Menu

ಬಿಎಂಟಿಸಿ ಕಂಡಕ್ಟರ್‌ ಪರ್ಸ್‌ ಎಗರಿಸಿದ ತಮಿಳ್ನಾಡು ಮಹಿಳೆ

ಬಿಎಂಟಿಸಿ ಬಸ್‌ನಲ್ಲಿ ಮಹಿಳೆಯೊಬ್ಬಳು ಕಂಡಕ್ಟರ್ ಬ್ಯಾಗ್‌ ಎಗರಿಸಿದ್ದು, ಸಮಯಪ್ರಜ್ಞೆಯಿಂದ ಬಸ್‌ನ ಬಾಗಿಲು ಮುಚ್ಚಿಸಿ ಆಕೆಯನ್ನು ಕಂಡಕ್ಟರ್‌ ಹಿಡಿದಿದ್ದಾರೆ. ತಮಿಳುನಾಡು ಮೂಲದ ಈ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಘಟನೆಯವೀಡಿಯೊ ವೈರಲ್ ಆಗಿದೆ.

ಬಿಎಂಟಿಸಿ ಬಸ್‍ ಬಸ್​ ರಶ್​ ಇದ್ದ ಕಾರಣ ಆಕೆ ಹತ್ತಿದ್ದಾಳೆ.ಬಸ್​ ಕಂಡಕ್ಟರ್ ಬ್ಯಾಗ್‌ ಎಗರಿಸಿ ತಾನು ತಂದಿದ್ದ ಬ್ಯಾಗ್​ನಲ್ಲಿ ಅಡಗಿಸಿಟ್ಟುಕೊಂಡಿದ್ದಾಳೆ. ಅಲ್ಲಿದ್ದ ಸಿಸಿಟಿವಿಯಲ್ಲಿ ಎಲ್ಲವೂ ರೆಕಾರ್ಡ್​ ಆಗಿರುತ್ತದೆ ಎನ್ನುವುದು ಆಕೆಗೆ ತಿಳಿದಿರಲಿಲ್ಲ.

ಅವಸರವಸರವಾಗಿ ಮುಂದಿನ ಸ್ಟಾಪ್​ನಲ್ಲಿಯೇ ಇಳಿಯುವುದಕ್ಕೆ ಮುಂದಾಗಿದ್ದು, ಬ್ಯಾಗ್​ ಕಳವು ಆಗಿರುವುದು ತಿಳಿದು ಕಂಡಕ್ಟರ್‌ ಬಸ್‍‌ನ ಡೋರ್ ಕ್ಲೋಸ್ ಮಾಡಿಸಿದ್ದಾರೆ. ಅಮಾಯಕಿಯಂತೆ ಏನೂ ಗೊತ್ತಿಲ್ಲದಂತೆ ವರ್ತಿಸುತ್ತಿದ್ದ ಆಕೆ ಡೋರ್​ ಒಪನ್​ ಮಾಡುವಂತೆ ಚಾಲಕನಿಗೆ ಅಂಗಲಾಚಿದ್ದಾಳೆ. ಕಂಡಕ್ಟರ್‌ ಪೊಲೀಸರನ್ನು ಕರೆಸಿದ್ದು, ಮಹಿಳಾ ಪೊಲೀಸ್‌ ಬಂದು ಮಹಿಳೆಯ ಬ್ಯಾಗ ಚೆಕ್‌ ಮಾಡಿದ್ದಾರೆ. ಆಗ ಆಕೆಯ ಬ್ಯಾಗ್​ ಒಳಗೆ ಕಂಡಕ್ಟರ್​ ಬ್ಯಾಗ್​ ಸಿಕ್ಕಿದೆ. ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ.

Related Posts

Leave a Reply

Your email address will not be published. Required fields are marked *