Menu

ಡಿಜಿಟಲ್ ಅರೆಸ್ಟ್ ಪಿಡುಗಿಗೆ ಆರ್‌ಬಿಐ ಸರ್ಜರಿ

Cyber fraud

ಈಗ ಎಲ್ಲ ಕಡೆ ಡಿಜಿಟಲರ್ ಅರೆಸ್ಟ್ ದೂರುಗಳು ಕೇಳಿಬರುತ್ತಿದೆ. ಇದಕ್ಕೆ ಸೂಕ್ತ ಕಾನೂನು ಅಗತ್ಯ. ದೇಶಾದ್ಯಂತ ಡಿಜಿಟಲ್ ಅರೆಸ್ಟ್ ಮೂಲಕ ಸಾವಿರಾರು ಜನ ಹಣ ಕಳೆದುಕೊಳ್ಳುತ್ತಿದ್ದು ಒಂದು ತಿಂಗಳಲ್ಲಿ ಆರ್‌ಬಿಐ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿ ಎಲ್ಲ ಬ್ಯಾಂಕ್‌ಗಳು ಮತ್ತು ನ್ಯಾಯಾಂಗ ಹಾಗೂ ಗೃಹ ಇಲಾಖೆಗೆ ಕಳುಹಿಸಿಕೊಡಬೇಕು.

ಡಿಜಿಟಲ್ ಅರೆಸ್ಟ್ ಮೂಲಕ ಹಣ ಒಂದು ಖಾತೆಯಿಂದ ಮತ್ತೊಂದು ಖಾತೆ ಜಮಾ ಆಗುವುದಕ್ಕೆ ಮೊದಲೇ ಹಣಕಾಸು ವ್ಯವಹಾರ ನಡೆಯದಂತೆ ಅಕ್ರಮ ಖಾತೆಯ ಎಲ್ಲ ಹಣವನ್ನು ಕೂಡಲೇ ಜಪ್ತಿ ಮಾಡುವ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಕ್ಕೆ ಬೇಕಾದ ನಿಯಮಗಳನ್ನು ಆರ್‌ಬಿಐ ರಚಿಸಿ ಕೂಡಲೇ ಜಾರಿಗೆ ಕೊಡತಕ್ಕದ್ದು. ಕಳೆದ ಎರಡು ವರ್ಷಗಳಲ್ಲಿ ಒಟ್ಟು ೧೯೮೨೯೮ ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ ೩೬೨೯೦ ಪ್ರಕರಣಗಳ ೧೮.೦೫ ಕೋಟಿ ರೂಗಳನ್ನು ಕೈಬದಲಾಯಿಸುವುದಕ್ಕೆ ಮೊದಲೇ ಜಪ್ತಿ ಮಾಡಿ ನೊಂದ ಗ್ರಾಹಕರಿಗೆ ಹಿಂತಿರುಗಿಸಿದ ಘಟನೆಗಳು ನಡೆದಿವೆ. ಎಲ್ಲ ಪ್ರಕರಣಗಳಲ್ಲೂ ಇದೇರೀತಿ ಕ್ರಮ ಕೈಗೊಳ್ಳುವಂತೆ ವ್ಯವಸ್ಥೆ ಮಾಡಿ ಡಿಜಿಟಲ್ ಅರೆಸ್ಟ್ ಸಂಪೂರ್ಣವಾಗಿ ನಿಲ್ಲುವಂತೆ ಮಾಡಬೇಕು. ಇಂಥ ಅಕ್ರಮಗಳ ವಾಸನೆ ಬಂದ ಕೂಡಲೇ ಬ್ಯಾಂಕ್ ಅಧಿಕಾರಿಗಳು ಮತ್ತು ಗ್ರಾಹಕರನ್ನು ಎಚ್ಚರಿಸುವ ಅಲಾರಾಂ ವ್ಯವಸ್ಥೆ ಅಗತ್ಯ.

ಸೈಬರ್ ಅಪರಾಧಗಳಲ್ಲಿ ತೊಡಗಿಸಿಕೊಂಡ ಬ್ಯಾಂಕ್ ಸಿಬ್ಬಂದಿಯ ಮೇಲೆ ಕಠಿಣ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ. ಇದಕ್ಕೆ ಸೂಕ್ತ ನಿಯಮಗಳನ್ನು ರಚಿಸಲು ಬ್ಯಾಂಕ್‌ಗಳಿಗೆ ಆರ್‌ಬಿಐ ನೆರವು ನೀಡಬೇಕು. ಈ ಸೈಬರ್ ಅಪರಾಧಗಳ ಹಿಮದೆ ಅಂತಾರಾಷ್ಟ್ರೀಯ ಗ್ಯಾಂಗ್‌ಗಳು ಹಿಂಬದಿಯಲ್ಲಿರುವುದು ಬಹಿರಂಗ ಸತ್ಯ. ಅದರಿಂದ ಈ ಜಾಲ ಆಳವಾಗಿ ಬೇರೂರುವುದನ್ನು ತಪ್ಪಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು. ನಾವು ಡಿಜಿಟಲ್ ವ್ಯವಹಾರ ಹೆಚ್ಚಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಯಿತು. ಅದರಿಂದ ಬ್ಯಾಂಕ್‌ಗಳಿಗೆ ಜನ ಹೋಗುವುದು ಕಡಿಮೆಯಾಗಿ ಚಿಲ್ಲರೆ ಸಮಸ್ಯೆ ಅಧಿಕಗೊಳ್ಳಲಿಲ್ಲ. ಆದರೆ ಡಿಜಿಟಲ್ ಅಪರಾಧಗಳ ಸಂಖ್ಯೆ ಅಧಿಕಗೊಂಡಿದೆ. ಆಧುನಿಕ ತಂತ್ರಜ್ಞಾನ ಬ್ಯಾಂಕ್ ಅಧಿಕಾರಿಗಳಿಗೆ ಕೈಗೆಟುವ ಹಾಗೆ ಸೂಕ್ತ ತರಬೇತಿ ನೀಡುವುದು ಅಗತ್ಯ.

