ನಾಳೆ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಗ್ಯಾನೇಂದ್ರ ಕುಮಾರ್ ಜೊತೆ 12 ಪರೀಕ್ಷಾರ್ಥಗಳ ಜೊತೆ ಸಂಪರ್ಕ ಹೊಂದಿದ್ದ. ಸಿಐಡಿ ಪೊಲೀಸರು ತನಿಖೆ ಮಾಡಿದ ಬಳಿಕಇನ್ನಷ್ಟು ವಿಚಾರಗಳು ಹೊರ ಬರಲಿದೆ.

Related Posts

Leave a Reply

Your email address will not be published. Required fields are marked *