Menu

ರಾಜ್ಯದಲ್ಲಿ ಡೈರಿಯೇತರ ಪನೀರ್‌ಗೆ ಒಂದು ವರ್ಷ ನಿಷೇಧ

ರಾಜ್ಯದ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಡೈರಿಯೇತರ ಕೃತಕ ಪನೀರ್‌ ಬಳಕೆಯಾಗುತ್ತಿರುವ ಆರೋಪ ಕೇಳಿ ಬಂದ ಬಳಿಕ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ಆ ಪನೀರ್‌ಗೆ ಒಂದು ವರ್ಷ ನಿಷೇಧ ಹೇರಿ ಅಧಿಕೃತ ಆದೇಶ ಹೊರಡಿಸಿದೆ.

ಆಹಾರ ನಿಯಂತ್ರಣ ಕಾಯ್ದೆಯನ್ನು ಉಲ್ಲಂಘಿಸಿ ಡೈರಿಯೇತರ ಪನೀರ್‌ ಮಾರಾಟ ಮಾಡುವವರ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಆಹಾರ ಸುರಕ್ಷತಾ ನಿಯಮಗಳ ವ್ಯಾಪಕ ಉಲ್ಲಂಘನೆ ಮತ್ತು ಸಾರ್ವಜನಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವುದರ ಕುರಿತು ಕಳವಳ ವ್ಯಕ್ತಪಡಿಸಿ ಈ ನಿಷೇಧ ಜಾರಿಗೊಳಿಸಲಾಗಿದೆ.

ಡೈರಿಯೇತರ ಪನೀರ್‌ ಕೃತಕವಾಗಿದ್ದು, ಹಾಲು ಬದಲಿಗೆ ವೆಜಿಟೇಬಲ್ ಫ್ಯಾಟ್ ಪಾಮ್ ಆಯಿಲ್, ಹಾಲಿನ ಪುಡಿ, ಸ್ಟಾರ್ಚ್ ಮತ್ತು ಎಮಲ್ಸಿಫೈಯರ್‌ಗಳನ್ನು ಬಳಸಲಾಗುತ್ತದೆ. ಅಸಲಿ ಪನೀರ್‌ ರೀತಿ ಕಾಣುವ ಜೊತೆಗೆ ಅದೇ ವಿನ್ಯಾಸ ಮತ್ತು ರುಚಿ ಬರುವಂತೆ ತಯಾರಿಸಲಾಗುತ್ತದೆ. ಇದರ ಉತ್ಪಾದನಾ ವೆಚ್ಚ ಅತ್ಯಂತ ಕಡಿಮೆ. ಅಸಲಿ ಪನೀರ್‌ನಲ್ಲಿ  ನೈಸರ್ಗಿಕ ಹಾಲಿನ ಕೊಬ್ಬು ಇರುತ್ತದೆ. ಆದರೆ ಕೃತಕ ಪನೀರ್‌ ಪಾಮ್ ಆಯಿಲ್ ಬಳಸಿ ತಯಾರಿಸಲಾಗುತ್ತದೆ. ಇದರಿಂದ ಗ್ರಾಹಕರ ಆರೋಗ್ಯಕ್ಕೆ ಹಾನಿ ಉಂಟಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳುತ್ತಾರೆ.  ಈ ಹಿಂದೆ ಮಹಾರಾಷ್ಟ್ರದಲ್ಲಿ ಡೈರಿಯೇತರ ಪನೀರ್‌ಗೆ ಒಂದು ವರ್ಷ ನಿಷೇಧ ಹೇರಲಾಗಿದೆ.

Related Posts

Leave a Reply

Your email address will not be published. Required fields are marked *