ಆಧುನಿಕ ತಂತ್ರಜ್ಞಾನಕ್ಕೆ ಹೊಂದಿಕೊಳ್ಳುವುದಕ್ಕೆ ಮೊದಲೇ ಅಕ್ರಮ ನಡೆಸುವವರು ತಮ್ಮ ಕೈಚಳಕದಿಂದ ಅಮಾಯಕರ ಖಾತೆಯಲ್ಲಿರುವ ಎಲ್ಲ ಹಣವನ್ನು ಒಂದೇ ಬಾರಿ ಕಬಳಿಸುವ ಹುನ್ನಾರ ನಡೆಸುವ ಸಮಾಜಘಾತುಕರು ಎಲ್ಲ ಕಡೆ ಇದ್ದಾರೆ. ಆಧುನಿಕ ತಂತ್ರಜ್ಞಾನ ದುರುಪಯೋಗವಾಗುವುದನ್ನು ಮೊದಲು ತಪ್ಪಿಸಬೇಕು. ಅದಕ್ಕೆ ಪ್ರತಿಯೊಂದು ಬ್ಯಾಂಕ್ ವಿಚಕ್ಷಣ ದಳದ ಸಂಖ್ಯೆ ಹೆಚ್ಚಿಸುವುದಲ್ಲದೆ ಅವರಿಗೆ ಹೆಚ್ಚಿನ ಅಧಿಕಾರ ನೀಡಬೇಕು.ಕಠಿಣ ಕ್ರಮಗಳನ್ನು ಕೂಡಲೇ ಕೈಗೊಳ್ಳದೆ ಹೋದಲ್ಲಿ ಹಳೆಯ ವಿಧಾನಕ್ಕೆ ಅನಿವಾರ್ಯವಾಗಿ ಹಿಂತಿರುವುದು ಅನಿವಾರ್ಯವಾಗಲಿದೆ. ಈಗ ಕೇಂದ್ರ ಸರ್ಕಾರ ಯುಪಿಐ ಡಿಜಿಟಲ್ ವ್ಯವಹಾರಕ್ಕೆ ಶುಲ್ಕ ವಿಧಿಸಲು ಮುಂದಾಗಿದೆ. ಹೀಗಿರುವಾಗ ಡಿಜಿಟಲ್ ಅರೆಸ್ಟ್ ನಿಲ್ಲಿಸದೇ ಹೋದಲ್ಲಿ ಸರ್ಕಾರವೇ ಅದಕ್ಕೆ ಕುಮ್ಮಕ್ಕು ನೀಡಿದಂತಾಗುತ್ತದೆ. ಇದನ್ನು ನಿಲ್ಲಿಸುವುದು ಆರ್‌ಬಿಐ ಕರ್ತವ್ಯವೂ ಹೌದು.

ಬ್ಯಾಂಕ್ ನಲ್ಲಿಟ್ಟಿರುವ ಹಣಕ್ಕೆ ಆಯಾ ಬ್ಯಾಂಕ್ ಹೊಣೆ ಹೊರುವುದು ಅನಿವಾರ್ಯ. ಡಿಜಿಟಲ್ ಅರೆಸ್ಟ್ ಮೂಲಕ ಹಣ ವರ್ಗಾವಣೆ ಗೊಂಡಲ್ಲಿ ಬ್ಯಾಂಕ್ ಹೊಣೆ ಅಲ್ಲಗಳೆಯಲು ಬರುವುದಿಲ್ಲ. ಬ್ಯಾಂಕಿಂಗ್ ವ್ಯವಸ್ಥೆಯಲ್ಲೂ ಯಾವುದೇ ಲೋಪ ಕಂಡು ಬಂದಲ್ಲಿ ಅದಕ್ಕೆ ಪರಿಹಾರ ಕಂಡು ಹಿಡಿಯುವುದು ಆರ್‌ಬಿಐ ಕೆಲಸ. ಸುಪ್ರೀಂ ಕೋರ್ಟ್ ಆರ್‌ಬಿಐಗೆ ತನ್ನ ಕರ್ತವ್ಯವನ್ನು ನಿರ್ವಹಿಸುವಂತೆ ಎಚ್ಚರಿಕೆ ನೀಡಿದೆ.

ಇದರಿಂದ ಮುಂದಿನ ದಿನಗಳಲ್ಲಿ ಬ್ಯಾಂಕ್ ವ್ಯವಹಾರಗಳಲ್ಲಿ ಈ ರೀತಿ ಅಕ್ರಮ ನಡೆಸಲು ಸಾಧ್ಯವಾಗುವುದಿಲ್ಲ. ಸೈಬರ್ ದೂರು ಬಂದ ಕೂಡಲೇ ಇಡೀ ಬ್ಯಾಂಕ್ ಅಕ್ರಮಗಳನ್ನು ಸದೆಬಡಿಯಲು ಸಿದ್ಧವಾಗಬೇಕು. ಶರವೇಗದಲ್ಲಿ ಅಕ್ರಮ ಖಾತೆಯನ್ನು ಪತ್ತೆ ಹಚ್ಚಿ ಹಣ ಕೈಬಿಟ್ಟು ಹೋಗುವುದನ್ನು ತಪ್ಪಿಸಲು ಆಧುನಿಕ ತಂತ್ರ ಜ್ಞಾನ ಅಗತ್ಯ.

Related Posts

Leave a Reply

Your email address will not be published. Required fields are marked *